ಪುಟ:ಪ್ರತಾಪ ರುದ್ರದೇವ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ ೫, ಸ್ಥಾನ, ೧೦೧ ಕಂದೆ|| ನನ್ನೊಳ್ಳಲಿಯಿಸು ಮನಮುಂ || ನನ್ನೊಳಗಡಗಿರ್ಪ ಗುಂಡಿಗೆಯು ದೃಢತರವಾ | ಗೆನ್ನೊಳಗಿರ್ಪುದು ನಿಬ್ಬರಿ || ದೆನ್ನೊಳು ಗುಮ್ಮನೆನುತಮಿರೆನಾಂ ಹೆದರೆನುಕೇಳಿ|| ಪ್ರವೇಶ-ಪದಾತಿ, ನಿನ್ನ ಮುಖವನ್ನು ಸುಡುಗಾಡಿನಲ್ಲಿ ಸುಡಬೇಕು. ಎಲೆ ! ಗೂಬೆ, ಬಾಣನ್ತಿಯಂತೆ ಬೆಳಗೇತಕ್ಕಿರುವೆ. ಈ ಕಾಮಾಲೆ ನಿನಗೆ ಯಾವಾಗ ಸಂಘಟಿಸಿಕೊಂಡಿತು ? ಪದಾತಿ- ಬೇಯ್ತಾ ! ಹತ್ತು ಸಹಸ್ರ ವೀರಸೇನ.- ಗೂಬೆಗಳನೆ ? ಪದಾತಿ - ಜಿಯ್ಯಾ ! ಪಡೆ. ವೀರಸೇನ -ಎಲೋ ಕಾಮಾಲೆ ! ಹೋಗು ! ಹೋಗು! ಮುಳ್ಳಿನಿಂ ದಲಾದರು ಮುಖವನ್ನು ಚುಚ್ಚಿ ಅದರಲ್ಲಿ ವೀರಾವೇಶದ ಅರುಣತೆ ಯಂತೋರಿಸು, ಎಲೆ, ಹೆಡಿ ! ಪಡೆ ಅಂದರೇನೋ ? ಭಯ ವೆನ್ನುವದು ನಿನ್ನ ಕಾಮಾಲೆಮುಸಡಿಯಲ್ಲೇ ಹುಟ್ಟಿದಂತಿರುವ ದಲ್ಲ ! ಇನ್ನದನ್ನಾ ಕಡೆ ತಿರಗಿಸಿಕೊಂಡು ಪಡೆಯಾವದು ಬೊಗಳು ಪದಾತಿ– ಜಿಯಾ ! ಲಾಲಿಸಬೇಕು. ಮಗಧನಪಡೆದು ವೀರಸೇನ.-ಸಾಕು! ಸಾಕು! ಇನ್ನು ಬೊಗಳಬೇಡ, ನಿನ್ನ ಮುಖವನ್ನು ಆಚಿಗೆ ಸಾಗಿಸು, ಎಲೆ ಮಾರ್ತೃಕ ! ಎಲ್ಲಿರುವೆ! ಅವರ ಈ ದಿಗ್ವಿಜಯದಿಂದ ರಾಜ್ಯವು ನನ್ನ ಕೈತಪ್ಪಿ ಹೋಗುವದು; ಅಲ್ಲದಿದ್ದರೆ ನಾನೇ ಸ್ಥಿರವಾಗಿರುವನು. ಇದರಲ್ಲಿನ್ನು ಬಾಳಬೇ ಕಂಬಾಶೆಯು ನನಗಿಲ್ಲ~ 16