ಪುಟ:ಪ್ರಬಂಧಮಂಜರಿ.djvu/೧೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ್ರಬಂಧಮಂಜರಿ-ಎರಡನೆಯ ಭಾಗ ಯಥೇಚ್ಛವಾಗಿ ಕೊಟ್ಟು ತನ್ನ ಕುಟುಂಬಭರಣಕ್ಕೆ ಗತಿಯಿಲ್ಲದೆ ಮಾಡಿ. ಕೊಳ್ಳುವುದು ಹುಚ್ಚತನವು. ಆದುದರಿಂದ ದಾನಮಾಡುವುದರಲ್ಲಿ ಎರಡು ವಿಷಯಗಳನ್ನು ಚೆನ್ನಾಗಿ ನೆನಪಿನಲ್ಲಿಡಬೇಕು ಸ್ವಕುಟುಂಬಭರಣಕ್ಕೆ ಬೇಕಾದ ದುದನ್ನೆಲ್ಲಾ ಮೊದಲು ನೋಡಿಕೊಳ್ಳುವುದು; ಮತ್ತು ಹೊರಗಿನವರಲ್ಲಿ ಅರ್ಹರಾದವರನ್ನು ನೋಡುವುದು, ಇಲ್ಲದಿದ್ದರೆ ಕಾಯಶಕ್ತಿಯಿದ್ದು ಕೆಲಸ ಮಾಡಿ ಜೀವಿಸಬಲ್ಲ ಅನೇಕರು ಯಾಚನೆಯೇ ಸೌಖ್ಯವೆಂದರಿತು ಯಾಚಕ ರಾಗುವುದರಿಂದ ಸೋಮಾರಿತನವು ಲೋಕದಲ್ಲಿ ಹೆಚ್ಚಿ ತುಂಬಾ ಕೆಡಕುಗಳು ಸಂಭವಿಸುವುವು. ಭೂಕಂಪ, ಬಿರುಗಾಳಿ, ಬೆಂಕಿಬೀಳುವುದು, ಪ್ರವಾಹ ಇವು ಮುಂತಾದ ಅಪಾಯಗಳಿಂದ ಹಠಾತ್ಯಾಗಿ ಕೆಟ್ಟು ಹೋದ ನಿರ್ಭಾಗ್ಯರಾದ ಜನರಿಗೆ ಸಹಾಯ ಮಾಡುವುದರಲ್ಲಿ ಮೇಲೆ ಸೂಚಿಸಿದ ಎರಡನೆಯ ವಿಧಿಯ ಅಡ್ಡಿಯೇನೂ ಇರುವುದಿಲ್ಲ, ಇಂಥ ಸಂದರ್ಭದಲ್ಲಿ ಸ್ವಲ್ಪ ಸಹಾಯ ಮಾಡಿ ದರೂ ಒಡನೆಯೇ ತುಂಬಾ ಕಷ್ಟ ಶಮನವಾಗುವುದು, ಮತ್ತು ಈ ತರದ ಸಹಾಯದಿಂದ ಯಾವ ವಿಧವಾದ ಕೆಡಕೂ ಮುಂದೆ ಉಂಟಾಗುವುದಿಲ್ಲ. 28. ಸ್ನೇಹ, ರಕ್ತಸಂಬಂಧವಿಲ್ಲದಿರುವವರಲ್ಲಿ ಒಬ್ಬರಮೇಲೊಬ್ಬ ರಿಗಿರುವ ಪ್ರೀತಿಗೆ ಸ್ನೇಹವೆಂದು ಹೆಸರು, ಸಭೆಗಳಲ್ಲಿ ನಾನಾವಿಧವಾದ ನಮ್ಮ ಅಭಿಪ್ರಾಯಗಳನ್ನು ತಿಳಿಯಪಡಿಸುವುದಕ್ಕೂ, ಸಭಿಕರು ನಮ್ಮ ತಪ್ಪುಗಳನ್ನು ತಿದ್ದುವುದಕ್ಕೂ ಅವಕಾಶವುಂಟೆಂದು ಕೆಲವರು ತಿಳಿದಿರಬಹುದು. ಸ್ವಲ್ಪ ಯೋಚಿಸಿ ನೋಡಿದರೆ, ಆ ಉದ್ದೇಶ ನೆರವೇರುವುದಕ್ಕೆ ಸಭೆಗಳು ಅಷ್ಟು ಸರಿಯಾದ ಸ್ಥಳವಲ್ಲವೆಂದು ತೋರುವುದು, ಬಹಳ ಸಲುಗೆಯಳ್ಳ ನಮ್ಮ ಗೆಳೆಯರೊಡನೆ ನಾವು ಮಾತಾಡುವಾಗ ಯಾವ ನಿರ್ಬಂಧವೂ ಇಲ್ಲ. ಮನಸ್ಸಿಗೆ ಬಂದಂತೆ ನಮ್ಮ ಅಭಿಪ್ರಾಯಗಳನ್ನು ಧಾರಾಳವಾಗಿ ತಿಳಿಸಲವಕಾಶವುಂಟು. ಮಿತ್ರರು ನಮ್ಮ ಕಷ್ಟ ಕಾಲದಲ್ಲಿ ಕಷ್ಟವನ್ನು ಹೋಗಲಾಡಿಸುವರು; ಸಂತೋಷಕಾಲದಲ್ಲಿ ತಾವೂಸಂತೋಷಪಡುವರಲ್ಲದೆ ನಮ್ಮ ಸಂತೋಷವನ್ನು ಇನ್ನೂ ಹೆಚ್ಚಿಸುವರು, ಪಟ್ಟಣಗಳಿಗೆ ಕೋಟೆಯಂತೆ ನಮಗೆ ಆಪ್ತಮಿತ್ರನು ಒಳ್ಳೆಯ ರಕ್ಷಕನು; ಅಜ್ಞಾನವೆಂಬ ಕತ್ತಲೆಯನ್ನೂ ದುಷ್ಮಾಲೋಚನೆಗಳೆಂಬ