ಪುಟ:ಪ್ರಜ್ಞಾ ಸ್ವಯಂವರಂ.djvu/೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ್ರಸ್ತಾವನೆ. ಸುಹೃದರೆ:- ಈ ಸನ್ಮಾನಗ್ರಂಥಾವಳಿಯ ಪ್ರಧನ ಪುಸ್ತಕವಾದೆ ತಪತೀಕಲ್ಯಾಣದ ಪ್ರಸ್ತಾವನೆಯಲ್ಲಿಯೂ ಪ್ರಕಟನೆಯಂತೆಯ, ಗ್ರಂಥಾವಳಿಯ ದ್ವಿತೀಯ ಪುಷ್ಟವಾಗಿ ಶ್ಯಮಂತಕೋಪಾಖ್ಯಾನ (ಶ್ರೀಕೃಷ್ಣ ಕಲ್ಯಾಣಮಂಜರಿ) ವನ್ನು ಪ್ರಕಟಿಸಲು ಅವಕಾಶ ತಪ್ಪಿ ಆ ಸ್ಥಾನದಲ್ಲಿ ಈ ಪ್ರಜ್ಞಾ ಸ್ವಯಂವರವು ಪ್ರಕಟ ವಾಗುವಂತಾಯಿತು ನಾಲ್ಕನೆಯ ಸ್ಥಾನದಲ್ಲಿ ಮೇಲೆ ಹೇಳಿದ ಪುಸ್ತಕವು ಪ್ರಕಟವಾಗುವುದು, ಈ ನಾಟಕವು ಸಂಪಾದಿಕೆಯರ ತೀರ್ಥರೂಪರಿಂದ ವಿರಚಿತವಾಗಿ ಈಗ ಸುಮಾರು ೨ ವರ್ಷಗಳಾಗಿರಬಹುದು. ಅಭಿನಯಕ್ಕೆ ಅನುಕೂಲವಾಗು ರತ ಈ ನಾಟಕವು ಅತ್ಯಂತ ಸುಲಭವಾಕ್ಸರಣಿಯಲ್ಲಿ ರಚಿತವಾಗಿದ್ದಿತು, ಈಗ ಇದನ್ನು ಸಂದರ್ಭಾನುಸಾರವಾಗಿ ಪರಿಷ್ಕರಿಸಿ ಪ್ರಚುರಪಡಿಸಲಾಗಿದೆ, ಇದ ವಲ್ಲಿರುವ ಪ್ರತಿಯೊಂದು ಕಂದ, ಪದ, ಹಾಡುಗಳೂ ಅಭಿನಯಕ್ಕೆ ಕೂಡ ಸುಲ ಭವಾಗುವಂತೆ ಹೊಸಗನ್ನಡದ ಭಾಷೆಯಿಂದಲೇ ರಚಿತವಾಗಿರುವುದಲ್ಲದೆ, ಪಾಂಡಿ ತ್ಯಪ್ರಭೆಯನ್ನು ಪ್ರದರ್ಶಿಸುವ ಹಳಗನ್ನಡದ ಪ್ರೌಢಕಳೆಯವುಗಳಲ್ಲವೆಂದು ಇಲ್ಲಿ ಪ್ರತ್ಯೇಕವಾಗಿ ನಾವು ಹೇಳಬೇಕಾಗಿಲ್ಲ, ಈ ಪ್ರಜ್ಞಾ ಸ್ವಯಂವರದ ದ್ವಿತೀಯಾಂಕದಲ್ಲಿರುವ ಚಂಭ ಲೋಳೆ ಇಷ್ಟೆಯರ ಅಕ್ರಮವ್ಯಾಪಾರವನ್ನು ಸಕ್ಕದಾವೃತ್ತಿ ನೋಡುವುದುರಿಂದಲೇ