ಪುಟ:ಪ್ರಬಂಧಮಂಜರಿ.djvu/೧೧೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಾಲೋಪಯೋಗ. ଟ ನಮ್ಮ ಜೀವಮಾನವು ಕಾಲವಲ್ಲದೆ ಬೇರೆಯಲ್ಲ. ಮರಣವನ್ನು ನೆನೆದಾಗ ನಡುಗುವೆವು. ಪ್ರಾಣವನ್ನುಳಿಸಿಕೊಳ್ಳಲು, ಕಡಬಹುದಾದ ಕಷ್ಟಗಳನ್ನೆಲ್ಲಾ ಪಡುವುದಲ್ಲದೆ, ಮಾಡಬಹುದಾದ ವೆಚ್ಚಗಳನ್ನೆಲ್ಲಾ ಮಾಡು ತೇವೆ. ನಾವು ಜೀವಿಸುವ ಘಂಟೆಗಳು, ದಿನಗಳು ಇವುಗಳನ್ನೆಲ್ಲಾ ಕೂಡಿದರೆ ನಮ್ಮ ಒಟ್ಟು ಜೀವಮಾನವಾಗುವುದು. ಇದನ್ನು ಮರೆತು ಒಂದು ನಿಮಿಷವಾಗಲಿ, ಘಂಟೆಯಾಗಲಿ, ದಿನವಾಗಲಿ, ತಿಂಗಳಾಗಲಿ, ಎಷ್ಟು ಸ್ವಲ್ಪ ಕಾಲವನ್ನು ವ್ಯರ್ಥವಾಗಿ ಕಳೆದರೆ ಅಷ್ಟು ಭಾಗವು ನಮ್ಮ ಜೀವಮಾನದಿಂದ ನಷ್ಟವಾಗಿ ಹೋದಂತೆ ತಿಳಿಯಬೇಕು. ಆದುದರಿಂದ ಕಾಲ. ವನ್ನು ವ್ಯರ್ಥವಾಗಿ ಕಳೆವುದು ಒಂದು ಬಗೆಯ ಆತ್ಮಹತ್ಯವು ಇನ್ನೊಂದು ವಿಷಯವನ್ನು ಮರೆಯದೆ ಚೆನ್ನಾಗಿ ನೆನಪಿನಲ್ಲಿಟ್ಟಿದ್ದರೆ, ಕಾಲವನ್ನು ವ್ಯರ್ಥವಾಗಿ ಕಳೆಯಲವಕಾಶ ಕಡಮೆಯಾಗುವುದು. ನಮ್ಮ ಜೀವಮಾನವು ಬಹಳ ಅಲ್ಪವು. ನಾವು ಸುಮಾರು ಅರುವತ್ತು ಅಥವಾ ಎಪ್ಪತ್ತು ವರ್ಷಗಳು ಬದುಕಿದ್ದರೆ ಹೆಚ್ಚು. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲು ನಿದ್ದೆಯಲ್ಲಿ ಹೋಗುತ್ತದೆ. ಸ್ವಲ್ಪ ಭಾಗವನ್ನು ಆಟಪಾಟ, ಊಟ, ಉಪಚಾರಗಳಲ್ಲಿಯೂ, ಇನ್ನೂ ಸ್ವಲ್ಪ ವನ್ನು ಉಡಿಗೆ ತೊಡಿಗೆ, ಪ್ರಯಾಣ ಮುಂತಾದವುಗಳಲ್ಲಿಯೂ , ಮತ್ತೆ ಸ್ವಲ್ಪ ಭಾಗವನ್ನು ಕಾಯಿಲೆಯಲ್ಲಿಯೂ ಕಳೆದು ಬಿಡುತ್ತೇವೆ. ಇವುಗಳನ್ನೆಲ್ಲ ತಳ್ಳಿ ಬಿಟ್ಟರೆ ನಮ್ಮ ಜೀವಮಾನದಲ್ಲಿ ಉಳಿವುದು ಹದಿನೈದು ಇಪ್ಪತ್ತು ವರ್ಷಗಳ ಮೇಲಿಲ್ಲ. ಇದನ್ನು ಯಾರು ನೆನಪಿನಲ್ಲಿಡುವರೋ ಅವರು ಒಂದು ಕ್ಷಣಮಾತ್ರವನ್ನೂ ವ್ಯರ್ಥವಾಗಿ ಕಳೆಯಲಾರರು. ಕಾಲವನ್ನು ವ್ಯರ್ಥವಾಗಿ ಎಂದಿಗೂ ಕಳೆಯಬಾರದು; ಇದನ್ನು ಸದ್ವಿನಿಯೋಗಪಡಿಸಬೇಕು.ಕಾಲದ ಸದ್ಯ ಯವವುದು?ದುರ್ವ್ಯಯವಾವುದು ? ತನಗೂ ಇತರರಿಗೂ ಫಲವಾಗುವಂತೆ ಕಾಲವನ್ನು ಪ್ರಯೋಗಿಸುವುದೇ ಅದರ ಸದ್ಯಯವು; ಇದಲ್ಲದಿರುವುದೇ ದುರ್ವ್ಯಯವು. ಕಾಲವನ್ನು ಸರಿಯಾಗಿ ಕಳೆ ವುದಕ್ಕೆ ಅನೇಕ ಮಾರ್ಗಗಳುಂಟು. ಇವುಗಳಲ್ಲಿ ಉತ್ತಮವಾದುವು ಅನಾಥರಿಗೆ ಸಹಾಯಮಾಡುವುದು, ದುಃಖಿತರನ್ನು ಸಂತೈಸುವುದು, ಅಜ್ಞಾನಿಗೆ ಜ್ಞಾನೋಪದೇಶಮಾಡುವುದು, ಕೋಪಗೊಂಡವರಿಗೆ ಕೋಪ ಬಿಡಿಸು