ಪುಟ:ಪ್ರಬಂಧಮಂಜರಿ.djvu/೧೩೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೧೪ ಪ್ರಬಂಧಮಂಜರಿ-ಎರಡನೆಯ ಭಾಗ ಗಾರನಾದುದೂ ಆಗದಿರುವುದೂ ಎರಡೂ ಸಮ, ಅದೇ ಮನುಷ್ಯನು ಗುಣವಂತನಾಗಿದ್ದರೆ, ಆತನು ತನ್ನ ಸುಗುಣಗಳಿಂದ ಎಲ್ಲರನ್ನೂ ಮೆಚ್ಚಿಸುವನು ; ಕೈಲಾದ ಪರೋಪಕಾರ ಮಾಡುವನು. ಅವನನ್ನು ನೋಡಿದವರಲ್ಲಿ ಕೆಲವರಾದರೂ ಅವನಂತೆ ಆಗಲು ಯತ್ನಿ ಸುವರು. ಗುಣವಿಲ್ಲದ ಹಣಗಾರರು ಶೀಘ್ರವಾಗಿಯೇ ಬಡವರಾಗುವುದನ್ನೂ , ಗುಣಿಗಳಾದ ಬಡವರು ಹಣವಂತರಾಗುವುದನ್ನೂ ಪ್ರಪಂಚದಲ್ಲಿ ನೋಡುತ್ತಲೇ ಇದ್ದೇವೆ. ಆದುದರಿಂದ ಗುಣವು ಹಣಕ್ಕಿಂತ ಶ್ರೇಷ್ಠವೆನ್ನು ವುದರಲ್ಲಿ ಸಂಶಯವಿಲ್ಲ. 4 ಗುಣಹಾನಿಯಿಂದಧೋಗತಿ | ಗುಣದಿಂ ಸ್ವರ್ಗಾಪವರ್ಗಸುಖಮಕ್ಕುಮೆನಲ್ || ಗುಣಹೀನನ ಸಿರಿಯಿಂದ ! ಗುಣಿಗಳ ಬಡತನಮ ನಾಡೆಯುಂ ಲೇಸಿ • ಎಂದು ಅಭಿನವಪಂಪನು ಹೇಳುತ್ತಾನೆ. ಇದರಿಂದ ಮನುಷ್ಯನು ಹಣವನ್ನೆ ಸಂಪಾದಿಸಕೂಡದೆಂದಲ್ಲ. ದುರ್ಮಾರ್ಗಿಗೆ ಹಣವೂ ಹೆಚ್ಚಾಗಿ ದೊರೆಯಬಾರದು. ಗುಣವಂತನಿಗೆ ಇದು ಎಷ್ಟು ಸಿಕ್ಕಿದರೂ ಲೋಕಕ್ಕೆ ಮೇಲು, ಗುಣಿಗಳು ಲೋಕಕ್ಕೆ ಭೂಷಣ. ಇವರಿಲ್ಲದಿದ್ದರೆ ಪ್ರಪಂಚವು ಜನಾವಾಸಕ್ಕೆ ಯೋಗ್ಯವಾಗುವುದಿಲ್ಲ. 36. ವ್ಯಾಪಾರ, ಅತಿಚಿರಕಾಲದ ಹಿಂದೆ, ಪ್ರಪಂಚದಲ್ಲಿ ಜನರು ನಾಗರಿಕತೆಯಿಲ್ಲದೆ ಬಲು ಮೂಢರಾಗಿದ್ದರು. ಆಗ್ಗೆ ಜನರು ತಮಗೆ ಬೇಕಾದ ವಸ್ತುಗಳನ್ನು ಪಡೆ ಯಲು, ಕುರಿ, ಕೋಳಿ, ಕೋಣ, ದನ, ಅಕ್ಕಿ, ರಾಗಿ ಮುಂತಾದುವುಗಳನ್ನೇ ಬದಲು ಕೊಡಬೇಕಾಗಿದ್ದಿತು ಈ ತರದ ಮಾರ್ಪಾಟವು ಬಲು ತೊಂದರೆಗೆ ಕಾರಣವಾಗಿ ಕಂಡುಬಂದು ಕ್ರಮೇಣ ನಾಗರಿಕತೆ ಹೆಚ್ಚಿ ನಾಣ್ಯವು ಬಳಕೆಗೆ ಬಂದಿತು. ಅಂದಿನಿಂದ ಪದಾರ್ಥಗಳ ಮಾರ್ಪಾಟವು ಅತಿ ಸುಲಭ ವಾಗಿ, ವ್ಯಾಪಾರವು' ಈಗಿನಂತೆ ಮೊದಲಾಯಿತು. ವ್ಯಾಪಾರವು ಒಂದು ದೇಶಕ್ಕೆ ಬೇಕಾದ ವಸ್ತುಗಳನ್ನೆಲ್ಲಾ ತಂದುಕೊಟ್ಟು, ಅದಕ್ಕೆ ಬೇಕಾಗದಷ್ಟು ಹೆಚ್ಚಾಗಿರುವ ವಸ್ತುಗಳನ್ನು ಹೊರಗೆ