ಪುಟ:ಪ್ರಜ್ಞಾ ಸ್ವಯಂವರಂ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂಲಕ ] ಪ್ರಜ್ಞಾ ಸ್ವಯಂವರಂ ೬೩ • • •, - - - - - - - - • • • • •

  • * * * * * * * * * *F)

ಮಂಗಳಕಾರ್ಯವನ್ನು ನೆರೆವೇರಿಸಿ ಸನ್ಮಾನಿತರಾಗಬೇಕೆಂದು ಪ್ರಾರ್ಥಿಸುವೆನು, ಮೋಹ:-ಎಲೈ ಸಾರ್ವಭೌಮನಾದ ವಿವೇಕ ಮಹಾರಾಜನ ! ಪ್ರಥಮತಃ ನಾವು ನಿನಗೆ ಪ್ರತಿಪಕ್ಷದವರಾಗಿದ್ದುದು ನಿಜಆದರೆ, ಈ ಸಭಾ ಪ್ರವೇಶವಾದಾಗಲೇ--ನಿನ್ನ ಸ೦ದರ್ಶನವಾದಾಗಲೇ,-ನಮ್ಮ ವಿರೋಧಭಾವವು ತಿರೋಧಾನಹೊಂದಿ ನಿನಗೆ ವಿಧೇಯರಾಗುವಂತಹ ಅನಿರ್ವಚನೀಯವಾದದ ಭಾವವೊಂದು ನಮಗುಂಟಾಯಿತು. ಆದುದರಿಂದ ನಾವೆಲ್ಲರೂ ಸ್ವಸಂತೋ ಷದಿಂದಲೇ ನಿನ್ನ ಮಾಂಡಲಿಕತ್ವವನ್ನು ಸಮ್ಮತಿಸುವೆವಲ್ಲದೆ ನಿನ್ನ ಅಜ್ಞಾ ನುಸಾರವಾಗಿ ಮಂಗಳಕಾಯ೯ ದಲ್ಲಿ ನಿನಗೆ ಸಹಾಯಕರಾಗಿಯೇ ಇರುವವು. (ಎಲ್ಲರೂ ಎದ್ದು ನಿಲ್ಲುವರು) ಶತಾನಂದ- ಎಲೈ, ವಿಷ್ಣುಭಕ್ತರಾಜನೆ ಪ್ರಜ್ಞಾಂಬೆಯ ಪಾಣಿ ಗ್ರಹಣಮಾಡು. - ವಿಸ್ಸು-ಅಪ್ಪಣೆ (ಪ್ರಜ್ಞೆಯ ಕೈ ಹಿಡಿಯುವನು. ) ಎಲ್ಲರೂ ಒಟ್ಟಾಗಿ ಪುಷ್ಪಾಂಜಲಬದ್ಧರಾಗಿ ಮಂಗಳವನ್ನು ಹೇಳುವರು. ರಾಗ|| ಸುರಟ|| ರೂಪಕ || (ಶಿಪರೀಶ) ಮಂಗಳಂ ಸರೋಜನೇತ್ರ ಭವತುತೆ ಸದಾ || ರಂಗಕ್ಕೆ ಏಾಂತ ರಂಗಮಂಗಳಾಂಗ ಶ್ರೀರಂಗ || ಪ || ಶರದಿಂದುಕೋಟಿ ಸುಂದರಾನನ ಶರಣರಕ್ಷಣ | ಕರುಣದಿಂ ನವದಂಪತಿಗಳ೦ಪೊರೆ ವು ಸದಾ || ೧ || ತರುಣಾರ್ಕಕೊಟ ಸದೃಶಚರಣಯುಗಳ ಭಾಸುರ | ವರಷ ಶಿಖರನಿಲಯ ಶ್ರೀರಮಾವರ || ಪ ||-|| ಪಪ್ಪಾಂಜಲಿಯನ್ನು ಒಪ್ಪಿಸುವರು. ಪಂಚಮಾಂಕಕ್ಕೆ ಮಂಗಳಂ 长长长长