ಪುಟ:ಪ್ರತಾಪರುದ್ರದೇವ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರತಾಪರುದ್ರದೇವ AMMMMMMAAAAA••••• ಹಸುವಿನ ಕೆಚ್ಚಲೊಳಸಗನ ಹೊಕ್ಕಳು | ಬಸುರಿಯಷೆಣವನು ಪಾವಿನಹೆಡೆಯನು | ಎಕ್ಕದಕುಸುಮದ ಲಕ್ಕಿಯಬೇರಿನ | ರಸವನು ಬಾನೆಗೆ ಬಸಿಯುತ ಕುದಿಸುವ ||೫|| ಎಲ್ಲರು - ನೂಕಿ ನೂಕಿ ಕೊಳ್ಳದ ಬಾನೆ ಕೆಳಗೆ ಕೊಳ್ಳಿಯ || ಹಾಕಿ ಹಾಕಿ ಸೌದೆಯ ಮಾಡುತೀಗ ಕೊಳ್ಳಿಯ || ಉಕ್ಕಿಸಿನ್ನು ಬಾನೆಯ ಮತ್ತೆ ಚಾಚಿ ಕೊಳ್ಳಿಯ ಭಕ್ತಿಯಿಂದ ಶಕ್ತಿಯು ಭಕ್ತಿಗೀಯ್ಕೆ ಕೊಳ್ಳಿಯ || ೨ನೇ ಶಕ್ತಿ - ಸಾಕು ಸಾಕು ನಿಲ್ಲಿಸಿ ಕೊಳ್ಳಿಯಬೇಗಾರಿಸಿ | ಉಕ್ಕುತಿಹುದು ಬಾನೆಯು ದಕ್ಕದಿನ್ನು ಬಾನೆಯು || ಪಕ್ಕದಿಂದ ರಕ್ತನ ಘಕ್ಕನೀಗ ಸುರಿಯುವ || ಮಾಡುವಿನ್ನು ಸಣ್ಣಗೆ ನೀಡಲಿದನು ಶಕ್ತಿಗೆ ||೬|| (ಶಕ್ತಿಗಳಲ್ಲರು ಕುಣಿಯುವರು.*) ಪ್ರವೇಶ.-ಯಕ್ಷಿಣಿ. ದಕ್ಷಿಣಿ.-ತ್ರಿಪದೋನ್ನತಿ |'ಸಂದುವುದಿನ್ನಿದು ನಿಲ್ಲಿಸಿನೀವೆ || ಬಂದುದ ನಿನ್ನೊಳು ಹಂಚುವನಾಂ | ಮುಂದಿನಮಂತ್ರವ ಬಾನೆಯಸುತ್ತುತ | ಲಂದಿನರಿತಿಯ ಪೇಳಿರಿ ನೀವೆ ||೭||

  • ರಾಗ-ದಹಾಗೆ, ಏಕತಾಳ. ಉಕ್ಕುತ್ತಲಿಹುದು ಬಾನಿ | ಸೈ ಸೈ ಸೈ ||ಪ|| ಬಾನಿಯ ಸುತ್ತಲು ನರ್ತಿಸಿ ನೀವು!!೧!! ಸಾರ್ಥಕ ವಾಯಿತು ಮಾಡಿದ ಕಮ್ಮ || ಯಕ್ಷಿಣಿ ನಮ್ಮನು ಮೆಚ್ಚವಳಿಂದು ||೩! ಶಕ್ತಿಗೆ ಕೊಟ್ಟಿದು ಆಹುತಿ ನೀಡುವ ||೪||