ಪುಟ:ಪ್ರಬಂಧಮಂಜರಿ.djvu/೧೧೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೯೮ ಪ್ರಬಂಧಮಂಜರಿ-ಎರಡನೆಯ ಭಾಗ ಐಶ್ವರ್ಯವಯಸ್ಸುಗಳಲ್ಲಿ ಸಾಮ್ಯ, ಇವು ಮಿತ್ರನ ಮುಖ್ಯ ಲಕ್ಷಣಗಳು. ಒಂದು ದಿನದಲ್ಲಿ ಸ್ನೇಹಿತನಾಗಿರುವುದು, ಒಡನೆಯೇ ಬಿಟ್ಟು ಬಿಡುವುದು, ಮತ್ತೆ ಬಂದು ಸೇರುವುದು, ಈ ರೀತಿಯಿಲ್ಲದೆ ಮೊದಲಿಂದ ಕಡೆವರೆಗೂ ಒಂದೇ ವಿಧವಾಗಿರುವುದು ಸೈರ್ಯವು. ಐಶ್ವರ್ಯವಯಸ್ಸುಗಳಲ್ಲಿ ಸಮನಾಗಿಲ್ಲದಿದ್ದರೆ ತಿರಸ್ಕಾರದಿಂದ ಕಾಣುವನು. ಈ ರೀತಿಯಲ್ಲಿ ಬಲು ಚೆನ್ನಾಗಿ ಪರೀಕ್ಷಿಸಿ ಸಂಪಾದಿಸಿಕೊಂಡ ಗೆಳೆಯ. ನನ್ನು ನಮ್ಮ ಜೀವಮಾನವಿರುವವರೆಗೂ ಬಿಡಬಾರದು. ಮೈತ್ರಿಯನ್ನು ಶಾಶ್ವತವಾಗಿ ಕಾಪಾಡಿಕೊಳ್ಳುವುದಕ್ಕೆ ತಕ್ಕ ಎಲ್ಲಾ ಪ್ರಯತ್ನ ಗಳನ್ನೂ ಮಾಡಬೇಕು. ನಾವು ಮಿತ್ರರ ವಿಷಯದಲ್ಲಿ ಒಂದೇ ವಿಧವಾಗಿಯೂ ಸರಿ, ಯಾಗಿಯೂ ನಡೆದುಕೊಳ್ಳಬೇಕು. ಮಿತ್ರರ ಮನಸ್ಸುಗಳನ್ನು ಕೆಡಿಸುವ ಕೆಲವು ಸಂದರ್ಭಗಳು ಪ್ರಾಪ್ತವಾಗಬಹುದು. ಅಂಥ ದುಷ್ಕಾಲದಲ್ಲಿ ತಾಳ್ಮೆಯನ್ನವಲಂಬಿಸಿ ಎಲ್ಲವನ್ನೂ ಮರೆತುಬಿಟ್ಟು ಮನಸ್ಸುಗಳನ್ನು ಸಮಾಧಾನಪಡಿಸಿಕೊಳ್ಳುವುದು, ಮಿತ್ರಂಸ್ವಚ್ಛತಯಾ ಎಂಬಂತೆ ಮಿತ್ರನನ್ನು ನಾವು ನಿರ್ಮಲಹೃದಯದಿಂದ ಕಾಣಬೇಕು. 29. ಕಾಲೋಪಯೋಗ, ಕಾಲವೆಂಬುದು ದೇವರು ನಮಗೆ ಕೊಟ್ಟಿರುವವುಗಳಲ್ಲಿ ಅತ್ಯಂತ ಬೆಲೆಯುಳ್ಳದ್ದು, ಅಲ್ಲದೆ ಅದು ಬಲು ಜಾಗ್ರತೆಯಾಗಿ ಕಳೆದು ಹೋಗತಕ್ಕದ್ದು. ಋತುಗಳು, ಚಂದ್ರಸೂರ್ಯರು ಇವು ಹೋಗಿ ಮತ್ತೆ ಬರುವುವು. ಕಳೆದ ಕಾಲವನ್ನು ಮರಳಿ ಹೊಂದಲಾಗುವುದಿಲ್ಲ. ಒಂದು ರೂಪಾಯಿ ಹೋದರೆ ಬಹಳ ಸೇಚಾಡುತ್ತೇವೆ. ದಿನಗಳು ಒಂದಾದಮೇಲೊಂದು ಕಳೆದು ಹೋಗುವ ವುದನ್ನು ನಾವು ಲಕ್ಷ್ಯಮಾಡುವುದೇ ಇಲ್ಲ. ಇದು ತಪ್ಪು. ಕಾಲವೇ ಹಣ. ಇದಕ್ಕೆ ಬೆಲೆ ಕಟ್ಟುವುದಕ್ಕೆ ಆಗುವುದಿಲ್ಲ. ಈ ಅಂಶವನ್ನರಿಯದೆ ಅನೇಕರು ಕಾಲವನ್ನು ವ್ಯರ್ಥವಾಗಿ ಕಳೆವರು. ನಮ್ಮ ಜೀವಮಾನದ ಪ್ರತಿಕ್ಷಣವನ್ನೂ ಸತ್ಕಾರ್ಯದಲ್ಲಿ ಉಪಯೋಗಿಸಿದರೆ ನಮಗೂ ಲೋಕಕ್ಕೂ ಎಷ್ಟೋ ಪ್ರಯೋಜನಗಳಾಗುತ್ತವೆ.