ಪುಟ:ಪ್ರಬಂಧಮಂಜರಿ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಬಂಧಮಂಜರಿ-ಎರಡನೆಯ ಭಾಗ ಯಾವಾಗಲೂ ಪ್ರಜಾಕ್ಷೇಮಚಿಂತನೆಯಲ್ಲಿಯೂ ರಾಜಭಕ್ತಿಯಲ್ಲಿಯೂ ನಿರತನಾಗಿರುವನು. ಅನ್ಯದೇಶೀಯರನ್ನು ದ್ವೇಷಿಸುವುದೂ ನಿಂದಿಸುವುದೂ, ಸ್ವದೇಶೀಯರ ವಿಷಯದಲ್ಲಿ ಕಣ್ಣು ಮುಚ್ಚಿಕೊಂಡಿರುವುದೂ, ಸರಕಾರವನ್ನು ಸುಮ್ಮನೆ ದೂಷಿಸುವುದೂ ಸ್ವದೇಶಾಭಿಮಾನಕ್ಕೆ ಲಕ್ಷಣಗಳಲ್ಲ. ಕೆಲವರು ವಾಚಾಲರು ತಾವು ಸ್ವದೇಶಾಭಿಮಾನಿಗಳೆಂದು ತೋರಿಸಿಕೊಂಡು ಉಪನ್ಯಾಸಗಳನ್ನು ಮಾಡಿ, ಜನರಿಗೆ ತಮ್ಮಲ್ಲಿ ನಂಬಿಕೆ ಹುಟ್ಟಿಸಿ ಅವರನ್ನು ವಶಮಾಡಿಕೊಂಡು ಅವರಿಂದ ತಮ್ಮ ಕೆಲಸವನ್ನು ನೆರವೇರಿಸಿಕೊಳ್ಳುವುದುಂಟು. ಇಂಥ ಸ್ವಾರ್ಥಪರರನ್ನು ಸ್ವದೇಶಾಭಿಮಾನಿಗಳೆಂದು ಗಣಿಸದೆ ದೂರ ತ್ಯಜಿಸಬೇಕು. ಸ್ವದೇಶಾಭಿಮಾನಕ್ಕೆ ಎಲ್ಲೆಲ್ಲಿಯೂ ಪುರಸ್ಕಾರವುಂಟು, ಸ್ವದೇಶಾಭಿಮಾನಿಗಳ ಹೆಸರು ಶಾಶ್ವತವಾಗಿ ನಿಲ್ಲುವಂತೆ, ಅವರ ಜ್ಞಾಪಕಾರ್ಥವಾಗಿ ಕಟ್ಟಡಗಳನ್ನು ಕಟ್ಟಿ ಸುವ ವಾಡಿಕೆಯಿದೆ. ದೇಶದ್ರೋಹಿಗೆ ಅತಿಕಠಿನವಾದ ಶಿಕ್ಷೆಯನ್ನು ವಿಧಿಸುವರು. ಪೂರ್ವಕಾಲದಲ್ಲಿ ನಮ್ಮ ದೇಶವು ಪಡೆದಿದ್ದ ಹೆಚ್ಚು ಗಾರಿಕೆಯನ್ನು ನೆನೆದುಕೊಂಡು ಸುಮ್ಮನೆ ತೃಪ್ತರಾಗಿದ್ದರೆ ಏನೂ ಫಲವಿಲ್ಲ. ಪೂರ್ವದ ಯಶಸ್ಸು ಮುಂದೆಯೂ ನಿಂತು, ಅದಕ್ಕಿಂತ ಅತಿಶಯವಾದ ಕೀರ್ತಿ ನಮ್ಮ ದೇಶಕ್ಕೆ ಒದಗುವಂತೆ ನಾವೆಲ್ಲರೂ ನಡೆದು, ಕೊಳ್ಳುವುದು ಕರ್ತವ್ಯವಾಗಿದೆ. 23. ಹೂಗಳು. ಹಗಳು ಭಗವಂತನ ಸೃಷ್ಟಿಯ ಅತಿಸುಂದರವಾದ ವಸ್ತುಗಳಲ್ಲಿ ಸೇರಿದುವು. ಚಿನ್ನ, ಬೆಳ್ಳಿ, ವಜ, ಕೆಂಪು-ಇವು ಸಿಕ್ಕುವುದೇ ಕಡಮೆ. ಇವುಗಳಿಂದ ಮಾಡಿದ ಒಡವೆಗಳಿಗೆ ಬೆಲೆ ಹೆಚ್ಚು. ಆ ಒಡವೆಗಳು ಹಣಗಾರರಿಗೆ ಸಾಧ್ಯವು, ಬಡವರಿಗೆ ದುರ್ಲಭ. ಹೂಗಳಾದರೋ ಸೀಮೆಸೀಮೆಗಳಲ್ಲಿ ಎಲ್ಲೆಲ್ಲಿಯೂ ಅಷ್ಟು ದುಡ್ಡಿಡದೆ ಹೇರಳವಾಗಿ ದೊರೆವುವು. ಹೂಗಳು ಒಡವೆಗಳಿಗಿಂತ ಅಂದವಾಗಿರುತ್ತವೆ. ಆದುದರಿಂದಲೇ ಹೂಗಳನ್ನು ತಲೆಯಲ್ಲಿ ಮುಡಿದುಕೊಳ್ಳುವ ವಾಡಿಕೆ ಎಲ್ಲಾ ದೇಶಗಳಲ್ಲಿಯೂ ಇದೆ, ಹೂಗಳನ್ನು ಎಂಥಾ ಬಡವರಾದರೂ ಮುಡಿಯಬಹುದು. ಹಣಗಾರರಲ್ಲಿರುವ