ಪುಟ:ಪ್ರತಾಪರುದ್ರದೇವ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

> * * , ಸವಾಗಿರಬಹುದಾಗಿರುವಂತೆಯೇ, ಈ ಎರಡು ಭಾಷೆಗಳೂ ಉತ್ಪತ್ತಿ ಕಾಲ ದಲ್ಲಿ ಒಂದೇ ಆಗಿದ್ದರೂ, ಕಾಲಕ್ರಮದಿಂದ ಎರಡಾಗಿ ಪ್ರತ್ಯೇಕಿಸಲ್ಪಟ್ಟು ಪ್ರತ್ಯೇಕವಾಗಿ ವೃದ್ಧಿಯನ್ನೂ, ಬದಲಾವಣೆಗಳನ್ನೂ ಹೊಂದುತ್ತಿರುವವು. ಹೀಗಿರತಕ್ಕ ಭಾಷೆಗಳಲ್ಲಿ ಭಾಷಾಂತರಿಸುವವನು ಆ ಸಾಮತಿಯನ್ನು ನಿರಾ ಕರಿಸಲು ಪ್ರತಿಬಂಧಕಗಳೇನಿರುವವು ? ಅಥವ ಅಂತಹ ಪ್ರತಿಬಂಧಕಗಳಿ ದ್ದರೂ ಅವು ಎಷ್ಟರಮಟ್ಟಿಗಿರುವವು ? ಈ ಭಾಷೆಗಳಲ್ಲಿ ಮೇಲೆ ಹೇಳಿ ದಂತೆ ಶಬ್ಬ ವ್ಯತ್ಯಾಸದ ಪ್ರತಿಬಂಧಕವೇ ಹೊರ್ತು ಸಂಸ್ಕೃತ ಕನ್ನಡದಂತೆ ಯೇ ಲಕ್ಷಣ, ಅಲಂಕಾರ, ಛಂದಸ್ಸು, ಪರಾಣ, ಇತಿಹಾಸ ಮುಂತಾದ ವಿಷ ಯುಗಳಲ್ಲಿ ಯಾವದೊಂದು ಪ್ರತಿಬಂಧಕವೂ ಇಲ್ಲ. ಈ ಭಾಷೆಗಳ ಛಂದಸ್ಸು ವ್ಯಾಕರಣ ಮುಂತಾದ ಕೆಲವು ಅಂಶಗಳಲ್ಲಿ ಕೊಂಚಕೊಂಚ ವ್ಯತ್ಯಾಸ ತೋರಿದ, ಅವು ಅಲ್ಪನಾಗಿರುವದರಿಂದ ಗಣನೆಗೆ ತೆಗೆದುಕೊಳ್ಳದೆ ಇರ ಬಹುದು. ನಿರಾತಂಕವಾಗಿ ಸಂಸ್ಕೃತಶಬ್ಬವನ್ನು ಕನ್ನಡಕ್ಕೆ ತೆಗೆದುಕೊಳ್ಳು ತಿರುವಂತೆ ತೆಲಗು ಶಬ್ದವನ್ನು ತೆಗೆದುಕೊಳ್ಳಕೂಡದಾದ್ದರಿಂದ ಈ ಶಬ್ಬ ವ್ಯತ್ಯಾಸದಿಂದುಂಟಾಗುವ ಪ್ರತಿಬಂಧಕವು ಕೊಂಚಮಟ್ಟಿಗೆ ಭಾಷಾಂತರಿ ಸುವ ಕಾಲದಲ್ಲಿ ತೋರಿಸಿಕೊಳ್ಳದೆ ಇರುವದಿಲ್ಲ. ಆದರೆ ಅಂತಹ ಸಂದರ್ಭ ಗಳೆಷ್ಟಿರುವವು. ಉನ್ನತಪ್ರದೇಶದಲ್ಲಿರುವ ಆ ಅಪರಿಮಿತವಾದ ಸಂಸ್ಕೃತ ತಟಾಕದ ಶಬ್ದ ಕಾವ್ಯರಚನಾ ಸರಣಿಯು ಕನ್ನಡದ ತಟಾಕಕ್ಕೆ ಹರಿದು ಬರು ತಿರುವದು ಮಾತ್ರವೇ ಅಲ್ಲದೆ, ತೆಲುಗಿಗೂ ಅದೇರೀತಿ ಹರಿಯುತ್ತಿರುವದು. ಈ ಸಂದರ್ಭದಲ್ಲಿ ಕನ್ನಡತಟಾಕ ಕಿ೦ತಲು ತೆಲುಗು ತಟಾಕದಲ್ಲಿ ನೀರಿನ ಪರಿ ಮಾಣವೂ ವಟ್ಟವು ಸಾರವು ಕಮ್ಮಿಯಾಗಿದ್ದ ಪಕ್ಷದಲ್ಲಿ ಕನ್ನಡ ತಟಾಕಕ್ಕೆ ಕಾಲವೆ ತೆಗೆದವನ ತಪ್ಪಿತವಲ್ಲದೆ ಈ ಎರಡಕ ಮೂಲಾಧಾರವಾದ ತಟಾಕ ದದಿಂದ ಬೇರೆ ಅಲ್ಲವಷ್ಟೆ. ಬುದ್ದಿಶಾಲಿಯಾದವನು ಕಾಲವೆಯನ್ನು ಕ್ರಮ ಪಡಿಸಿದರೆ ಎರಡು ತಟಾಕಗಳಲ್ಲಿರತಕ್ಕ ವ್ಯತ್ಯಾಸವನ್ನು ಹೋಗಲಾಡಿಸು ವದು ಸಾಧ್ಯವೆ. ಈ ಸಂದರ್ಭದಲ್ಲಿ ಆ ಇಟಾಲಿರ್ಯ ಸಾಮತಿಗೆ ಅವ ಕಾಶವೆಲ್ಲಿರುವದು ? ಸಕಲ ಕಾವ್ಯರಚನಾ ಸಹಾಯವೂ ಶಬ್ದ ಸಹಾಯವು ಸಂಸ್ಕೃತ ದಿಂದ ಕನ್ನಡ ತೆಲಗುಗಳಿಗೆ ಏಕರೀತಿಯಿರುವದರಿಂದ ಇವೆರಡು ಭಾಷೆಗೆ