ಪುಟ:ಪ್ರತಾಪ ರುದ್ರದೇವ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ 8, ಸ್ಥಾನ 4 ೧೦ ಪ್ರತಾಪರುದ್ರದೇವ.-ಅದರೊಂದಿಗೆ ನನ್ನ ದುರ್ಬುದ್ದಿಯಲ್ಲಿ ಮಿತಿ ಮಾರಿದ ದುರಾಸೆ ಹುಟ್ಟಿ ಅದಕ್ಕಾಗಿ, ನಾನು ಪ್ರಭುವಾಗಿದ್ದಲ್ಲಿ, ಉಪರಾಜರನ್ನೆಲ್ಲ ಆವರ ದೇಶಕೊಶಕ್ಕಾಗಿ ಕೊಲ್ಲುವೆ. ಪ್ರಜೆ ಗಳ ಆಸ್ತಿಯನ್ನೆಲ್ಲ ದೋಚಿಕೊಳ್ಳುವ, ಮನೆಗಳನ್ನು ಕಿತ್ತು ಕೊಳ್ಳುವೆ. ಅದನ್ನು ಮಾಡಲು ಸಜ್ಜನರಮೇಲೆ ಇಲ್ಲದ ತಪ್ಪಿತಗಳನ್ನು ಹೊರಿಸಿ ಅವರನ್ನೆಲ್ಲ ನಾಶಪಡಿಸುವೆ. ಜಯಸಿಂಹ -ದ್ರವ್ಯದಾಸೆಯು ಪ್ರಬಲವಾದದ್ದು, ಯವನದಲ್ಲೇ ಕಾಮ ಕಡೆಯಾಗುವದು, ದ್ರವ್ಯಾಭಿಲಾಷೆಯು ಕಡೆಯವರಿಗೂ ಹೆಚ್ಚುತ್ತಲಿದ್ದು ವಿಶೇಷ ಕೆಡಕುಮಾಡುವದು. ಆದರೂ ನೀನು ಹೆದರಬೇಡ, ನಮ್ಮೊಢದೇಶವು ಬಂಜೆಯಾಗಿರುವದಿಲ್ಲ, ರಾಜ ಕೋಶದಲ್ಲೇ ನೀನು ತೃಪ್ತನಾಗುವ ಭಾಗ್ಯ ಸದಾ ಇರುವದು. ಈಗ ಹೇಳಿದ ದುರ್ಗುಣಗಳನ್ನೆಲ್ಲ ಇತರ ಸುಗುಣಗಳಲ್ಲಿ ಮರೆ ಯಬಹುದು, ಪ್ರತಾಪರುದು. ಅಂತಹ ಸುಗುಣಗಳು ನನ್ನಲ್ಲೊಂದು ಇಲ್ಲ. ಪ್ರಭುವಿಗೆ ಯೋಗ್ಯವಾದ ಸತೃಸ್ವಭಾವ, ಸುಶೀಲತೆ, ಪ್ರಾಮಾಣಿ ಕತೆ, ದಯೆ, ನವತೆ, ಸ್ಥಿರ, ಕೌರ್, ಔದಾರ, ತಾಳ್ಮೆ ಶ್ರದ್ಧಾದಿಗಳನ್ನು ನಾನರಿತವನೇ ಅಲ್ಲ. ಅವುಗಳಿಗೆ ಬದಲಾಗಿ ಲೋಕದಲ್ಲಿರುವ ನಿಮ್ಮ ಅಪರಾಧಗಳನ್ನು ಸೇರಿಸಿ ಮಾಡಲ್ಪಟ್ಟ ರುವ ಮೂರ್ತಿ ನಾನು. ನಾನು ಭೂಮಿಪಾಲನಾದರೆ. ಕಂದ | ಧರೆಯೊಳರುವೈಕಮತೃದ | ಸುರಭಿಯ ಕೊರಳ ನಾದದೊಳು ಕುಯ್ಯದೆ ಬಿಡಯಣೆ]