ಪುಟ:ಪ್ರಜ್ಞಾ ಸ್ವಯಂವರಂ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಾಂಕ] ಪ್ರಜ್ಞಾ ಸ್ವಯಂವರಂ ೨೩ \\/\\/ \ ಡ೦ಭ-ಮಿತ್ರನೆ ! ನಿನ್ನ ವಚನವು ಸತ್ಯವಿರಬಹುದು. ಇರಲಿ, ಉಪಾಯವನ್ನು ಚಿಂತಿಸುವ, (ಬಗ್ಗಿ ನೋಡಿ ಕೈನೀಡಿ ತೋರಿಸುತ್ತ) ಕಂದ|| ಶಿರವಂಬಾಗಿಸಿವಿನಯದ || ವರಮಧುರಾಲಾಪದಿಂದಲೆತರುತಿರ್ಪಾ || ತರುಣನದಾವಂನೊಳೊಡೆ | ಹರಿಭಕ್ತನಮಿತ್ರಶಾಂತನಾ ಕೃತಿ ಕು೯೦ || (ಮೂವರೂ ಕುತೂಹಲರಾಗಿ ನೋಡುವರು. ಶಾಂತನು ಪ್ರವೇಶಿಸುವನು) ಶಾಂತ(ಸಂತೋಷದಿಂದ) ರಾಗಾ ಬೇಹಾಗ್ || ಆದಿತಾಳ || (ಸುಂದರತೆಯಾಂತು) ಶಾಂತಿಯೇ ನಿತ್ಯಂ ಸಕಲಾರ್ಧಕೆ ಸಾಧನವೊ||ಪ|| ಕಾಂ ತಾಕಾರನ ಸಾಕ್ಷಾತ್ಕಾರದ ಸಾಧನವೊ||ಅನು|| ಇರುತಿರೆ ಶಾಂತಿ ನಿರಂತರಸುಖವೆನಿಸುದು ; ದುರಾಗx.ನಿಗ್ರಹಕರವಿದು ಕೆಳ ಸತ್ಯವು || ೧ || ಅವದುಕಾಯುವು ! ಉಳಿವುದುಕೀರ್ತಿಯು | ಇಳಾತಳದೊಳ್ ಸಬ್ಸಿವ ಮೆರೆವುದು || ಶಾಂತಿ | ° | - ಡಂಭ - (ತನ್ನಲ್ಲಿ) ಆಯ ! ಈತನು ಆಕಾರದಲ್ಲಿ ಮಾತ್ರವೇ ಅಲ್ಲ, ನಡೆನುಡಿಗಳಲ್ಲಿಯ ಸೌಮ್ಯನಾಗಿರುವನಲ್ಲದೆ ವಿವೇಕನ ಕಡೆಯವನಂತೆ ಕಾಣು ವನು. ಈತನಿಂದಲೇನಾದರೂ ವಿಷ್ಣುಭಕ್ತನ ವೃತ್ತಾಂತವು ತಿಳಿಯಬಹುದೊ ನೋಡುವೆನು. (ಪ್ರಕಾಶವಾಗಿ) ಮಹಾತ್ಮರಿಗೆ ವಂದನೆ. ಶಾಂತ-ಭೂಸುರರಿಗೆ ಪ್ರತಿವಂದನೆ, ತಾವು ಯಾರು ? ಡಂಭ-ನಾವು ವಿಷ್ಣು ಭಕ್ತರಾಜರ ಸಂದರ್ಶನಾರ್ಥಿಗಳಾಗಿ ಬಂದಿರ ತಕ್ಕವರು. ಶಾಂತ.ವಿಷ್ಣುಭಕ್ತರಾಜರ ವರ್ತಮಾನವನ್ನು ತಿಳಿಯದೆ ಚಿಂತಿಸು ವೆನು,