ಪುಟ:ಪ್ರಬಂಧಮಂಜರಿ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وک ಪ್ರಬಂಧಮಂಜರಿ--ಎರಡನೆಯ ಭಾಗ ಹೊರಡುವುದು ಹಳ್ಳಿಗಾಡಿನಷ್ಟು ಅಸಹ್ಯವಾಗುವುದಿಲ್ಲ. ಅನೇಕ ಪಟ್ಟಣಗಳಲ್ಲಿ ಬೆಳಕುಳ್ಳ ವಿಶಾಲವಾದ ಪುಸ್ತಕ ಭಂಡಾರಗಳೂ, ಸರ್ವವನ್ನು ಪ್ರದರ್ಶನಶಾಲೆಗಳೂ, ಇನ್ನೂ ದೊಡ್ಡ ದೊಡ್ಡ ಕಟ್ಟಡಗಳೂ ಇರುತ್ತವೆ. ಮಳೆ ಬೀಳುವಾಗ ಜನರು ಈ ಸ್ಥಳಗಳಲ್ಲಿ ಆನಂದದಿಂದ ಹೊತ್ತು ಕಳೆವುದಲ್ಲದೆ ಪ್ರಯೋಜನವನ್ನೂ ಪಡೆಯಬಹುದು, - ಪಟ್ಟಣಗಳಲ್ಲಿಯೂ ಬಲವಾದ ಮಳೆಬಿದ್ದರೆ, ಬಡವರಿಗೆ ಬಲು ತೊಂದರೆಯಾಗುವುದು. ಬಡವರ ಮನೆಗಳಲ್ಲಿ ಹಳ್ಳಿಯವರ ಮನೆಗಳಂತೆ ಮೇಲು ಛಾವಣಿ ಭದ್ರವಿಲ್ಲದೆ ನೀರು ಸೋರುತ್ತದೆ. ಬಡವರಿಗೆ ಶಾಖವಾಗುವ ಬಟ್ಟೆಗಳಿರುವುದಿಲ್ಲ. ಅವರುಡುವ ಬಟ್ಟೆಗಳು ತಂಗಾಳಿಯಿಂದಲೂ ತೇವದಿಂದಲೂ ಅವರನ್ನು ಕಾಪಾಡಲಾರವು, ಜಡಿಮಳೆ ಸುರಿಯುತ್ತಲೇ ಇದ್ದರೆ ಹೊರಗಿನ ಕೆಲಸಗಳಿಗೆ ತುಂಬಾ ವಿಷ್ಣು ವುಂಟು. ಆದುದರಿಂದ ಮಳೆಗಾಲದ ದಿನವು ಎಲ್ಲರಿಗೂ ಬೇಸರ ಪಡಿಸುವುದಲ್ಲದೆ, ಒಡವರಿಗೆ ಕ್ಷೇಶವನ್ನೂ ಅನಾರೋಗವನ್ನೂ ಉಂಟುಮಾಡಬಹುದು, ಆದರೆ ಮಳೆಯಿಂದಾಗುವ ಅನನುಕೂಲವು ಕ್ಷಣಿಕವು. ಅದರಿಂದಾಗುವ ಶಾಶ್ವತವಾದ ಪ್ರಯೋಜನಗಇನ್ನು ಯೋಚಿಸಿ ಎಲ್ಲರೂ ಈ ಪ್ರತಿಕೂಲಗಳನ್ನು ಲಕ್ಷ್ಯಮಾಡದೆ ಮನಸ್ಸಿಗೆ ಸಮಾಧಾನವನ್ನು ತಂದುಕೊಳ್ಳಬೇಕು. ಮಳೆಯು ವಾಯುಮಂಡಲಕ್ಕೆ ತಂಪುಮಾಡಿ, ಕೆರಗಳನ್ನೂ ಹೊಳೆಗಳನ್ನೂ ತುಂಬಿ, ಸೊಗಸಾದ ಬೆಳೆಯಾಗು ವುದೆಂಬ ಭರವಸವನ್ನು ಎಲ್ಲರಿಗೂ ಕೊಟ್ಟು ಹರ್ಷವನ್ನುಂಟುಮಾಡುವುದು. 21. ದಯೆ, ಹರರಿಗೆ ಒಳ್ಳೆಯದನ್ನು ಮಾಡುವ ಸ್ವಭಾವವು ದಯೆಯೆನಿಸಿಕೊಳ್ಳುವುದು. ಒಬ್ಬರಿಗೂ ಕೆಡಕನ್ನು ಮಾಡಕೂಡದೆಂಬ ತಿಳಿವಳಿಕೆ ಮಾತ್ರ ದಯೆಯಲ್ಲ. ಹಾಗೆ ತಿಳಿದುಕೊಂಡು, ಯಾರಾದರೂ ಕಷ್ಟಕ್ಕೊಳಗಾಗಿ ನರಳುತಿದ್ದರೆ ನೋಡಿಕೊಂಡು ಸುಮ್ಮನಿರದೆ, ಆತನ ಕಷ್ಟ ನಿವಾರಣೆಗೆ ತನ್ನ ಕೈಯಲಾದುದನ್ನೆಲ್ಲಾ ಮಾಡುವ ಸ್ವಭಾವವೇ ದಯೆಯು, ಕಾರ್ಯತಃ ದಯೆಯನ್ನು ತೋರಿಸುವುದುತ್ತಮ; ಇದು ಸಾಧ್ಯವಲ್ಲದಿದ್ದರೆ ಮಾತಿನಲ್ಲಾದರೂ ತೋರಿಸಬೇಕು. ಇದರಿಂದಲೂ ಕೂಡಿದಮಟ್ಟಿಗೆ ದುಃಖೋಪಶಮ.