ಪುಟ:ಪ್ರತಾಪರುದ್ರದೇವ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Vಳಿ ಪ್ರತಾಪರುದ್ರದೇವ. ಚಂದವಲ್ಲಿ-ಇವರನ್ನು ಮರೆತಿದ್ದರೆ ನನ್ನ ಈಗಿನ ಉತ್ಸವವು ನಾಯಕ ರತ್ನ ವಿಲ್ಲದ ಪದಕದಂತೆ ಕಳಾರಹಿತವಾಗಿರುತ್ತಿತ್ತು. ವೀರ-ಪೂಜ್ಯತಮನೆ ! ಈ ದಿವಸ ಸಾಯಂಕಾಲಕ್ಕೆ ದರಬಾರಾಗು ವದು. ಅನಂತರ ರಾಜಮಂಡಲಕ್ಕೆ ಔತಣವಾಗುವದು. ಇವರ ಡಕ್ಕೂ ನಿನು ತಪ್ಪದೆ ಬರಬೇಕೆಂದು ಪ್ರಾರ್ಥಿಸುವೆನು. ಶೂರ-ಮಹಾಸ್ವಾಮಿಯವರ ಅಪ್ಪಣೆಯಂತೆ ಶಿರಸಾವಹಿಸಿ ನೆಡೆದು ಕೊಳವದರಲ್ಲಿ ಸದಾ ಬದ್ಧ ಕಂಕಣನಾಗಿರುವನು. ವೀರ -ಅಶ್ವಾರೂಢನಾಗಿ ನೀನು ಸವಾರಿ ಬೆಳಸುವಂತೆ ಕಾಣುತ್ತೆ. ಶೂರ-ಜೆಯಾ ! ಹೌದು. ವೀರ -ಪ್ರಯಾಣಮಾಡದಿದ್ದರೆ, ನಿನ್ನ ಸಂಗಡ ಆಲೋಚಿಸಬೇಕಾದ ಕೆಲವು ಅಂಶಗಳಿದ್ದವು. ಅವುಗಳನ್ನು ಈ ದಿವಸ ಮಂತ್ರಾಲೋ ಚನೆಯಲ್ಲಿ ಆಲೋಚಿಸಿದ್ದಾಯಿತು. ಅದರಿಂದ ಕೊಂಚಮಟ್ಟಿಗೆ ತಿಳವಳಿಕೆಯುಂಟಾಗಿರುವದು, ಒಳ್ಳೇದು ! ಅದರ ವಿಷಯ ನಾಳೆ ಆಗಲಿ, ನಿನು ತುಂಬ ದೂರ ಪ್ರಯಾಣಮಾಡಬೇಕಾಗಿರುವದೊ ? ಶೂರ -ಜಿಯಾ ! ಕೊಂಚ ದೂರವೆ. ಈಗ ಹೊರಟರೆ ಸಾಯಂಕಾ ಲದ ಭೋಜನಕಾಲಕ್ಕೆ ಮುಂಚಿತವಾಗಿ ಬರುವದಕ್ಕಾಗುವದಿಲ್ಲ, ಕುದರೆಯೇನಾದರು ಆಯಾಸಪಟ್ಟುಕೊಂಡು ಜಾಗ ತೆ ಕಾಲಿಡದಿ ದರೆ, ಭೋಜನಕ್ಕೂ ಒಂದೆರಡು ಗಂಟೆ ಸಾವಕಾಶವಾಗಿ ಬರ ಬೇಕಾಗುವದು. ವೀರ.-ನನ್ನು ಔತಣಕ್ಕೆ ಬಾರದೆ ಇರಬೇಡ, ಶೂರ -ಮಹಾಸ್ವಾಮಿ! ಅದಕ್ಕೆಂದಿಗೂ ತಪ್ಪತಕ್ಕವನಲ್ಲ. ವೀರ -ನಮ್ಮ ಜ್ಞಾತಿಗಳು ಮಗಧ ಪಾಂಚಾಲದೇಶಗಳಲ್ಲಿ ಆಶ್ರಯ