ಪುಟ:ಪ್ರಬಂಧಮಂಜರಿ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೧ ತೃಪ್ತಿ, ಪರಲೋಕದಲ್ಲಿ ನಮ್ಮ ಯೋಗ್ಯತಾನುಸಾರ ಫಲಪ್ರಾಪ್ತಿಯಾಗುವುದು. ದೇವರು ನಮ್ಮ ಅಧಿಕಾರ, ಐಶ್ವರ್ಯ, ಯಶಸ್ಸು ಇವುಗಳನ್ನು ನೋಡುವುದಿಲ್ಲ;ಸತ್ಯ, ಸೌಜನ್ಯ, ಭಕ್ತಿ ಇವುಗಳೇ ಆತನಿಗೆ ಬೇಕಾದ ಗುಣಗಳು. ಇವು ಗಳಿದ್ದ ಮೇಲೆ ಐಹಿಕಸುಖವನ್ನು ಮಾತ್ರ ಕೊಡುವ ವಸ್ತುಗಳನ್ನು ಏತಕ್ಕೆ ಬಯಸಬೇಕು ? ಇದಲ್ಲದೆ, ನಾವು ಬದುಕಿರುವುದು ಸ್ವಲ್ಪ ಕಾಲ, ಬಡವನೂ ಭಾಗ್ಯವಂತನೂ ದೊರೆಯ ಜವಾನನೂ, ರೋಗಿಯೂ ದೃಢಾಂಗನೂ ಎಲ್ಲರೂ ಒಂದೇ ರೀತಿಯಲ್ಲಿ ಮರಣದ ಬಾಯಿಗೆ ತು ತ್ಯಾಗುವದು. ಆದುದ ರಿಂದಭೂಮಿಯಮೇಲಿರುವವರೆಗೂ ಅತೃಪ್ತಿಪಟ್ಟು ಏಕೆಕಳವಳಗೊಳ್ಳಬೇಕು? - ತೃಪ್ತಿಗೂ ಮಿತಿಯುಂಟು. ಅದನ್ನು ಮಾರಿದರೆ ಉಪೇಕ್ಷೆ, ಸೋಮಾರಿತನ ಎಂಬ ದುರ್ಗುಣಗಳು ಹುಟ್ಟುವುವು. ಹೀಗಾಗದಂತೆ ನೋಡಿಕೊಳ್ಳಬೇಕು, ಅತೃಪ್ತಿಯು ನಮ್ಮ ದೇಶದಲ್ಲಿ ಅನೇಕರನ್ನು ಸೋಮಾರಿಗಳನ್ನಾಗಿ ಮಾಡಿ, ಅವರ ಏಳಿಗೆಗೆ ಕುಂದನ್ನು ತಂದಿದೆ. ಐರ್ಲೆಂಡ್ ದೇಶದ ರೈತರಅಧಮಸ್ಥಿತಿಗೂ ಅವರ ಅತೃಪ್ತಿಯೇ ಕಾರಣ. ಇದ್ದುದಕ್ಕೆ ಸಂತುಷ್ಟರಾಗಿರುವುದು ಸತ್ಯಕ್ಕೆ ಆಸ್ಪದವೆನ್ನು ವುದೇನೊ ಸರಿಯೆ; ಆದರೆ ಅತೃ. ಪಿಯೇ ಕೆಲವು ಸಂದರ್ಭಗಳಲ್ಲಿ ಶ್ರಾವ್ಯವಾದುದು.ನಮಗಿಂತಲೂ ಸುಗುಣಗಳಲ್ಲಿ ಉತ್ತಮರಾದವರು ಗೊತ್ತಿದ್ದರೂ, ಅವರಂತೆ ನಡೆದುಕೊಳ್ಳಲು ಯ ಸದಿರು ವುದುತಪ್ಪು ಇರುವ ಜ್ಞಾನಕ್ಕೇನೆ ತೃಪ್ತಿ ಪಟ್ಟುಕೊಂಡು ಜ್ಞಾನಾಭಿವೃದ್ಧಿಗೆ ಅವಕಾಶವಿದ್ದರೂ ಸುಮ್ಮನೆ ಕುಳಿತಿರುವುದು ಹೆಡ್ಡತನವು. ಪರೋಪಕರ ವಿಷಯದಲ್ಲಿ ಎಂದಿಗೂ ತೃಪ್ತಿಯಿರಬಾರದು. ನಮ್ಮ ಕೈಲಾದ ಸಾಹಸವನ್ನೆಲ್ಲಾ ಮಾಡಿ ಲೋಕಕ್ಕು ಪಕಾರ ಮಾಡುತ್ತಲೇ ಇರಬೇಕು. ಜನರು ಪಡುತ್ತಿದ್ದ ಕಷ್ಟಗಳನ್ನು ನೋಡಿ ತನಗುಂಟಾದ ಶ್ಚಾ ಫ್ಯವಾದ ಅತೃಪ್ತಿಯಿಂದಲೇ ಗೌತಮಬುದ್ಧನು ತನ್ನ ತಂದೆಯರಮನೆಯಲ್ಲಿ ಸುಖ ದಿಂದಿರದೆ ಜನರನ್ನು ವ್ಯವಸ್ಥಿತಿಗೆ ತರಲೆಳಸಿ ಹಲವು ಕಷ್ಟಗಳನ್ನನುಭವಿಸಿದನು. 39. ಯುದ್ಧ, ನಾಗರಿಕತೆಯುಳ್ಳದೇಶಗಳಲ್ಲಿ ಇಬ್ಬರಿಗೆ ತಾವುತಾವೇ ತೀರ್ಮಾನಮಾಡಿಕೊಳ್ಳಲಾಗದ ವಿವಾದವುಂಟಾದರೆ ಅವರು ನ್ಯಾಯಸ್ಥಾನಕ್ಕೆ ಹೋಗು