ಪುಟ:ಪ್ರತಾಪರುದ್ರದೇವ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ನೇ ಅಂಕ.

  • CO:-

೧ನೇ ಸ್ಥಾನ, ವೀರಸೇನನ ಶಯನಗೃಹ. ಪ್ರವೇಶ -ವೈದ್ಯ, ಚೇಷಿ. ವೈದ್ಯ -ನಿನ್ನ ಜೊತೆಯಲ್ಲೆರಡು ರಾತ್ರೆ ಕಾದದ್ದಾಯಿತು. ನಿನ್ನ ಹೇಳಿಕೆ ದೃಷ್ಟಾಂತಕ್ಕೆ ಬರಲಿಲ್ಲ. ನೀನು ಹೇಳುವವೆರೆ ಆಕೆ ಕಡೇಸಲ ನಡೆದದ್ದು ಯಾವಾಗ ? ಚೇಟ -ಪ್ರಭುಗಳು ಯುದ್ಧರಂಗಕ್ಕೆ ದಯಮಾಡಿಸಿದಲಾಗಾಯಿತು ಪ್ರತಿದಿನವೂ ನೋಡುತಿರುವೆನು. ಅಂದಿನಿಂದಲೂ ಈಕೆ ಶಯನ ದಿಂದೆದ್ದು, ತನ್ನ ಶಾಲು ತೆಗೆದುಹೊದ್ದುಕೊಂಡು ಕೈಸಂದೂಕದ ಬೀಗವನ್ನು ತೆಗೆದು, ಅದರಿಂದ ಕಾಗದವನ್ನು ತೆಗೆದುಕೊಂಡು ಕ್ರಮವಾಗಿ ಮಡಿಸಿ, ಬರೆದು, ಬರೆದದ್ದನ್ನು ಓದಿನೋಡಿಕೊಂಡು, ಲಕೋಟೆ ಮಾಡಿ, ಮುದ್ರೆಯನ್ನು ಹಾಕಿ, ಪುನಃ ಶಯನವನ್ನೈದು ವಳು. ಇದೆಲ್ಲವನ್ನು ಸಂಪೂರ್ಣವಾದ ನಿದ್ರೆಯಲ್ಲೇಮಾಡ.ವಳು ವೈದ್ಯ -ಇದು ಸ್ವಭಾವಕ್ಕೆ ಶುದ್ದ ವಿರುದ್ಧವಾದ ನಡವಳಿಕೆ, ನಿದ್ರೆಯ ಫಲವನ್ನೂ, ಎಚ್ಚರಿಕೆಯ ಪ್ರಯೋಜನವನ್ನೂ, ಏಕಕಾಲದಲ್ಲಿ ಪಡೆಯುವದು ಕೆಡಕಿಗೆ ಕಾರಣವೆ ಹೊರ್ತು; ಉಪಯೋಗಕರ ವಾದದ್ದಲ್ಲಿ, ಈರೀತಿ ನಿದ್ರೆಯಲ್ಲಿ ನಡೆಯುವದು ; ನೀನು ಹೇಳಿದಕೆಲಸಗಳನ್ನು ಮಾಡುವದು ವಿನಃ, ಇನ್ನೇನಾದರು ಈಕೆ ಬಾಯಿಬಿಟ್ಟು ಹೇಳಿಕೊಂಡಿದ್ದ ನೀನು ಕೇಳಿ ಬಲ್ಲೆಯಾ ? 15