ಪುಟ:ಪ್ರಬಂಧಮಂಜರಿ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೭ ಪರೀಕ್ಷಗಳು ಪ್ರೋತ್ಸಾಹಪಡಿಸುವುದಕ್ಕಾಗಿ ಪರೀಕ್ಷೆಗಳನ್ನು ಮಾಡುವರು. ಪರೀಕ್ಷೆಗಳು ವಿದ್ಯಾರ್ಥಿಗಳನ್ನು ಕಷ್ಟಪಟ್ಟೋದುವಂತೆ ಮಾಡುವುವು. ಇವುಗಳಿಂದ ಸ್ವಭಾವವಾಗಿ ಮನಸ್ಸಿಟ್ಟು ಚೆನ್ನಾಗಿ ಓದದಿರುವ ಹುಡುಗರೂ,ತಮ್ಮೊಡನೆ ಓದುತ್ತಿರುವವರನ್ನು ಪರೀಕ್ಷೆಗಳಲ್ಲಿ ಮೂಾರಿಸಬೇಕೆಂಬ ಕುತೂಹಲವುಳ್ಳವ ರಾಗಿ ಆಸ್ಥೆಯಿಂದ ಓದುವಹಾಗಾಗು ವುದು;ಅವರು ಆಟಪಾಟಗಳಲ್ಲಿ ಬಹಳ ಹೆತ್ಯನ್ನು ಕಳೆಯಲಾರರು. ಕೆಲವರು ಕೇವಲ ಜ್ಞಾನಸಂಪಾದನೆಗಾಗಿ ಓದು ವರು. ಮತ್ತೆ ಕೆಲವರು ವಿದ್ವಾಂಸರಾಗಿ ತಮ್ಮ ಮೇಲೆ ಪೈಪೋಟಿಗೆ ಬಂದವ ರನ್ನು ವಾದದಲ್ಲಿ ಜಯಿಸಿ ಪ್ರಸಿದ್ಧರಾಗಬೇಕೆಂದು ವ್ಯಾಸಂಗಮಾಡುವರು. ಸಾಮಾನ್ಯವಾಗಿ ಈಗಿನ ಚಿಕ್ಕ ಚಿಕ್ಕ ವಿದ್ಯಾರ್ಥಿಗಳಾದರೋ ಪರೀಕ್ಷೆಗಳಲ್ಲಿ ತೇರ್ಗಡೆಯನ್ನು ಹೊಂದಬೇಕೆಂಬ ಕೋರಿಕೆಯಿಂದೋದುವರು. ದೊಡ್ಡ ವರಾಗಿ ಸಾಂಸಾರಿಕರಾದಾಗ ಸರಿಯಾಗಿ ಬಾಳಬೇಕಾದರೆ ದೊಡ್ಡ ದೊಡ್ಡ ಪರೀಕೆ ಗಳಲ್ಲಿ ತೇರ್ಗಡೆಯಾಗುವುದಾವಶ್ಯಕವೆಂದು ಈಗಿನ ವಿದ್ಯಾರ್ಥಿಗಳಿಗೆ ತೋರಿದೆ ದೊಡ್ಡ ಅಧಿಕಾರಗಳು ಸಿಕ್ಕುವಂತೆ ಉತ್ತಮವಾದ ತರಗತಿಯಲ್ಲಿ ತೇರ್ಗಡೆಯಾಗುವುದು ಕೆಲವರಿಗೆ ಅಸಾಧ್ಯವಾಗಿರಬಹುದು; ಇಂಥ ವರು ಸಾಧಾರಣವಾದ ತರಗತಿಯಲ್ಲಿಯಾದರೂ ಒರುವುದಕ್ಕೆ ಶ್ರಮಪಟ್ನ ದುವರು. ಹೀಗೆ ಪರೀಕ್ಷೆಗಳಿಂದ ವಿದ್ಯಾ ವ್ಯಾಸಂಗಕ್ಕೆ ಬಹಳ ಪ್ರೋತ್ಸಾಹ ವುಂಟು, ಪರೀಕ್ಷೆ ಗಳಿಂದ ಕೆಲವು ಕೆಡಕುಗಳೂ ಆಗುವುದುಂಟು. ಕೆಲವರಿಗೆ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವ ಆಸೆ ಹೆಚ್ಚಿ, ಅವರು ಹಗಲೂ ಇರುಳೂ ವಿರಾಮವಿಲ್ಲದೆ ಓದುವಂತಾಗುವುದು; ಇದರಿಂದ ಅವರ ಆರೋಗ್ಯ ಭಾಗ್ಯಕೈ ಕುಂದು ಬರುವುದು. ಈಗಿನ ಕಾಲದಲ್ಲಿ ಅನೇಕರಿಗೆ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ಹೊರತು ಜೀವನೋಪಾಯಕ್ಕೆ ಮಾರ್ಗವಿಲ್ಲದಿರುವುದರಿಂದ ಎಡೆಬಿಡದೆ ಪುಸ್ತಕಗಳನ್ನೋದಿ ತೇರ್ಗಡೆಯಾಗಬೇಕೆಂಬ ಹುಚ್ಚು ಎಲ್ಲರಿಗೂ ಹಿಡಿದಿದೆ. ಇದರಿಂದ ಹಲವರು ಚಿಕ್ಕ ವಯಸ್ಸಿನಲ್ಲಿಯೇ ಆರೋಗ್ಯವನ್ನು ಹಾಳುಮಾಡಿಕೊಂಡು, ನಿರ್ಬಲರಾಗಿ, ದೃಷ್ಟಿ ಪಾಟವಶೂನ್ಯರಾ ಗಿರುವುದನ್ನು ನಾವು ನೋಡುತ್ತಲೇ ಇದ್ದೇವೆ, ಪರೀಕ್ಷೆ ಗಳಲ್ಲಿ ಜಯಿಸಬೇಕೆಂ ಬಾತುರದಿಂದ, ೭.ಲುಮಂದಿ ವಿದ್ಯಾರ್ಥಿಗಳು ತಾವು ಓದುವುದನ್ನು ಮನಸ್ಸಿ ನಲ್ಲಿ ಚೆನ್ನಾಗಿ ಸರ್ಯಾಲೋಚಿಸಿ ಅರ್ಥವನ್ನು ಗ್ರಹಿಸುವುದಕ್ಕೆ ಬದಲುಪುಸ್ತಕಗಳನ್ನು ಉರುಹಾಕುತ್ತಾರೆ. ಇದರಿಂದ ಅವರ ಮಿದುಳಿಗೆ ಪರ್ಯಾಲೋ