ಪುಟ:ಪ್ರತಾಪರುದ್ರದೇವ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಂಕ್ ೫, ಸ್ಥಾನ, hಳಿ ••••• ಪ್ರತಾಪರುದ್ರ – ರಥಿಕರಲ್ಲಿ ಜಯಸಿಂಹನು, ನಿನ್ನ ಮಗನು ಕಾಣಿ ಸದೆ ಇರುವರು. ನಂದರಾಜ - ಸ್ವಾಮಿ ! ತನ್ನ ಕುಮಾರನು ಕ್ಷತ್ರಿಯ ಜನ್ಮವನ್ನು ಸಾರ್ಥಕವಾಡಿಕೊಂಡ. ತನ್ನ ತೌರವನ್ನು ಸ್ಥಾಪಿಸಿ ಯುದ್ಧ ಮಾಡುತ್ತಿದ ಸ್ಥಳದಿಂದ ಹಿಮ್ಮೆಟ್ಟರೆ ಶಸ್ತ್ರ ಹತಿ ಸಹಸ್ರಗಳಿಂದ ವೀರಸ್ವರ್ಗವನ್ನೈದಿದನು. ಶೇಖರ – ಸ್ವರ್ಗವನ್ನೈದಿದನೇ ? ನಂದರಾಜ -ಜಯಲಕ್ಷ್ಮಿಯ ಶರಗನ್ನು ಹಿಡಿದೆಳೆಯುತ್ತ ಸ್ವರ್ಗ ಪಥದಿದನು. ಅವನ ಯೋಗ್ಯತೆಗೆ ತಕ್ಕಂತೆ ತಾವು ಅನುತಾಪ ಪಡಕೂಡದು. ಅದಕ್ಕೆ ಪಾರವೇ ಇರುವದಿಲ್ಲ. ಕೇರ-ಅವನಿಗೆ ಗಾಯಗಳ್ಯಾವ ಕಡೆ ಇದ್ದವು. ನಂದರಾಜ -ಮುಂಭಾಗದಲ್ಲೇ ಇದ್ದವು. ಶೇಖರ -ಹಾಗಾದರವನು ವೀರಲಕ್ಷ್ಮಿಯ ಮಗ, ನನ್ನಂಗದಲ್ಲಿ ರೋಮಗಳಿರುವಷ್ಟು ಜನ ಮಕ್ಕಳು ನನಗಿದ್ದರೂ ಅವರಿಗೆಲ್ಲ ಇಂತಾ ಅಂತ್ಯವನ್ನೇ ಬಯಸುವೆನು. ಇನ್ನವನು ಕೃತಾರ್ಥನಾದ. ಪ್ರತಾಪರುದು -ಅವನು ವಿಶೇಷ ವ್ಯಸನಕ್ಕಾಕರವಾದವನು. ಅದ ನ್ನೆಲ್ಲ ನಾನು ಪಡುವನು. ಶೇಖರ. ಕೊಂಚವೂ ವ್ಯಸನಪಡಬೇಕಾದ್ದಿಲ್ಲ. ಕ್ಷತ್ರಿಯನಂತೆ ಬಾಳ ಕ್ಷತ್ರಿಯನಿಗಾಗಿರುವ ವೀರಸ್ವರ್ಗವನ್ನೆಡಿದನೆಂದು ಕೇಳಿದ ನಂತರ ವ್ಯಸನವೆಲ್ಲ ಪೂರೈಸಿತು. ದೇವರಿನ್ನವನನ್ನು ಕಾಪಾಡು ವನು, ಇನ್ನ ವನ ಗೋಜನ್ನು ಬಿಡಿ. ಆದರೆ ಈ ಕಡೆ ನೋಡಿ ಅದಕ್ಕೆ ತಕ್ಕ ಪ್ರತಿಫಲ ಬರುತ್ತಿರುವದು,