ಪುಟ:ಪ್ರಜ್ಞಾ ಸ್ವಯಂವರಂ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಂಕ] ಪ್ರಜ್ಞಾ ಸ್ವಯಂಕರ ೪ : * * * ಯುದ್ಧಕ್ಕೆ ನಿಂತಿದ್ದರೆ ಅವರು ಉಳಿಯುತ್ತಿರಲಿಲ್ಲ ಮೋಹರಂಭನೆ ! ಈವರೆಗೆ ಅನುಭವಿಸಿದ ಪರಿಭವವನ್ನು ಅಥವಾ ನವೆಂದೆಣಿಸದೆ ಹೀಗೆ ಹೇಳಿಕೊಳ್ಳುತ್ತಿರುವುದು ಅತ್ಮಸ್ತುತಿಯೆನ್ನಿಸದೆ? ಡಂಭ -ಮಹಾರಾಜನೆ ! ಇದು ಆತ್ಮ ಸ್ತುತಿಯಲ್ಲ, ಇರುಳಿ, ಪ. ಜೈಗೆ ಸ್ವಯಂವರವೆಂದು ಅಗ್ನಪತ್ರಿಕೆ ಬಂದಿರುವುದಷ್ಟೆ ? ಸ್ವಯಂವರಕ್ಕೆ ರಾಜ ಆ ರಾಜಪುತ್ರರೂ ಹೋಗುವುದು ಸಹಜವಾಗಿದೆ. ನೆರೆದ ಸಭಾಮಧ್ಯದಲ್ಲಿ ಸಾರ್ವಭೌಮನಾದ ನಿನ್ನನ್ನೂ ನನ್ನನ್ನೂ ಕಾಮನನ್ನೂ ನೋಡಿದರೆ ಪ್ರಜ್ಞೆಯು ವಿಷ್ಣುಭಕ್ತನನ್ನು ವರಿಸುವಳೆ ? ಇಲ್ಲ ! ಇಲ್ಲ!! ಇಲ್ಲ !!! ಮೋಹ-ಡಂಭನೆ ! ನೆರೆದ ಸಭಾಮಧ್ಯದಲ್ಲಿ ಹೆಂಗಸಿನಿಂದಲೂ ಅವ ಮಾನವನ್ನು ಹೊಂದಬೇಕೆನ್ನುವೆಯಾ ? ಡಂಭ-ಮಹಾರಾಜನ ! ಧೀರರಿಗೆ ಅವಮಾನವೆಂದರೇನು ? ಒಂದು ವೇಳೆ ಏಾರಿಬಂದರೆ ಕೃಷ್ಣನು ರುಕ್ಕಿಣಿಯನ್ನು ಅಪಹರಿಸಿದಂತೆ ಪ್ರಜ್ಞೆಯನ್ನು ಅಪಹರಿಸಬಹುದು ಮೊಸ- # ತನ್ನ | ಕಾಮ, ಕ್ರೋಧ, ಲೋಭ, ರಂಭ ಅಹಂಕಾರ, ಮಾತ್ಸರ್ಯರೆಂಬ ಷಡ್ವರ್ಗಗಳನ್ನೂ ಇವರಿಗೆ ದೊರೆಯಾದ ನನ್ನ ನ್ಯೂ ಜಸಲು ಶಕ್ತರಾದ ಶ೦ಂತ, ವಸ್ತು ವಿಚಾರ, ಸಂತೋಷರಿಂದ ಕೂಡಿ ದ ವಿವೇಕನು ಸಾರ್ವಭೌಮನೆನಿಸುವನು. ಆತನು ಸುಶೀಲೆಯಿಂದ ಪ್ರಜ್ಞೆ ಯನ್ನು ಪಡೆದಿರುವನು, ಆ ಪ್ರಜ್ಞೆಗೆ ಶಾಂತಿ, ದೃತಿ ಎಂಬುವರು ಸಹಚಾರಿ ಸಖಿಯರಾಗಿರುವರು. ಇಂತಹ ಪ್ರಜ್ಞೆ, ನಮ್ಮ ವಖಾಗುವಳೆಂದಾಗಲಿ, ಇಲ್ಲವೆ ಅಪಹರಿಸುವೆನೆಂದಾಗಲಿ ನಮ್ಮ ರಂಭನು ಯೋಚಿಸಿರುವರು ಇರಲಿ, || ಪ್ರಕಾಶ ||