ಪುಟ:ಪ್ರಬಂಧಮಂಜರಿ.djvu/೧೨೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೧೦ ಪ್ರಬಂಧಮಂಜರಿ ಎರಡನೆಯಭಾಗ್ಯ ಕಾರ್ಡುಹಾದುಹೋಗುವದೇಶಗಳಸರ್ಕಾರದವರಿಗೆಯಥೋಚಿತವಿಭಾಗಿ. ಸಲ್ಪಟ್ಟು,ನಮ್ಮ ಕಾರ್ಡು ಯಾವ ಸೀಮೆಗೆ ಬೇಕಾದರೂ ಹೋಗಬಹುದು. 34. ಹಿಂದೂದೇಶದಲ್ಲಿ ಇಂಗ್ಲಿಷರ ಆಳಿ ಕೆ. ಪಶ್ಚಿಮ ಸಮುದ್ರದ ಒಂದು ಚಿಕ್ಕ ದ್ವೀಪದವರು ಬಂದು, ವಿಶಾಲವಾದ ಈ ಹಿಂದೂ ದೇಶವನ್ನು ಜಯಿಸಿ, ಅದನ್ನು ಆಳುತ್ತಿರುವುದು ಲೋಕದಲ್ಲಿನಡೆದಿರುವ ಸಂಗತಿಗಳಲ್ಲೆಲ್ಲ ಅತ್ಯದ್ಭುತವಾದುದು. ಗ್ರೀಸ್, ರೋಮ್ ಮೊದಲಾದ ದೇಶದವರು ತಮ್ಮ ಸುತ್ತಮುತ್ತಲ ಸೀಮೆಗಳನ್ನು ಜಯಿಸಿ ಆಳಿದುದುಂಟು; ಆದರೆ ಇಂಗ್ಲೆಂಡಿ ಗೂ ಇಂಡಿಯಾಕ್ಕೂ ಸಾವಿರಾರು ಮೈಲಿಗಳ ದೂರವಿದ್ದರೂ, ಸಮುದ್ರಗಳ ಮೇಲೆ ಪ್ರಯಾಣಮಾಡುವ ಶಕ್ತಿಯಿಂದ ಆ ಸೀಮೆಯವರು ನಮ್ಮ ಸೀಮೆಯನ್ನು ತಮ್ಮ ಪಾಲಾಗಿಮಾಡಿಕೊಂಡಿರುವರು. ಭರತಖಂಡದಲ್ಲಿ ಆಂಗ್ಲೋಯರಾಜ್ಯಭಾರವು ಅಭೂತಪೂರ್ವವು. ಇಂಥ ಆಶ್ಚರ್ಯಕರವಾದ ಕೆಲಸದ ಪರಿಣಾಮವೇನಾದೀತೆನ್ನು ವುದನ್ನು ಈಗನಿರ್ಧರಿಸಲಾಗುವುದಿಲ್ಲವಾದರೂ , ಇಂಗ್ಲಿಷರು ಇಂಡಿಯಾವನ್ನು ಅರಾಜಕವಾದ ಸ್ಥಿತಿಯಿಂದಮೇಲಕ್ಕೆತ್ತಿ,ದೇಶಕ್ಕೆಲ್ಲಸಮಾಧಾನವನ್ನೂ ನ್ಯಾಯವನ್ನೂ ಕೊಟ್ಟಿದ್ದಾರೆಂಬಯಶಸ್ಸನ್ನು ಯಾವುದೂ ಹೋಗಲಾಡಿಸುವುದಕ್ಕಾಗುವುದಿಲ್ಲ. * ಇಂಗ್ಲಿಷರ ಆಳಿಕೆಯಿಂದ ಹಿಂದೂ ದೇಶಕ್ಕುಂಟಾಗಿರುವ ಮುಖ್ಯ ಪ್ರಯೋಜನಗಳೇನೆಂಬ ಪ್ರಶ್ನೆಗೆ ಉತ್ತರವನ್ನು ಹಿಂದಿನ ವಾಕ್ಯದಲ್ಲಿಯೇ ಹೇಳಿದ ಹಾಗಾಯಿತು. ಮೊದಲನೆಯುಪಯೋಗವು ದೇಶಕ್ಕೆಲ್ಲಸಮಾಧಾನವು ಬಂದುದು. ಸಿಂಧುನದಿಯ ಮುಖದಿಂದ ಗಂಗಾಮುಖದವರೆಗೂ ಹಿಮಾಲಯದಿಂದ ಕನ್ಯಾಕುಮಾರಿಯವರೆಗೂ ಇರುವ ಪ್ರತಿಯೊಬ್ಬ ಯಾವವಸ್ತುವನ್ನು ಬೇಕಾದರೂ ನಿರ್ಭಯವಾಗಿಟ್ಟುಕೊಂಡು ಅನುಭವಿಸಬಹುದು. ನಮ್ಮ ದೇಶವನ್ನು ಕೊಳ್ಳೆ ಹೊಡೆವುದಕ್ಕಾಗಿ ಪರರಾಜರು ಆಗಾಗ್ಗೆ ಮಾಡುತ್ತಿದ್ದ ದಂಡಯಾತ್ರೆಗಳ ಭೀತಿ ಈಗಲೂ ತಪ್ಪಿಲ್ಲ. ಅದಕ್ಕೆ ತಕ್ಕುದನ್ನು ಮಾಡಿ ಈ ಸೀಮೆಯ ಗಡಿಗಳ ರಕ್ಷಣೆಯನ್ನೂ ಇಂಗ್ಲಿಷ್ ಸರ್ಕಾರದವರು ಮಾಡುತ್ತಿದ್ದಾರೆ. ದೆಹಲಿ ಇಂಗ್ಲಿಷರ ಕೈವಶವಾದಂದಿನಿಂದ ನಾದಿರ್ ಷಹನಂಥವನು ಯಾರೂ ಅದನ್ನು ಲೂಟಿ ಮಾಡಿಲ್ಲ. ಇಂಗ್ಲಿಷ್ ರಾಜ್ಯಭಾರದ ಸಹಾಯ