ಪುಟ:ಪ್ರಬಂಧಮಂಜರಿ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೮ ಪ್ರಬಂಧಮಂಜರಿ-ಎರಡನೆಯಭಾಗ, ಮಾಡಬಲ್ಲನು. ಇಷ್ಟೇ ಅಲ್ಲ. ಒಂದೇ ಆಣೆಯನ್ನು ಕೊಟ್ಟರೆ, ಇಂಡಿಯಾದಲ್ಲಿ ಯಾವ ಊರಿಂದಾಗಲಿ ದ್ವೀಪಾಂತರವಾಗಿರುವ ಇಂಗ್ಲೆಂಡ್, ಸ್ಕಾಟ್ಲಂಡ್ ಐರೆಂಡ್ ದೇಶಗಳಲ್ಲಿನ ಯಾವ ಊರಿಗೆ ಬೇಕಾದರೂ ಕಾಗದವನ್ನು ಕಳುಹಬಹುದು! ಮೈಸೂರಿಂದ ಕಲ್ಕತ್ತೆಗೆ ಒಂದು ಕಾಗದವನ್ನು ಆಳಿನ ಕೈಯಲ್ಲಿ ಕಳು. ಹಿದರೆ ಬಹಳ ವೆಚ್ಚವಾಗುವುದೆಂದು ಹೇಳಿದುದಾಯಿತು. ಒಂದು ಕಾಗದವನ್ನು ತೆಗೆದುಕೊಂಡು ಹೋಗುವ ಆಳಿಗೆ ಅದರೊಡನೆ ಐವತ್ತು ಅಥವಾ ನೂರು ಕಾಗದಗಳನ್ನು ಕೊಂಡೊಯ್ಯುವುದೇನೂ ಭಾರವಾಗುವುದಿಲ್ಲ. ಈ ಕಾಗದಗಳನ್ನು ಕಳುಹಿಸುವುದರಲ್ಲಿ ಇಬ್ಬರು ಸೇರಿದರೆ, ಆದ ಖರ್ಚನ್ನು ಇಬ್ಬರೂ ಸಮವಾಗಿ ಹಂಚಿಕೊಳ್ಳಬೇಕಾಗುವುದು. ನೂರು ಮಂದಿ ಸೇರಿ, ದರೆ, ಒಟ್ಟು ವೆಚ್ಚದಲ್ಲಿ ನೂರರಲ್ಲೊಂದು ಪಾಲು ಒಬ್ಬೊಬ್ಬರಿಗೆ ಬೀಳುವುದು, ದೇಶದವರೆಲ್ಲರೂ ಸೇರಿದರೆ, ಒಟ್ಟು ವೆಚ್ಚವನ್ನು ಎಲ್ಲರಿಗೂ ಸಮವಾಗಿ ಹಂಚಬೇಕಾಗುವುದು. ಹೀಗೆ ಮಾಡುವುದರಿಂದ ಒಬ್ಬೊಬ್ಬನಿಗೆ ಅತಿ ಸ್ವಲ್ಪ ದ್ರವ್ಯ ವೆಚ್ಚವಾಗುತ್ತದೆ. ಇದೇ ಪೋಸ್ಟಾಫೀಸುಗಳ ಒಳಗುಟ್ಟು. ಹೀಗೆ ಕಾಗದಗಳನ್ನು ಸ್ಥಳದಿಂದ ಸ್ಥಳಕ್ಕೆ ತಲಪಿಸುವವರು ಸರ್ಕಾರದವರೇ ಆಗಿರಬೇಕೆಂಬ ವಿಧಿಯಿಲ್ಲ. ಪೋಸ್ಟಾಫೀಸುಗಳು ಸರ್ಕಾರದವರ ಅಧೀನದಲ್ಲಿರುವುದು ಹಲವು ಸೀಮೆಗಳಲ್ಲಿ ಅನುಕೂಲವಾಗಿ ತೋರಿದೆ, ಇಂಗ್ಲೆಂ. ಡಿನಲ್ಲಿ ಪೋಸ್ಟಾಫೀಸುಗಳಿಗೆಲ್ಲ ಅಧಿಪತಿಯಾದ ಅಧಿಕಾರಿಯನ್ನು ರಾಜ್ಯಭಾರದ ಮಂತ್ರಿಗಳಲ್ಲೊಬ್ಬನನ್ನಾಗಿ ಮಾಡಿದ್ದಾರೆ. ಇದರಿಂದ ಆ ಸೀಮೆಯಲ್ಲಿ ಪೋಸ್ಟಾಫೀಸುಗಳಿಗೆ ಎಷ್ಟು ಪ್ರಾಮುಖ್ಯವನ್ನು ಕೊಟ್ಟಿರುವರೆಂಬುದು ವ್ಯಕ್ತವಾಗುವುದು. ಪೋಸ್ಟಾಫೀಸುಗಳು ಕಾಗದಗಳನ್ನು ಸ್ಥಳದಿಂದ ಸ್ಥಳಕ್ಕೆ ಸಾಗಿಸುವುದೇ ಅಲ್ಲದೆ, ಹಣವನ್ನೂ ಊರಿಂದೂರಿಗೆ ತಲಪಿಸುತ್ತವೆ. ಇದಕ್ಕೂ ಅದೇ ಮೇರೆ ವೆಚ್ಚ ಕಡಮೆ. ಹೀಗೆಯೇ ಪುಸ್ತಕ, ಒಡವೆ, ಬಟ್ಟೆ ಮುಂತಾದುವನ್ನೂ ಪೋಸ್ಟಾಫೀಸು ಗಳ ಮೂಲಕ ಸ್ವಲ್ಪ ವೆಚ್ಚದಿಂದಲೇ ನಿರ್ಭಯವಾಗಿ ಕಳುಹಿಸಬಹುದು. ನಮಗೆ ಬರುವ ಆದಾಯದಲ್ಲಿ ವೆಚ್ಚ ಕಳಿದು ಪುಡಿಕಾ