ಪುಟ:ಪ್ರತಾಪ ರುದ್ರದೇವ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ ೨. ಸಣ್ಣನ ೩, 8

  • • • •\/ \\/ \ 1/2

ಎಲ್ಲರು-ಒಳ್ಳೇದು. ( ಪ್ರತಾಪರುದ್ರದೇವ, ಪ್ರತಾಪಸಿಂಹ, ಬಿಟ್ಟು ಎಲ್ಲರು ಹೋಗುವರು. ) ಪ್ರತಾಪರುದ್ರ.-ನೀನು ಈಗೇನಮಾಡುವೆ? ನಾವು ಇವರ ಜೊತೆ ಯಲ್ಲಿ ಸೇರುವದರಿಂದ ಪ್ರಯೋಜನವಿಲ್ಲ. ಒಳಗಿಲ್ಲದ ದುಃಖ ವನ್ನು ಹೊರಗೆ ತೋರ್ಪಡಿಸುವದು ವಂಚಕರಿಗೆ ಸುಲಭವಾಗಿರು ವದು. ನಾನು ಪಾಟಲಿಪುರಕ್ಕೆ ಹೋಗಿ ಮಗಧನನ್ನು ಅನು ಸರಿಸುವೆ. ಪ್ರತಾಪಸಿಂಹ-ನಾನು ಮಿಥಿಲೆಗೆ ಹೊಗುವೆ. ಈ ರೀತಿ ನಾವು ಬೇರೆಬೇರೆ ಯಿದ್ದರೆ ನಮ್ಮ ಕ್ಷೇಮ ದ್ವಿಗುಣವಾಗುವದು. ನಾವಿ ೩ಲ್ಲಿರತಕ್ಕದ್ದು ಅಪಾದು. ಕಂದ | ಇಡುವಂ ಮಾನವನಸ್ಸವ | ನಡೆನೊಟಂ ಮಂದಹಾಸದ ಮುಗುಳ್ಳಗೆಯೋಳೆ || ಇಡನಿನನುಂ ಬಂಧುವನ | ಡುವನವಂ ಮಾರ್ದವಿಷವನುಣುವೆಡೆಯೊಳಗಂ || ಪ್ರತಾಪರುದ್ರ- ಪ್ರಭುತ್ವದ ಮೇಲೆ ಈಗ ಪ್ರಯೋಗಿಸಿರುವ ಬಾಣವು ಇನ್ನೂ ಭೂಮಿಯನ್ನು ಸೇರಿಲ್ಲ, ನಾವದರಗುರಿಯಂ ತಪ್ಪಿಸಿಕೊಳುವದುತ್ತಮ. ಇನ್ನು ಸಾವಕಾಶಮಾಡದೆ ಅಶ್ವಾ ರೂಢರಾಗುವ, ಹೊರಡಲು ಅಪ್ಪಣೆ ತೆಗೆದುಕೊಳ್ಳುವದರಲ್ಲಿ ಹೊತ್ತುಮಾಡದೆ ಜನಗಳಿಗೆ ತಿಳಿಯದಂತೆ ಹೋಗೋಣ ನಡೆ. ಕಂದ | ಕುಂದಕನಾಗದು ಧೀರಗೆ | ಮಂದಿರದೊಳಮವತೋರದ ದೊಹಮಿರಿ ||