ಪುಟ:ಪ್ರಬಂಧಮಂಜರಿ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೦ ಪ್ರಬಂಧಮಂಜರಿ-ಎರಡನೆಯ ಭಾಗ, ಸರಿಯಾಗಿ ಉಪಯೋಗಿಸಿಕೊಂಡಿದ್ದರೆ, ದೇಹದಾರ್ಡ್ಯವೂಬುದ್ದಿ ಶಕ್ತಿಯೂ ಉಳ್ಳವರಾಗಿ ಮೇಲುತರಗತಿಯವರನ್ನೂ ಹಲವು ಬಗೆಗಳಲ್ಲಿ ಮಾರಿಸುವರು. - ರಜಾದಿನಗಳು ನಮ್ಮ ಜೀವಮಾನವನ್ನು ಹೆಚ್ಚಿಸಲು ಸಹಕಾರಿಯಾಗುವ ಇವೆ. (ಬೇಟೆಯಲ್ಲಿ ಕಳೆದ ಕಾಲವನ್ನು ನಮ್ಮ ಜೀವಮಾನದ ಜತೆಯಲ್ಲಿ ಗಣಿಸಬಾರದು.” ಎಂಬುದಾಗಿ ಒಂದು ಅರಾಬಿದೇಶದ ಗಾದೆ ಹೇಳುತ್ತದೆ. ಬೇಟೆಯಾಡುವುದರಲ್ಲಿ ಕಳೆದಷ್ಟು ಕಾಲದಿಂದ ನಮ್ಮ ಜೀವಮಾನವು ಹೆಚ್ಚು - ವುದೆಂದು ಅದರ ತಾತ್ಪರ್ಯವು, ರಜಾಕಾಲವನ್ನು ಪಯೋಗಿಸಿಕೊಳ್ಳತಕ್ಕ ಎಲ್ಲಾ ರೀತಿಗಳ ವಿಚಾರದಲ್ಲಿಯೂ ಇದೇ ಮಾತನ್ನು ಹೇಳಬಹುದು. ಕೆಲಸವಾದಮೇಲೆ ತಪ್ಪದೆ ವಿಶ್ರಾಂತಿಯನ್ನು ತೆಗೆದುಕೊಳ್ಳುವ ಪದ್ದತಿಯಿರುವವನ ಜೀವಮಾನವ ಹೆಚ್ಚುವುದು. ಇಂಥವನು ಮಾಡಿದುದೆಲ್ಲ ಚೆನ್ನಾಗಿರುತ್ತದೆ. ಇವನು ಬಹುಕಾಲ ಬದುಕುವುದರಿಂದ ಕೆಲಸದ ಪರಿಮಾಣವೂ ಹೆಚ್ಚು ವುದು. ಇದರಿಂದ ರಜಾ ಬಂದರೆ ಸೋಮಾರಿತನದಿಂದವೇಳೆಯನ್ನು ವ್ಯರ್ಥವಾಗಿ ಕಳೆಯಬೇಕೆಂದಲ್ಲ. ಕೆಲವರು ರಜಾದಿನಗಳಲ್ಲಿ ಮೂರು ಹೊತ್ತೂ ಇಸ್ಪೇಟು ಮೂಂತಾದುವನ್ನಾಡುವುದರಲ್ಲಿಯೇ ಇದ್ದು ಬಿಡುವರು. ಇದು ಸರಿಯಲ್ಲ. ರಚಾದಲ್ಲಿ ವಿದ್ಯಾರ್ಥಿಗಳ ಮನಸ್ಸಿಗೆ ತುಂಬಾ ವಿಶಾಂತಿಯನ್ನು ಕೊಡಬೇಕೆಲ್ಲದೆ, ಸ್ಕೂಲಿನಲ್ಲಿ ಕಲಿತ ವಿದ್ಯೆಯನ್ನು ಸರಿಯಾದ ರೀತಿಯಲ್ಲಿ ಪರಿಪೋಷಿಸಿಕೊಳ್ಳಬೇಕು. ಇದಕ್ಕಾಗಿ ಹೃದ್ಯಗಳಾದ ಕಾವ್ಯಗಳನ್ನೊದ ಹುದು;ಮಿತ್ರರೊಡಗೂಡಿ ಸಂಚಾರಹೊರಟು ಪ್ರಾಣಿ, ಗಿಡ ಇವುಗಳಲ್ಲಿ ಮಾದರಿಗಳನ್ನು ಪರೀಕ್ಷಿಸತೊಡಗಬಹುದು; ದೊಡ್ಡ ಪಟ್ಟಣಗಳಲ್ಲಿರುವವರು ಸತ್ವ ವಸ್ತು ಪ್ರದರ್ಶನಶಾಲೆಗಳಲ್ಲಿ ಹಲವು ಬಗೆಯ ಪ್ರಾಣಿಗಳೇ ಮೊದಲಾದ ವಸ್ತುಗಳನ್ನು ಸಾವಧಾನವಾಗಿ ಪರೀಕ್ಷಿಸಿ ನೋಡಬಹುದು; ದೇಶಾಟನೆಮಾಡಿ ಬಗೆಬಗೆಯ ಜನರ ಸ್ವಭಾವಗಳನ್ನೂ ನಡತೆಗಳನ್ನೂ ಪರಿಶೀಲಿಸಿಕೊಂಡು ಒಂದು ತಮ್ಮ ಲೋಕವ್ಯವಹಾರಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ಈ ಕಾರ್ಯಗಳೆಲ್ಲ ವಿದ್ಯಾಭ್ಯಾಸಕ್ಕೆ ಅಂಗಗಳೇ. ರಜಾದಿನಗಳಲ್ಲಿ ವ್ಯಾಯಾಮಕ್ಕೆ ವಿಶೇಷಕಾಲವನ್ನು ಕೊಡಬೇಕು. ಅಂಗಸಾಧನೆಯನ್ನು ಮಾಡಿ, ಆರೋಗ್ಯವನ್ನೂ ಬಲ. ವನ್ನೂ ಹೆಚ್ಚಿಸಿಕೊಂಡು, ರಜಾ ಮುಗಿದಮೇಲೆ ಮೊದಲಿನಂತೆ ಹರ್ಷದೊಡನೆ ಚೆನ್ನಾಗಿ ಕೆಲಸಮಾಡಲು ತಕ್ಕ ಪುಷ್ಟಿಯನ್ನು ಸಂಪಾದಿಸಿಕೊಳ್ಳುವುದು, - a