ಪುಟ:ಪ್ರತಾಪರುದ್ರದೇವ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

>3: ಪೀಠಿಕೆ, 34 =8 ಭಾಷಾಂತರಿಸುಟ್ಟಿರುವ ಗ್ರಂಥಗಳ ನಿಸ್ಸಾರವನ್ನು ಕಂಡು ಸಾಷಾಂತರಿಸುವವರನ್ನು ಹೇಳನಂಗೈಯಲು ; ಯುರೋಪ ಖಂಡದ : ನೇಕ ಭಾಷೆಗಳಿಗೂ, ಭಾಷಾಗ್ರಂಥಗಳಿಗೂ, ಮಾತೃಸ್ಥಾನವಾದ ಇಟಲಿ ದೇಶದಲ್ಲಿ ' ಟ್ಯಾ ಡುರಿ ಟ್ಯಾಟರಿ ' ( Traducttori Lizzlitari) ಅಂದರೆ ಬಾಪಾಂತರಿಸುವವರು ವಿಶ್ವಾಸಘಾತಕರೆಂಬ ಸಾಮ ತಿಯನ್ನು ಹೇಳುವದುಂಟು. ಅದರ ಅಭಿಪ್ರಾಯವೇನೆಂದರೆ..-ಪರಭಾಷೆ ಯ ಉತ್ತಮಗ್ರಂಥಗಳನ್ನು ನೋಡಿ ಅದರಲ್ಲಿ ವಿಶ್ವಾಸವಿಟ್ಟು ಭಾಷಾಂತರಿ ಸಲುಪಕ್ರಮಿಸಿ ಮೂಲಗ್ರಂಧದಲ್ಲಿರತಕ್ಕೆ ಅರ್ಥಾತಿಶಯಗಳನ್ನು ತಮ್ಮ ಭಾಷೆಗೆ ಕಟ್ಟಿಕೊಳ್ಳದೆ ಮಲಗ್ರಂಥದಲ್ಲೇ ಬಿಟ್ಟು, ರಸವಿದ್ದ ಕಡೆಯೇ ರಸ ವೆಲ್ಲವನ್ನು ನಿಲ್ಲಿಸಿ ಅದರ ರಸವನ್ನು ಮಾತ್ರ ತಾವು ಹೊಸದಮಾಡಿಕೊಂಡು ಮೂಲಕೃತಿದತಿಯ ಖ್ಯಾತಿಯನ್ನು ಪ್ರಚುರ್ರಡಿಸುವದಕ್ಕೆ ಬದಲಾಗಿ ಅದ ಕೈ ಕುಂದಕವನ್ನು ತಂದು ವಿಶ್ವಾಸಘಾತುಕರಾಗುವ ರೆನ್ನುವದು. ಆ ಸಾಮ ತಿಯು ರೂಢಿಯಲ್ಲಿದ್ದರೂ ಭಾಷಾಂತರಿಸಲುಪಕ್ರಮಿಸುವ ಪ್ರತಿ ಬನು ಆ ಸಾಮತಿಯನ್ನು ಸುಳ್ಳೆನಿಸಿ ಅದನ್ನು ಹೇಳುವವರ ಬಾಯನ್ನು ಮುಚ್ಚಿಸಬೇಕೆಂಬ ಉದ್ದೇಶದಿಂದಲೇ ಪ್ರಾಯಶಃ ಪ್ರಯತ್ನಿಸುವನು. ಆದರೆ ಆ ಪ್ರಯತ್ನವು ಎಪ್ಪರಮಟ್ಟಿಗೆ ಸಾರ್ಥಕವಾಯಿತು. ಆಗ ಬಹುದೆಂದು ಹೇಳಬೇಕಾದರೆ ಭಾಷಾಂತರಿಸಲ್ಪಡುವ ಎರಡು ಭಾಷೆಗೆ ಳಿಗೂ ಇರುವ ಪರಸ್ಪರ ಅನುಕೂಲ ಅನನುಕೂಲಗಳನ್ನು ಗಣನೆಗೆ ತರದೆ ಹೇಳುವದಕ್ಕಾಗುವದಿಲ್ಲ. ಈ ಸಾಮತಿಯು ಆ ದೇಶದಲ್ಲಿ ವಾಡಿಕೆಗೆ ಬಂದಾಗ ಆ ಜನಗಳಿಗೆ ನಮ್ಮ ಭರತಖಂಡದ ಭಾಷೆಗಳ ವಿಷಯವು, ಪ್ರಕೃತದಲ್ಲಿ ನಮ್ಮ ಕನ್ನಡ ಭಾಷೆಯ ನಡವಳಿಕೆಯು ತಿಳಿದಿತ್ತೆಂದು ಹೇಳುವದಕ್ಕಾಗುವದಿಲ್ಲ. ಆ ಜನ