ಪುಟ:ಪ್ರತಾಪ ರುದ್ರದೇವ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೮ ಪ್ರತಾಪರುದ್ರದೇವ. ನಂದರಾಜ –ಕಂದ! ಸಲ್ಲಿಸುವದೆನ್ನ ನುಡಿಯುಂ || ಬಲ್ಲಿದ ದುರ್ವಾರ್ತೆಯನದನಂ ಪೊಲ್ವುದ ಕೇ || ಆಲ್ಲವು ನಿನ್ನ ಕಿವಿಗಳ || ಸಲ್ಲಿ ಸುವೀಮಾತ ಕೇಳವು ಶಪಿಸದಿರಿ ||೬-oll ಜಯಸಿಂಹ-ಸಾಕು ! ನಿಲ್ಲಿಸು ! ನನಗೇ ಗೊತ್ತಾಗುತ್ತಿರುವದು, ನಂದರಾಜ-ನಿನ್ನ ಕೋಟೆಗೂಡವಾಗಿ ಕೈವಶವಾಗಿ ನಿನ್ನ ಪತ್ನಿ ಪುತ್ರರು ಕಾಲಾಧೀನರಾಗಿರುವರು. ಅವರನ್ನು ವಧಿಸಿದ ರೀತಿಯನ್ನು ಹೇಳಿದರೆ ಅದನ್ನು ಕೇಳಿ ನೀನೂ ಅವರಗತಿಯನ್ನೇ ಹೊಂದ ಬಹುದೆಂದು ನನಗೆ ಶಂಕೆತೋರುವದು. ಪ್ರತಾಪರುದ್ರ- ಹರಿಹರಿ ! ವ್ಯಸನವನ್ನು ಬಹಿರಂಗಪಡಿಸು, ಮುಖವಂ ವರಮಾಡಿಕೊಳಬೇಡ. ಕಂದ! ಪಡುತಿಹ ನಿನ್ನಿದುಃಖವ | ನುಡಿಯೊಳಕ್ಕೆ ನುಡಿಯಲಿ ತೋರದ ದುಃಖಂ|| ಪಿಡಿಯುತ ಮನವನು ಸೆರೆಯಂ | ಸುಡುವುದುತನುವಂ ಬಿಡದದು ತೆಗೆಯ್ಕೆ ಸೆರಗಂ || ಜಯಸಿಂಹ.-ನನ್ನ ಮಕ್ಕಳ ಹತರಾದರೆ ? ನಂದರಾಜ -ಪತ್ನಿ ಪುತ್ರರು ಮತ್ತಲ್ಲಿದ್ದ ಸೇವಾಜನರೆಲ್ಲರೂ. ಬಯಸಿಂಹ -ನಾನಿಲ್ಲಿ ದಾಗ ಹೀಗಾಯಿತೆ? ನನ್ನ ಪತ್ನಿ ಯ ನುಡಿದಳೆ? ನಂದರಾದ ಸಂಗತಿಯನ್ನು ಶೃತಪಡಿಸಿರುವೆ? ಪ್ರತಾಪರುದು - ಮಿತ್ರನೆ! ಸಹಿಸು, ಕಂದ! ಒಡಲಂ ಬಾಧಿಪ ದುಗುಡದ || ಜಡತಾಂ ಮತ್ಸರವನು ಕೊಡಲದು ಗುಣ ನಕ್ಕು