ಪುಟ:ಪ್ರತಾಪ ರುದ್ರದೇವ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

S8 ಕೆ. (8) ವಾಕ್ಯಬಂಧನ ಕಾವ್ಯಬಂಧನಗಳು, ಸಂಸ್ಕೃತದಲ್ಲಿ ಯಾವರೀತಿ ಇರುವವೊ, ಕನ್ನಡದಲ್ಲೂ ಅವು ಅದೇ ರೀತಿ ಇರಬಹುದಲ್ಲದೆ, ಸಂಸ್ಕೃತ ವ್ಯಾಕರಣದ ಅನೇಕ ನಿರ್ಬಂಧಗಳು ಕನ್ನಡದಲ್ಲಿಲ್ಲ. (+) ಸಂಸ್ಕೃತದಲ್ಲಿರುವ ಅಲಂಕಾರ ಲಕ್ಷಣಗಳೇ ಕನ್ನಡದಲ್ಲಿ ಅಲಂ ಕಾರ ಲಕ್ಷಣಗಳಾಗಿರುವವು (೬) ಸಂಸ್ಕೃತ ಛಂದಸ್ಸ ಕನ್ನಡದಛಂದಸ್ಸಾಗಿರುವದು. - ಸಂಸ್ಕೃತವನ್ನು ಕನ್ನಡಿಸುವಲ್ಲಿ ಈ ವಿಷಯಗಳಲ್ಲಿ ಯಾವದೊಂ ದು ಪ್ರತಿಬಂಧಕವೂ ಇಲ್ಲ. ಭಾಷಾ ವ್ಯತ್ಯಾಸದಿಂದುಂಟಾಗುವ ಶಬ್ದ ವ್ಯತ್ಯಾಸದ ಪ್ರತಿಬಂಧಕ ಒಂದೇ ಇರತಕ್ಕದ್ದು, ಸಂಸ್ಕೃತದಲ್ಲಿ ಕನ್ನಡ ಕ್ಕಿಂತಲೂ ಶಬ್ಬಗಳೂ, ಶಬ್ದಾರ್ಥವೂ, ಶಬ್ಯಾರ್ಧದಾರಢವೂ ಹೆಚ್ಚಾಗಿ ರುವದರಿಂದ ಸಂಸ್ಕೃತವು ಕನ್ನಡಕ್ಕಿಂತಲು ಉನ್ನತಸ್ಥಿತಿಯಲ್ಲಿರುವದು. ಭಾಷಾಂತರಿಸಲು ಇದೊಂದೇ ಮುಖ್ಯ ಪ್ರತಿಬಂಧಕವಾಗಿರತಕ್ಕದ್ದು. ಆದರೆ ಇದು ಭಾಷಾಂತರಿಸುವವನಿಗೆ ಎಚ್ಚರಮಟ್ಟಿಗೆ ಪ್ರತಿಬಂಧಕವಾ ಗಿರುವದು. ಕಾಲವೆಗಳಿಂದ ಗಂಟುಹಾಕಲ್ಪಟ್ಟಿರುವ ಎರಡು ತಟಾಕಗ ಇಲ್ಲಿ ಹೆಚ್ಚು ನೀರಿರುವ ತಟಾಕದ ನೀರು ಮತ್ತೊಂದು ತಟಾಕಕ್ಕೆ ಹರಿಯುವಂತೆ ಸಂಸ್ಕೃತಶಬ್ದಗಳು ನಿರಂತರವಾಗಿ ಕನ್ನಡಕ್ಕೆ ಬರುತ್ತಲೇ ಇರುವನು. ಹೀಗಿರುವಲ್ಲಿ ಶಬ್ಬಾತಿಶಯದಿಂದ ಔನ್ನಿತ್ಯಸ್ಥಿತಿಯಲ್ಲಿರುವ ಸಂಸ್ಕೃತವನ್ನು ಕನ್ನಡಿಸುವಲ್ಲಿ ಭಾಷಾಂತರಿಸಿದ ಗ್ರಂಥವು ನಿಸ್ಸಾರವ್ಯಾತ ಕ್ಯಾಗಬೇಕು. ಉನ್ನತಪ್ರದೇಶದಲ್ಲಿರುವ ತಟಾಕವು ಕಾಲವೆಯಿಂದ ಗಂಟು ಹಾಕಲ್ಪಟ್ಟಿರುವ ಕೆಳಗಣ ತಟಾಕ ತಿ೦ತಲೂ ಎಷ್ಟು ದೊಡ್ಡದಾದರೂ, ಎರಡೂ ತಟಾಕಗಳ ನೀರಿನಲ್ಲಿ ಸಾರವು ನೀರಿನಮಟ್ಟವೂ ಒಂದೇಸಮನಾಗಿ ರುವದೆ ಹೊರ್ತು ಮತ್ತೆ ಹ್ಯಾಗಿದ್ದಿತು. ಮೇಲಣತಟಾಕದ ನೀರಿನ ಸಾರ ಮಾತ್ರವೇ ಅಲ್ಲದೆ ಕೆಳಗಣ ತಟಾಕದ ನೀರಿನಲ್ಲೇನಾದರು ಸಾರವಿದ್ದರೆ ಅದು ಇದ್ದುಕೊಂಡು ಮೇಲಣ ತಟಾಕದ ಸಾರಕ್ಕಿಂತಲು ಕೆಳಗಣ ತಟಾಕದ ಸಾರವು ಅತಿಶಯವಾಗಿರಬಹುದಷ್ಟೆ. ವ್ಯತ್ಯಾಸವೇನಂದರೆ ಒಂದರಲ್ಲಿ ನೀರು ಹೆಚ್ಚಾಗಿರುವದು ಮತ್ತೊಂದರಲ್ಲಿ ನೀರು ಕಡಮೆಯಾಗಿರುವದು. ಈ