ಪುಟ:ಪ್ರಬಂಧಮಂಜರಿ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೬ ಪ್ರಬಂಧಮಂಜರಿ ಎರಡನೆಯ ಭಾಗ ಟಾಗಿ ಸಂಚಾರವು ದುಷ್ಕರವಾಗಿದ್ದಿತು. ಅಲ್ಲದೆ ಗಾಡಿಗಳ ಅಲ್ಲಾಟದಿಂದ ದೇಹಕ್ಕೆ ಪೆಟ್ಟು ತಗಲಿ ಆಗುತ್ತಿದ್ದ ಆಯಾಸವನ್ನು ಹೇಳತೀರದು. ( ಬಂಡಿ ಬಂಡಾಟಿ, ಹೇರು ಹೆಡ್ಡಾಟ. ರೈಲು ಬಂದಂದಿನಿಂದ ಈ ಕಷ್ಟಗಳೂ ಭೀತಿ ಗಳೂ ತಪ್ಪಿವೆ. ಸ್ವಲ್ಪ ದುಡ್ಡು ವೆಚ್ಚ ಮಾಡಿದರೆ, ದೇಶದಲ್ಲೆಲ್ಲ ಸ್ವಲ್ಪ ಕಾಲದ ಲ್ಲಿಯೇ ಸುಖದಿಂದಸಂಚಾರಮಾಡಬಹುದು. ಪ್ರಯಾಣಸೌಲಭ್ಯವೇ ಅಲ್ಲದೆ ರೈಲಿನಿಂದ ನಮ್ಮ ದೇಶಕ್ಕೆ ಇನ್ನೂ ಅನೇಕ ಉಪಯೋಗಗಳುಂಟು. ಪೂ. ರ್ವಕಾಲದಲ್ಲಿ ಒಂದು ಸೀಮೆಯ ಕಣಜಗಳಲ್ಲಿ ಧಾನ್ಯವು ಯಥೇಚ್ಛವಾಗಿ ತುಂಬಿರಬಹುದಾಗಿದ್ದರೂ, ಮತ್ತೊಂದು ಸೀಮೆಯಲ್ಲಿ ಜನರು ತಿನ್ನುವುದಕ್ಕೆ ಹಿಟ್ಟಿಲ್ಲದೆ ಬರದಿಂದ ಸಾಯುತ್ತಿದ್ದರು. ಈಗ ಎಲ್ಲಿಧಾನ್ಯ ಹೆಚ್ಚಾಗಿದೆಯೋ ಅಲ್ಲಿಂದ ಬರಬಂದಿರುವ ಕಡೆಗೆ ದವಸವನ್ನು ರೈಲುಗಾಡಿಗಳಲ್ಲಿ ಸ್ವಲ್ಪ ಕಾಲ ದಲ್ಲಿಯೇ ಸಾಗಿಸುವುದು ಸಾಧ್ಯವಾಗಿದೆ. ಇದರಿಂದ ವ್ಯಾಪಾರವು ಹೆಚ್ಚಿ ಅನೇಕರು ಹಣಗಾರರಾಗಿರುವರು. ವ್ಯಾಪಾರಕ್ಕೆ ಬೇಕಾದ ಸರಕುಗಳನ್ನು ಗಳಿಸುವುದಕ್ಕಾಗಿ ಜನರು ಬೆಳೆಗಳನ್ನು ತೆಗೆಯಲುದ್ಯೋಗಿಸಿ ವ್ಯವಸಾಯವು ಹೆಚ್ಚಿದೆ. ವ್ಯಾಪಾರವು ಎಷ್ಟು ಪ್ರಬಲವಾಗಿದೆಯೆಂಬುದನ್ನು ತಿಳಿಯಬೇಕಾದರೆ, ಈಗ ರಫ್ತಾಗುವ ಪದಾರ್ಥಗಳ ಬೆಲೆಯನ್ನು ಮೂವತ್ತು ವರ್ಷಗಳ ಕೆಳಗೆ ರಫ್ತಾಗುತ್ತಿದ್ದ ಸಾಮಾನುಗಳ ಬೆಲೆಯೊಡನೆ ಹೋಲಿಸಿನೋಡಬೇಕು. ವ್ಯಾಪಾರವು ಸ್ವದೇಶದಲ್ಲಿಯೇ ಅಲ್ಲದೆ ಅನ್ಯ ದೇಶಗಳೊಡನೆಯ ಹೆಚ್ಚುತ್ತಾ ಬಂದಿದೆ. ಇಂಗ್ಲೆಂಡಿಗೆ ಧಾನ್ಯದ ಸರಪರಾಯಿಯನ್ನು ಬಾರಿ'ಬಾರಿಗೂ ಮಾಡುವುದರಿಂದ ಪಂಚಾಬು ಮತ್ತು ವಾಯವ್ಯ ಪ್ರಾಂತ್ಯಗಳು ಧಾನ್ಯ ಬೆಳೆವ ದೊಡ್ಡ ದೇಶಗಳೆಂದು ಹೆಸರುಗೊಂಡಿವೆ. - ಆದುದರಿಂದ ರೈಲುಭಾಟೆಯಿರುವ ದೇಶದಲ್ಲಿ ಪ್ರಯಾಣಕ್ಕಾಗಿ ಹಣವೂ, ಅದಕ್ಕಿಂತ ಹೆಚ್ಚು ಬೆಲೆಯುಳ್ಳ ಕಾಲವೂ ತುಂಬಾ ವೆಚ್ಚವಾಗುವುದಿಲ್ಲ. ವ್ಯವಸಾಯವೂ ವ್ಯಾಪಾರವೂ ಪ್ರಬಲಿಸಿ, ಜನರ ಐಶ್ವರ್ಯವು ಹೆಚ್ಚುವುದು. ಹಳ್ಳಿಗಳನ್ನು ಬಿಟ್ಟು ವಿದ್ಯೆಯನ್ನು ಕಲಿಯಕೋರುವವರು ನಾಗರಿಕತೆಗೂ ವಿದ್ಯೆಗೂ ನೆಲೆಯಾದ ದೊಡ್ಡ ದೊಡ್ಡ ಪಟ್ಟಣಗಳಿಗೆ ಹೋಗಲು ಬಲು ಆನು. ಕೂಲ್ಯವುಂಟು.ನಾನಾಜಾತಿಯವರು ಒಂದೇ ರೈಲುಗಾಡಿಯಲ್ಲಿ ಪ್ರಯಾಣ