ಪುಟ:ಪ್ರತಾಪ ರುದ್ರದೇವ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

12 ಪಿ ಡಿ ಕೆ , ವಾಗಿದೆ. ಕನ್ನಡಿಸುವವನ ಬಾಯಲ್ಲಿ ಸಂಸ್ಕೃತದ ಸುಲಿದ ಬಾಳೆಹಣ್ಣಿಗೆ ಬದ ಲಾಗಿ ಈ ಗಂಟು ಲಗಾಮ್ರಾತಕ್ಕಿರುವದು ? 'ಛಂದೋವ್ಯತ್ಯಾಸದಿಂದಲೇ ಅಲ್ಲವೆ ? ಈಗ ಭಾಷಾಂತರಿಸಿದ್ದು ಸರಸಾಮಾನ್ಯವಾದ ಪದ್ಯ. ಈ ಕೆಳ ಗಿನ ಲಾರ್ ಟಿನೆಸನ್ನಿನ ಪದ್ಯವನ್ನು ಪ್ರಯತ್ನಿಸಿದರೆ ಗತಿಯೇನು.-

  • Half a leaguve, half a league, Half a league onward All in the valley of Death Rode the six hundred

• Forward, the Light Brigade : Charge for the guns !” he said : Into the Valley of Deatlı Rode the six hundred.” ಇದರಮುಂದೆ ಆ ಕನ್ನಡ ಕುಂಟುಕತೆಯ ಬೆನ್ನಿನಮೇಲೆ ಕರ್ನಾಟಕದಲ್ಲಿ ರುವ ಈಚಲು ಚಬೈಗಳನ್ನೆಲ್ಲಾ ಮುರಿದರೆ ತಾನೆ ಸಾಗುವದೆ ? ಕಾವ್ಯಕ್ಕೆ ಅಂದಕೊಡತಕ್ಕ ಅನೇಕ ಅಂಗಗಳಲ್ಲಿ ಛಂದಸ್ಸು ಒಂದಾ ಗಿರುವದು. ಇದೇ ರೀತಿ ಲಕ್ಷ, ಅಲಂಕಾರ, ಉಪಮಾನ ಪುರಾಣ, ಇತಿ ಹಾಸ, ನೀತಿ, ನ್ಯಾಯ, ಮತ, ಆಚಾರ, ವ್ಯವಹಾರಗಳು, ವ್ಯತ್ಯಾಸವಾಗಿ ರುವಲ್ಲಿ ಭಾಷಾಂತರಿಸುವವನ ಪಾಡೇನು ? ಮೊದಲು ಶಬ್ಬಗಳ ಅನಕೂ ಲತೆ ಹ್ಯಾಗಿರುವದು? ಇಂಗ್ಲೀಷಿನ ಒಂದು ಶಬ್ದ ವನ್ನೂ ಕನ್ನಡಕೆ ತೆಗೆದು ಕೊಳ್ಳಲು ಅಧಿಕಾರವಿಲ್ಲ. ಚಿಂತೆಯಿಲ್ಲ. ಕನ್ನಡದಲ್ಲಾದರೂ ಇಂಗ್ಲೀಷಿಗೆ ತಕ್ಕ ಶಬ್ದಗಳು ದೊರಕುವವೊ ? ಪ್ರಪಂಚದಲ್ಲಿ ರಸವತ್ತಾಗಿರುವ ವಿಶಿಷ್ಟ ಭ ಷೆಗಳನ್ನೂ ಸಂದಿಸುತ್ತಿರುತ್ತಾ ಆ ಭಾಷೆಗಳಲ್ಲಿರತಕ್ಕ ಅಸಾಧಾರಣವಾದ ಶಬ್ದಗಳನ್ನೂ ಅವರಕಾವ್ಯಗಳ ರಚನಾಚಮತ್ಕಾರಗಳನ್ನು ತೆಗೆದುಕೊಂಡು ಮತ್ತೆ ತೆಗದುಕೊಳ್ಳುತ್ತ ಸಮುದ್ರದಂತಾಗಿರುವ ಇಂಗ್ಲಭಾಷೆಯ ಶಬ್ದ ಗಳಿಗೆ ಸಾಮಾನ್ಯ ವಿಷಯವನ್ನು ಬರೆಯಬೇಕಾದರೂ ಹತ್ತುಸಂಗ್ನಿಗೆ