ಪುಟ:ಪ್ರಬಂಧಮಂಜರಿ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ನೇಹ ೯೭ ಮಂಜುಗಳನ್ನೂ ಪರಿಹರಿಸುವ ಸೂರ್ಯನು, ಪ್ರಪಂಚದಲ್ಲಿ ಗೆಳೆತನವಿಲ್ಲದಿರುವುದು ಸೂರ್ಯನಿಲ್ಲದಿರುವ ಹಾಗೆ' ಎಂದು ಒಬ್ಬ ವಿದ್ವಾಂಸನೂ, ಗೆಳೆಯರಿಲ್ಲದ ಪ್ರಪಂಚವರಣ್ಯವು” ಎಂದು ಮತ್ತೊಬ್ಬ ಘನಪಂಡಿತನೂ ಹೇಳಿರುತ್ತಾರೆ. ಯೋಗ್ಯನಾದ ಸಖನೊಡನೆ ಮಾತಾಡುವುದರಿಂದ ಬುದ್ದಿ ಹೆಚ್ಚು. ವುದು. ಅವನೊಡನೆ ಒಂದು ಘಂಟೆಯವರೆಗೆ ಮಾಡಿದ ಸಂವಾದದಿಂದ ಆಗುವ ಪ್ರಯೋಜನವು, ನಾವೇ ಒಂದು ದಿನವೆಲ್ಲ ಯೋಚಿಸಿದರೂ ಆಗಲಾರದು. ಅಂಥ ಗೆಳೆಯರನ್ನು ಪಡೆವುದು ಬಲು ಕಷ್ಟ. ನಾವು ಸೌಖ್ಯವನ್ನೂ ಅಂತಶುದ್ಧಿಯನ್ನೂ ಕೊರುವುದಾದರೆ ಗೆಳೆಯರನ್ನು ಬಹಳ ಬುದ್ದಿವಂತಿಕೆ ಯಿಂದ ಆರಿಸಿಕೊಳ್ಳಬೇಕು. ಗೆಳೆಯರು ಒಳ್ಳೆಯವರಾದರೆ ನಮ್ಮನ್ನು ಮುಂದಕ್ಕೆ ತರುತ್ತಾರೆ, ಅಲ್ಲದಿದ್ದರೆ ಹಾಳುಮಾಡುತ್ತಾರೆ, ಕೆಲವರು ಸಿಕ್ಕಿದವರ ಸಂಗಡಲೆಲ್ಲ ಸ್ನೇಹ ಬೆಳೆಸುವರು. ಇದು ದೊಡ್ಡ ತಪ್ಪು. ನಮ್ಮ ಹತ್ತಿರ ಬಂದವರನ್ನು ಮರಾದೆಯಿಂದಲೂ ಪ್ರೀತಿಯಿಂದಲೂ ಕಾಣುವುದು ಯುಕ್ತವು; ಆದರೆ ಒಂದವರನ್ನೆಲ್ಲ ಗೆಳೆಯರನ್ನಾಗಿ ಮಾಡಿಕೊಳ್ಳುವುದನುಚಿತವು. ಮಗ್ಗಲುಮನೆಯಲ್ಲಿ ವಾಸಿಸುವುದರಿಂದಲೋ, ಒಂದೇ ಕೆಲಸಗಾರನಾದುದರಿಂದಲೋ, ಒಂದೇ ರೈಲಿನಲ್ಲಿ ಪ್ರಯಾಣಮಾಡಿದುದರಿಂದಲೋ, ಅಥವಾ ಇನ್ನಾವ ಅಲ್ಪ ಕಾರಣದಿಂದಲೋ ಕೆಲವರು ಒಬ್ಬನ ಸ್ನೇಹವನ್ನು ಬೆಳೆಸುವರು. ಹೀಗೆ ಮಾಡಿಕೊಂಡ ಗೆಳೆಯರಿಗೆ ಸ್ನೇಹದ ಪ್ರತಿಬಿಂಬಗಳು” ಎಂಬ ಹೆಸರನ್ನು ಒಬ್ಬ ಮಹಾ ಪಂಡಿತನು ಕೊಟ್ಟಿದ್ದಾನೆ. ಆದುದರಿಂದ ಗೆಳೆಯರನ್ನು ಪಡೆಯಬೇಕಾದರೆ, -ಸೌಹಾರ್ದಸ್ವರ್ಣರೇಖಣಾ ಮುಚ್ಚಾ ವಚಭಿದಾಜುಷಾಂ | ಪರೋಕ್ಷಮಿತಿ ಕೋಸಿ ಪರೀಕ್ಷಾನಿಕಷೋಪಲಃ ||” ಎಂಬಂತೆ ಅವರನ್ನು ಚೆನ್ನಾಗಿ ಪರಿಶೀಲಿಸಿನೋಡಬೇಕು. ಕೆಲವರು ಸ್ವಪ್ರಯೋಜನಕ್ಕಾಗಿ ಬಂದು ಸೇರಿ ಅಚ್ಚು ಮೆಚ್ಚಾಗಿರುತ್ತಿದ್ದು ತಮ್ಮ ಪ್ರಯೋಜನವನ್ನು ಪಡೆದಮೇಲೆ ಬಿಟ್ಟು ನಡೆವರು; ಮರಳಿ ಸುಳಿವುದಿಲ್ಲ. ಗೆಳೆಯನಾಗ ಬೇಕಾದರೆ ಅವನು ನಂಬಿಕೆಗೆ ಅರ್ಹನಾಗಿರಬೇಕು, ಸ್ಟ್ರ್ಯಾದಿ ಸುಗುಣಗಳು, ಒಳ್ಳೆಯ ನಡತೆ, ಹೆಚ್ಚಿನ ತಿಳಿವಳಿಕೆ, ಯುಕ್ರಾಯುಕ್ತ ವಿವೇಕ,