ಪುಟ:ಪ್ರಬಂಧಮಂಜರಿ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

6 ದಯೆ ನವಾಗಿ, ಹರ್ಷವೂ ಧೈರ್ಯವೂ ಮನಸ್ಸಿನಲ್ಲಿ ಮೊಳೆವುವು. ಒಬ್ಬನು ಯಾವುದಾದರೂ ಕಷ್ಟಕ್ಕೊಳಗಾಗುವುದು ಸಹಜ. ಈ ಕಷ್ಟವು ನಮಗೆ ತಿಳಿದರೆ ಸರಿ; ಹಲವು ಸಂದರ್ಭಗಳಲ್ಲಿ ಇದು ತಿಳಿವುದು ಅಸಾಧ್ಯವು. ಆಗ ನಾವು ಮಾಡತಕ್ಕದ್ದೇನು ? ನಿರ್ದಯೆಯಿಂದ ಕಾಣಬಹುದೆ ? ಎಂದಿಗೂ ಕೂಡದು. ಪರರನ್ನು ಯಾವಾಗಲೂ ದಯೆಯಿಂದ ಕಾಣುವ ಗುಣವನ್ನು ನಮ್ಮಲ್ಲಿ ಉಂಟುಮಾಡಿಕೊಳ್ಳಬೇಕು. ಇಲ್ಲದಿದ್ದರೆಅಚಾತುರ್ಯದಿಂದಾಡಿದ ಕಠಿನೋಕ್ತಿಗಳುಮೊದಲೇನೊಂದಿರುವವರ ವ್ಯಥೆಯನ್ನು ಹೆಚ್ಚು ಮಾಡಾವು. ದಯೆಯನ್ನು ಹಲವು ಬಗೆಗಳಲ್ಲಿ ತೋರಿಸಬಹುದು. ಕಷ್ಟಕ್ಕೊಳಗಾಗಿರುವವರನ್ನು ಉಪೇಕ್ಷಿಸದೆ ಅನುತಾಪಪಡುವುದೊಂದು ವಿಧ, ಪ್ರೀತಿಯನ್ನು ತೋರಿಸುವುದು ಮತ್ತೊಂದು ವಿಧ. ಅಂತಹ ಪ್ರೀತಿಯು ಸಹೋದರರಲ್ಲಿ ಪ್ರಾರಂಭಿಸಬೇಕು. ಒಡಹುಟ್ಟಿದವರೇ ಒಬ್ಬರನ್ನೊಬ್ಬರು ನೋಡಿ ಅಸಹನ ಪಡುವುದುಂಟು. ಹೀಗೆ ನಡೆದುಕೊಳ್ಳದೆ ಎಲ್ಲರೂ ಒಬ್ಬರನ್ನೊಬ್ಬರು ಪ್ರೀತಿಸಬೇಕು. ದುರ್ದಶೆಯಲ್ಲಿರುವವರನ್ನು ಕನಿಕರಗೊಂಡು ಸಂತೈಸಬೇಕು. ಕಷ್ಟಕಾದವನೇ ನೆಂಟ?' ಎಂಬಂತೆ ಕಷ್ಟ ಕಾಲದಲ್ಲಿ ಸಹಾಯ. ಮಾಡುವುದೇ ಸ್ನೇಹಿತರ ಮತ್ತು ಬಂಧುಗಳ ಲಕ್ಷಣ, ಸಹಾಯಮಾಡಲು ಆವಶ್ಯಕತೆಯಿದೆಯೇ ಇಲ್ಲವೇ ಎಂಬುದನ್ನು ಮೊದಲು ನಿರ್ಧರಿಸಬೇಕು. ಆವಶ್ಯಕತೆಯಿಲ್ಲದವನಿಗೆ ಮಾಡಿದ ಸಹಾಯವು ದಯೆಯೆನಿಸಿಕೊಳ್ಳಲಾರದು. ಹಸು, ನಾಯಿ ಮೊದಲಾದ ಮೂಗು ಜಂತುಗಳಿಗೆ ತಕ್ಕ ತಿಂಡಿಯನ್ನೂ ಇರುವುದಕ್ಕೆ ಜಾಗವನ್ನೂ ಕೊಟ್ಟು ಪೋಷಿಸುವುದ ದಯಾಶಾಲಿಗೆ ಸೇರಿದುದು. ಇವುಗಳನ್ನು ಯಾವಾಗಲೂ ಕರುಣೆಯಿಂದ ಕಾಣಬೇಕು, ದಯೆ ಎಂದಿಗೂ ವ್ಯರ್ಥವಾಗಲಾರದು. ಒಬ್ಬರಿಗೆ ನಾವು ದಯೆಯನ್ನು ತೋರಿಸಿದರೆ, ನಮ್ಮ ನು ಅವರೂ ದಯೆಯಿಂದ ಕಾಣುವರು, ದಯಾಗುಣವು ಪರಲೋಕಕ್ಕೆ ಸಾಧನವು. ಯಶಸ್ಸಿನ ಮೇಲೆ ಆಸೆಯಿಂದಲೂ, ತಾನು ಅನ್ಯರಿಗೆ ಮಹೋಪಕಾರಮಾಡತಕ್ಕವನೆಂಬ ದುರಭಿಮಾನದಿಂದಲೂ ದಯೆಯನ್ನು ತೋರಬಾರದು. ಪಾರಮಾರ್ಥಿಕವಾಗಿ ತೋರಿಸಿದ ದಯೆಯೇ ಮೇಲೆನಿಸಿಕೊಳ್ಳುವುದು.