ಪುಟ:ಪ್ರಬಂಧಮಂಜರಿ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯುದ್ಧ ೧೨೩ ನಡೆವುದಿಲ್ಲ. ಯುದ್ಧದಿಂದಾಗುವ ಕೆಡಕುಗಳನ್ನು ಕಡಮೆ ಮಾಡಲು ಈಚೆಗೆ ಕೆಲವು ಕರಾರುಗಳನ್ನು ಮಾಡಿಕೊಂಡಿರುವರು: ಇವುಗಳಿಂದ ಯುದ್ಧ ಕಾಲ. ದಲ್ಲಿ ಒಬ್ಬನಿಗೆ ಸೇರಿದ ಸ್ವತ್ತಿಗೆ ಮತ್ತೊಬ್ಬನು ಹೋಗಕೂಡದು; ಗಾಯ. ದಿಂದ ನರಳುತ್ತಿರುವ ಸಿಪಾಯಿಗಳನ್ನೂ , ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರನ್ನೂ ಕೊಲ್ಲಲಾಗದು. ಇಂಥ ಎಷ್ಟು ನಿಬಂಧನೆಗಳನ್ನು ಮಾಡಿಕೊಂಡರೂ, ಯುದ್ಧವಿರುವವರೆಗೂ ಅದರ ಅಸಂಖ್ಯಾತವಾದ ಕೆಡಕುಗಳು ತಪ್ಪುವುದಿಲ್ಲ. ಕಾಳಗವು ನಡೆಯುತ್ತಿರುವಾಗ,ಯುದ್ಧರಂಗದ ಸುತ್ತಮುತ್ತಲೂ ಅರಾಜಕವಾದ ಸ್ಥಿತಿ ಒಂದು, ಕೇಳುವವರೇ ಇಲ್ಲದೆ, ದುಷ್ಟರಿಗೆ ದಂಡಭಯವು ತಪ್ಪಿ, ಕೊಳ್ಳೆ ಹೊಡೆವವರು ಗುಂಪುಗುಂಪಾಗಿ ನುಗ್ಗಿ ದೇಶವನ್ನೆಲ್ಲಾ ಹಾಳುಮಾಡುವರು. ಯುದ್ದ ನಡೆವ ದೇಶದ ಘೋರವಾದಸ್ಥಿತಿಯನ್ನು ವರ್ಣಿಸಲಳವಲ್ಲ. ಜನರೆಲ್ಲರೂ ಯಾವಾಗ ಏನು ಬರುವುದೋ?' ಎಂಬ ಭೀತಿಯಿಂದ ಪ್ರತಿಕ್ಷಣವೂ ಕಳವಳಪಡುವರು. ಅವರವರ ಕಸಬುಗಳನ್ನು ಮಾಡುವುದಕ್ಕೆ ಮನಸ್ಸು ಬ. ರುವುದಿಲ್ಲ ಯಾವ ಕೆಲಸಮಾಡಲೂ ದಿಕ್ಕು ತೋರದೆ ಸ್ತಬ್ಬರಾಗಿ,ಪ್ರಾಣಭೀತಿಯಿಂದ ಚಳಿಬಂದವರಂತೆ ಗಡಗಡನೆ ನಡುಗುವರು. ವ್ಯವಸಾಯ, ವ್ಯಾಪಾರ, ವಿದ್ಯಾಭ್ಯಾಸ,ಕೈಗಾರಿಕೆ ಮೊದಲಾದುವೆಲ್ಲ ನಿಂತುಬಿಡುವುವು. ಹೊರಗಿನಿಂದಲೂ ಸಾಮಾನುಬಾರದೆ ತಿನ್ನುವುದಕ್ಕೆ ಹಿಟ್ಟಿಲ್ಲದೆ ಜನರೆಲ್ಲ ಸಾಯುವುದಕ್ಕೆ ಮೊಡಲಾಗುವುದು. ಕುಂಬಾರನಿಗೆ ವರ್ಷ, ದೊಣ್ಣೆಗೆ ನಿಮಿಷ' ಎಂಬಂತೆ ಸಾವಿರಾರು ರೂಪಾಯಿ ಮುಟ್ಟಿಸಿ ವರ್ಷಾಂತರದಿಂದ ಕಟ್ಟಿದ ಕಟ್ಟಡಗಳನ್ನು ಬಲವಾದ ಫಿರಂಗಿ ಸ್ವಲ್ಪ ಕಾಲದಲ್ಲಿಯೇ ಉರುಳಿಸಿ ಬಿಡುವುದು, ಯುದ್ಧ. ದಿಂದ ನಷ್ಟವಾಗುವ ಪ್ರಾಣಗಳನ್ನೂ ಹಣವನ್ನೂ ಎಣಿಸಲಾಗುವುದಿಲ್ಲ. ಆಸ್ತಿಯೆಲ್ಲಾ ಸೂರೆಹೋದುದರಿಂದಲೂ, ಕಾಪಾಡುವ ನಾಥರು ಕಾಳಗದಲ್ಲಿ ಮಡಿದುದರಿಂದಲೂ,ಅನೇಕ ಕುಟುಂಬಗಳು ಮುಳುಗಿಹೋಗಿ, ಹೊಟ್ಟೆಗಿಲ್ಲದೆ ಅಲೆಯಬೇಕಾಗಿ ಬರುತ್ತದೆ. ಮೇಲೆ ವಿವರಿಸಿದಂತೆ ಯುದ್ದದ ಕೆಡಕುಗಳು ಮಂದಟ್ಟಾಗಬೇಕಾದರೆ ನಾಲೈದು ವರ್ಷಗಳವರೆಗೂ ಆಫ್ರಿಕಖಂಡದಲ್ಲಿ ನಡೆದಲ್ಯಾನ್ ಸ್ವಾಲ್ ಯುದ್ಧ'ದ ಚರಿತ್ರೆಯನ್ನೊ ದಬೇಕು.ಯುದ್ಧ ನಡೆ.