ಪುಟ:ಪ್ರತಾಪ ರುದ್ರದೇವ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ ೧ ಸ್ಥನ, ಇನ್ನೇನೋ ಬಂದು ಹೊಸದಾದ ದ್ರೋಹವಾರ್ತೆಯನ್ನು ತಂದಿರು ವನಂತೆ ಕಾಣುತ್ತೆ, ಪ್ರತಾಪರುದ್ರದೇವ.-ಜೆಯಾ! ಇವನೇ ನನ್ನನ್ನು ಶತ್ರುಗಳ ಬಂಧನದಿಂದ ಬಿಡಿಸಬೇಕೆಂದು ಧೈದಿಂದ ಯುದ್ಧ ವವಾಡಿದ ಧೀರನು, ಎಲೈ ಧೀರನೆ ! ನಿನಗೆಹೇಮ ಉಂಟಾಗಲಿ. ನೀನು ಬರುವಾಗ ಯುದ್ಧರಂಗವಿದ್ದ ಸ್ಥಿತಿಯನ್ನು ಪ್ರಭುಗಳಗರಿಕೆವಾಡು, : ಪದಾತಿ -ನೀರಿನಲ್ಲಿ ಸುತ್ತ ಬಲಗುಂದಿ ಒಬ್ಬರನ್ನೊಬ್ಬರು ತಬ್ಬಿಕೊಂಡು ಇಬ್ಬರೂ ಮುಳಗಿ ಹೋಗುವವರಂತೆ, ಯುದ್ಧ ರಂಗದಲ್ಲಿ ಜಯಾಪಜಯವು ಅನುಮಾನಕ್ಕಾಕರವಾಗಿತ್ತು. ಭೂಮಿಯ ದುರಾಚಾರಗಳಿಗೆ ಮಾತೃಸ್ಥಾನವಾಗಿ, ದ್ರೋಹವೇ ಮೂರ್ತಿಮತ್ತಾಗಿರುವ, ದಯಾರಹಿತನಾದ ಆ ಮದಕರಿ ನಾಯ ಕನು, ತನ್ನ ಪಶ್ಚಿಮದೀಪದ ಪದಾತಿಗಳನ್ನು ಅಲ್ಪಬಲವನ್ನು ನಮ್ಮವರ ಮೇಲೆ ತಳ್ಳಲು, ಜಯಲಕ್ಷ್ಮಿಯು ಅವನಂ ತನ್ನ ಕಟಾಕ್ಷದಿಂದ ನೋಡುತ್ತಿದ್ದಳು. ಆದರೆ ನಮ್ಮ ವೀರಸೇನನು ತನ್ನ ಹೆಸರಿಗೆ ತಕ್ಕ ಪರಾಕ್ರಮದಿಂದ, ಖಡ್ಗ ಹಸ್ತನಾಗಿ ಅರಿಪಚ್ಚಿ ಗಳಲ್ಲಿ ಕಾಣಿಸಿಕೊಂಡು, ತನಗೆದುರಾಗಿ ಬಂದ ಅರಿಭಟರಂ, ಯಮ ಪುರಿಗೆ ದಾಳಿಯನ್ನಿಡಿಸಿ, ಆ ದುರಾತ್ಮನನ್ನು ಹಿಡಿದವನ ಶಿರಚ್ಛೇದನಂ ಗೈದವನ ತಲೆಯಂ ನಮ್ಮ ಕೋಟೆ ಬತೇರಿದುಮೇಲಿಡಿಸಿರುವನು. ವಿಜಯಧ್ವಜ.-ಆಹಾ ! ತಮ್ಮನೆ! ಶಾಬಾಸು! ಶಾಬಾಸು | ನೀನೇಢೀರನು !