ಪುಟ:ಪ್ರತಾಪರುದ್ರದೇವ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರತಾಪರುದ್ರದೇವ. vyaho, ವರು. ಉಭಯಪಾರ್ಶ್ವವೂ ಸಮನಾಗಿರುವದು, ಮಧ್ಯದಲ್ಲಿ ನಾನು ಕೂತುಕೊಳ್ಳುವೆನು, ಹರ್ಷೋಲ್ಲಾಸ ಮಿತಿಮಾರು ರುವದು. ಇನ್ನೆಲ್ಲರಿಗು ಬಂದಾವೃತ್ತಿ ಮಾನವಾಗಲಿ, ಪ್ರವೇಶ.-ಬಾಗಿಲಬಳಿಗೆ,) ೧ನೇ ಘಾತುಕ. ವೀರ.-(ಬಾಗಿಲಬಳಿ ರಹಸ್ಯವಾಗಿ) ನಿನ್ನ ಮುಖದ ಮೇಲೆ ರಕ್ತವಿರು ವದು, ೧ನೇ ಘಾತುಕ -ಹಾಗಾದರೆ ಅದು ಶೂರಸೇನನದು. ವೀರ-ಅದು ಅವನಲ್ಲಿ ರುವದಕ್ಕಿಂತ ನಿನ್ನ ಮೇಲಿರುವದುತ್ತಮ, ಅವನಾಟ ಪೂರೈಸಿತೊ ? ೧ನೇ ಘಾತುಕ – ಅವನ ಕುತ್ತಿಗೆಯನ್ನು ನಾನೇ ಕತ್ತರಿಸಿದೆ. ವೀರ –ಕತ್ತು ಕತ್ತರಿಸುವರಲ್ಲಿ ನೀನುತ್ತಮನು. ಅದಿಯ ಕತ್ಯ ನ್ಯೂ ನೀನು ಕತ್ತರಿಸಿದ್ದರೆ ನೀನೇ ಸರ್ವೊತ್ತಮನಾಗುವೆ. ೧ನೇ ಘಾತುಕ -ಮಹಾಪ್ರಭು ! ಅದ್ರಿ ತಪ್ಪಿಸಿಕೊಂಡ. ವೀರ -ಹಾಗಾದರೆ ಈ ಸನ್ನಿ ನನಗೆ ತಪ್ಪಲಿಲ್ಲ. ಅದೂ ಆಗಿದ್ದರೆ ನಿರ್ಭಾಧಕವಾಗಿ ಅರೆಬಂಡೆಯಂತೆ ಗಟ್ಟಿಯಾಗಿಯೂ, ಜಗದ್ಯಾಪ ಕನಾದ ಮಾರುತನಂತೆ ನಿರ್ಬಂಧವಿಲ್ಲದೆಯೂ ಇರುತ್ತಿದ್ದೆ. ಶರ ಸೇನನ ವಿಷಯವಾದರೂ ಖಂಡಿತವೊ ? ಎನೇ ಘಾತುಕ.- ಜಿಯಾ ! ಅದರಲ್ಲಿ ಸಂದೇಹವಿಲ್ಲ. ಕೊರಕಲ ಅವನ ಶವ ಬಿದ್ದಿರುವದು, ತಲೆಯು ಗಾಯಗಳಿಂದ ಇಪ್ಪತ್ತು ಕಡೆ ಬಿರಕಾಗಿರುವದು. ಅವರಲ್ಲಿ ಒಂದಕ್ಕೇನೆ ಪ್ರಾಣ ಉಳಿಯು ವದಿಲ್ಲ. ವೀರ –ಅದಕ್ಕಾಗಿ ಕೃತಜ್ಞನಾಗಿರುವೆ.