ಪುಟ:ಪ್ರಬಂಧಮಂಜರಿ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೩ ವೃತ್ತಾಂತ ಪ್ರಕೆಗಳು, ದೆಯೇ ಹೋಗುತ್ತಿತ್ತು; ಏಕೆಂದರೆ, ವೃತ್ತಾಂತ ಪತ್ರಿಕೆಗಳು ತತ್ಕಾಲದಲ್ಲಿ ನಡೆವ ಸಂಗತಿಗಳನ್ನು ತಿಳಿಸುವ ಚರಿತ್ರೆಯಾಗಿವೆ. * ವೃತ್ತಾಂತಪತ್ರಿಕೆಗಳನ್ನೊದುವುದುನಿಷ್ಪಲವೆಂತಲೂ, ಅವನ್ನೊದುವು ದರಲ್ಲಿ ಕಳೆದ ಕಾಲವು ವ್ಯರ್ಥವೆಂತಲೂ ಕೆಲವರು ಹೇಳುವರು. ಹೀಗೆ ಹೇಳುವುದು ಸರಿಯಲ್ಲ. ಪತ್ರಿಕೆಗಳಲ್ಲಿರುವ ಕೆಲವಂಶಗಳು ಕೆಲವರಿಗೆ ಮಾತ್ರ ಅನುಪಯುಕ್ತವಾಗಿರಬಹುದಾದರೂ, ಈ ಕೆಲವಂಶಗಳಿಗಾಗಿ ಪತ್ರಿಕೆಗಳೋದು ವುದನ್ನೆ ಸಂಪೂರ್ಣವಾಗಿ ಬಿಡುವದನುಚಿತವೂ, ವೃತ್ತಾಂತಪತ್ರಿಕೆಗಳಿಂದ ಹೊಸ ಸಮಾಚಾರಗಳೇ ಅಲ್ಲದೆ, ಇನ್ನೂ ಹಲವುಬಗೆಯ ವಿಷಯಗಳು ತಿಳಿಯಬರುವುವು, ಮೊದಲುಮೊದಲು ಪ್ರಕಟಿಸಿದ ವೃತ್ತಾಂತಪತ್ರಿಕೆಗಳಿಗೆ ರಾಜ್ಯಭಾರದ ಆಡಳಿತಗಳನ್ನು ಪ್ರಜೆಗಳಿಗೆ ಬೋಧಿಸುವದೂ;ಕ್ಷೇಮಾರ್ಥವಾದ ಏರ್ಪಾಡಿನ ವಿಷಯದಲ್ಲಿ ಪ್ರಜೆಗಳ ಪ್ರಾರ್ಥನೆಗಳನ್ನು ಸರ್ಕಾರದವರಿಗೆ ತಿಳಿಯಪಡಿಸುವುದೂ ಮುಖ್ಯೋದ್ದೇಶಗಳಾಗಿದ್ದವು. ಈಗಿನ ಪತ್ರಿಕೆಗಳು ಈ ಕೆಲಸವನ್ನು ಮಾಡುವುದಲ್ಲದೆ, ರಾಜ್ಯ ತಂತ್ರ, ನೀತಿ, ವಿದ್ಯೆ, ಜಾತಿ, ಮತ ಮುಂತಾದ ಅನೇಕ ವಿಷಯಗಳಲ್ಲಿ ತಿಳಿಯಬೇಕಾದುದನ್ನೂ ಬೋಧಿಸುತ್ತವೆ. ಈಗ ಶ್ರೇಷ್ಠವಾದ ಪತ್ರಿಕೆಗಳನ್ನು ನಡೆಸುವವರು ಸಕಲ ಶಾಸ್ತ್ರಗಳನ್ನೂ ತಿಳಿದ ಪಂಡಿತರು. ಆದುದರಿಂದ ಅವರ ಪತ್ರಿಕೆಯಲ್ಲಿ ಬರೆದಿರುವ ಸಂಗತಿಗಳನ್ನು ಜನರೆಲ್ಲ ಓದಿ ತಿಳಿಯುತ್ತಾರೆ. ಇಂಥ ವೃತಾಂತಪತ್ರಿಕೆಗಳಿಂದ ಆಗುವ ಕೆಲಸಗಳು ಅದ್ಭುತವಾಗಿವೆ. ಇವು ರಾಜ್ಯಭಾರಗಳನ್ನೇ ತಲೆಕೆಳಗಾಗಿಮಾಡಬಹುದು ಇದಲ್ಲದೆ ಭೌತಿಕಶಾಸ್ತ್ರ, ಜ್ಯೋತಿಶಾಸ್ತ್ರ ಮುಂತಾದುವುಗಳಲ್ಲಿ ವಿದ್ವಾಂಸರು ಹೊಸದಾಗಿ ಕಂಡುಹಿಡಿದ ವಿಷಯಗಳನ್ನ ರಿಯಬೇಕಾದರೂ, ಹೊಸದಾಗಿ ಪ್ರಚಾರಕ್ಕೆ ಬಂದಗ್ರಂಥಗಳ ವಿಚಾರವನ್ನು ತಿಳಿಯಬೇಕಾದರೂ, ವೃತ್ತಾಂತಪತ್ರಿಕೆಗಳನ್ನು ಬಿಟ್ಟು ಮತ್ತಾವುದೂ ಇಲ್ಲ. ಒಂದು ಪತ್ರಿಕೆಯಲ್ಲಿ ಯಾವುದೋ ಒಂದು ವಿಷಯವನ್ನು ಒಂದು ಬಗೆಯಲ್ಲಿ ಚರ್ಚಿಸಿ ಬರೆದಿರಬಹುದು, ಮತ್ತೊಂದರಲ್ಲಿ ಅದೇ ವಿಷಯವನ್ನು ಬೇರೆ ರೀತಿಯಲ್ಲಿ ಹೇಳಿರು ಬಹುದು. ಈ ಎರಡು ಪತ್ರಿಕೆಗಳನ್ನೂ ಓದಿ, ಚರ್ಚಿತವಾದ ವಿಷಯವನ್ನು ಪರ್ಯಾಲೋಚಿಸಿ ಗ್ರಹಿಸುವುದರಿಂದ ನಮ್ಮ ಬುದ್ದಿ ಕೌಶಲ್ಯವು ಹೆಚ್ಚುವುದು