ಪುಟ:ಪ್ರಬಂಧಮಂಜರಿ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವ್ಯಾಪಾರ ೧೧೫ ತೆಗೆದುಕೊಂಡು ಹೋಗುವುದು. ಇದರಿಂದ ಪ್ರಪಂಚಕ್ಕೆ ಬಹಳ ಪ್ರಯೋಜನ. ಒಂದು ದೇಶದಲ್ಲಿ ಬೆಳೆವುದೇ ಅದಕ್ಕೆ ಗತಿಯಾಗಿದ್ದರೆ, ಅದರ ಜನರಿಗೆ ತುಂಬಾ ಕಷ್ಟ. ಬಂಗಾಳದ ಕೆಲವು ಜಿಲ್ಲೆಗಳಲ್ಲಿ ಅಕ್ಕಿ ಅವುಗಳಿಗಾಗಿ ಮಿಗುವಷ್ಟು ಹೆಚ್ಚಾಗಿ ಬೆಳೆವುದು. ಇನ್ನು ಕೆಲವು ಜಿಲ್ಲೆಗಳಿಗೆ ಪರಸ್ಪರವ್ಯಾಪಾರವಿಲ್ಲದಿದ್ದಲ್ಲಿ, ಒಂದು ಜಿಲ್ಲೆ ಯವರು ಹೊಟ್ಟೆಗೆ ಅನ್ನ ವಿಲ್ಲದೆಯೂ, ಇನ್ನೊಂದು ಜಿಲ್ಲೆ ಯವರು ಹೊದೆವುದಕ್ಕೆ ಬಟ್ಟೆ ಯಿಲ್ಲದೆಯೂ ಇರಬೇಕಾದ ಗುವುದು.ಬರಗಾಲದಲ್ಲಿ ಹಿಟ್ಟಿಲ್ಲದೆ ಯಮಪಟ್ಟಣಕ್ಕೆ ಒಬ್ಬೊಟ್ಟಾಗಿ ತೆರಳಲು ಸಿದ್ದರಾಗಿರುವವರನ್ನು ಉಳಿಸಿಕೊಳ್ಳುವುದರಲ್ಲಿ ವ್ಯಾಪಾರದುಪಯೋಗವು ಅಪರಿಮಿತವಾದುದು. ವ್ಯಾಪಾರದಿಂದ ನಾಗರಿಕತೆ ಹೆಚ್ಚುವುದು. ಒಂದುದೇಶಕ್ಕೆ ಇನ್ನೊಂದು ರೊಡನೆ ವ್ಯಾಪಾರವಿಲ್ಲದಿದ್ದರೆ, ಜನರು ತಾವು ಬೆಳೆಸಿದುದರಲ್ಲಿಯೇ ಜೀವಿಸಬೇಕಾಗುವುದು, ಐಶ್ವರ್ಯವಂತರು ಅನ್ಯಾಯವಾಗಿ ದುರ್ಮಾರ್ಗಗಳಲ್ಲಿ ಹಣವನ್ನು ಹಾಳುಮಾಡಿಬಿಡುವರು. ವರ್ತಕರು ಅನ್ಯ ದೇಶಗಳಿಂದ ವ್ಯಾಪಾರಕ್ಕಾಗಿ ಸಾಮಾನುಗಳನ್ನು ತಂದುಹಾಕಿದರೆ, ಜನರಿಗೆ ಆ ಸೀಮೆಗಳ ಸರಕುಗಳನ್ನು ಬಳಸಿಕೊಳ್ಳುವುದರಲ್ಲಿ ಇಚ್ಛೆ ಹುಟ್ಟಿ ಹಣವನ್ನು ವ್ಯಾಪಾರದಲ್ಲಿ ವ್ಯಯಮಾಡುವರು. ಅನ್ಯದೇಶೀಯರು ತಮ್ಮೊಡನೆ ಮಾಡುವ ವ್ಯಾಪಾರದಿಂದ ಪಡೆವಲಾಭವನ್ನು ಕಂಡು, ತಾವೂ ತಮ್ಮ ದೇಶದ ಸಾಮಾನುಗಳನ್ನು ಹೆರರಿಗೆ ಮಾರಲು ತೊಡಗುವರು. ತಮ್ಮ ಸರಕುಗಳನ್ನು ಅನ್ಯದೇಶೀಯರಿಗೆ ಮಾರಬೇಕಾದರೆ, ತಾವು ಅವುಗಳನ್ನು ಹೇರಳವಾಗಿ ಬೆಳೆಯಬೇಕಾಗಿ ಬರುವುದು. ಹೀಗೆ ವ್ಯವಸಾಯವು ಹೆಚ್ಚುವುದಲ್ಲದೆ, ಹೊಸ ಕಾರ್ಖಾನೆಗಳು ಸ್ಥಾಪಿಸಲ್ಪಡುವುವು. ಇವು ಕೆಲವು ಕಾಲ ನಡೆಯಬೇಕಾದರೆ, ಸ್ವದೇತದ ಪದಾರ್ಥಗಳೇ ಅದೆ ಆನ ದೇಶದವಗಳೂ ಬೇಕಾಗುವುವ, ಇತರ ಸ್ಥಳಗಳಿಂದ ಹತ್ತಿ ರೇಷ್ಮೆ ಗಳು ಇಂಗ್ಲೆಂಡಿಗೆ ಹೋಗುವುದಕ್ಕೆ ಮುಂಚೆ, ಹತ್ತಿ ರೇಷ್ಮೆ ಗಳ ಕೈಗಾರಿಕೆ ಅಲ್ಲಿ ಸರಿಯಾಗಿ ನಡೆವುದು ಅಸಾಧ್ಯವಾಗಿದ್ದಿತು. ವ್ಯಾಪಾರವು ನೆಲೆಸಿದ ದೇಶದಲ್ಲಿ, ಸಿರಿಯು ಹೆಚ್ಚಿ, ಸಾಹುಕಾರರು ಬಲು ಬೆಲೆಯುಳ್ಳ ಪದಾರ್ಥಗಳನ್ನು ಕೊಂಡು ಜನರಿಗೆ ಪ್ರೋತ್ಸಾಹಪಡಿಸುವರು.