ಪುಟ:ಪ್ರಬಂಧಮಂಜರಿ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಳೆಯ ಉಪಯೋಗಗಳು ೧೩೧ 43. ಮಳೆಯ ಉಪಯೋಗಗಳು, ಮನುಷ್ಯರ ಆರೋಗ್ಯಕ್ಕೂ ಅಭಿವೃದ್ಧಿಗೂ ಒಳ್ಳೆಯ ಆಹಾರವಿರಲೇಬೇಕು. ಹಾಗೆಯೇ ಪ್ರತಿಯೊಂದುದೇಶದಆರೋಗ್ಯಕ್ಕೂ ಏಳಿಗೆಗೂ ಬಿಸಿಲೂ ಮಳೆಯ ಆವಶ್ಯಕವು. ವರ್ಷದ ಮೊದಲಿನಿಂದ ಬಿಸಿಲು ಕಾಯದಿರುವ ದೇಶವಾವುದೂ ಇಲ್ಲ. ಈಜಿಪ್ಟ್ ಸೀಮೆ ಹೊರತು ಮಳೆಯಿಲ್ಲದೆ ಏಳಿಗೆಯಲ್ಲಿ. ರುವ 2 (ಮೆಯಾವುದೂ ಇಲ್ಲ. ಈ ವಿಚಿತ್ರದೇಶದಲ್ಲಿ ಮಳೆಬೀಳುವದಪೂರ್ವವಾದರೂ , ಯೋಚಿಸಿ ನೋಡಿದರೆ, ಇದರೇಳಿಗೆಗೂ ಮಳೆಯೇ ಕಾರಣ. ಮಧ್ಯ ಆಫ್ರಿಕದಲ್ಲಿ ಬಿದ್ದ ನೀರೆಲ್ಲ ಒಟ್ಟಾಗಿ ನೈಲ್‌ ನದಿಗೆ ಬಂದು ಸೇರಿಈಜಿಪ್ಟ್ ದೇಶವೆಲ್ಲ ಅದರಿಂದ ನೀರಾವರಿಯಾಗಿದೆ. ಮಳೆ ಹೆಚ್ಚಾಗಿ ಬೀಳುವಕಡೆಬಿಸಿಲು ಅಪೂರ್ವವಾದುದರಿಂದ, ಬಿಸಿಲನ್ನು ಅಲ್ಲಿ ಬಲು ಆದರದಿಂದ ಕಾಣುವರು. ಬಿಸಿಲು ಬಹಳ ಹೊತ್ತು ಬಿಡದೆ ಕಾಯುವೆಡೆ ಮಳೆಯನ್ನು ಕಂಡರೆ ತುಂಬಾ ಪ್ರೀತಿಯಿರುವುದು ಒಬ್ಬ ಪಾರ್ಶಿದೇಶದ ದೊರೆ, ಸೊಗಸಾದ ಒಂದರಮನೆ ಯನ್ನು ಕಟ್ಟಿಸಿ, ಅದರ ಬೆಲೆಯೇನೆಂದು ಒಬ್ಬ ಫಕೀರನನ್ನು ಕೇಳಿದನು .ಅದಕವನು ಒಂದು ದಿನದಲ್ಲಾದ ಮಳೆಯಬೆಲೆ' ಯೆಂದನು. ಫಕೀರನು ಒಂದು ದಿನ ಬಿದ್ದ ಮಳೆ ಬಲುಬೆಲೆಬಾಳುವುದೆಂದು ತಿಳಿದಿದ್ದನು. ಹಿಂದೂ ದೇಶದಲ್ಲಿ ವರ್ಷದಲ್ಲೆಲ್ಲಾ ಬಿಸಿಲು ಚೆನ್ನಾಗಿ ಕಾಯುವುದು. ಸುಮಾರು ಎಂಟು ತಿಂಗ ಛವರೆಗೂ ಎಡೆಬಿಡದೆಕಾಯುವ ಬಿಸಿಲಿಗೆತಾಳಲಾರದೆ ನಮ್ಮ ದೇಶದಲ್ಲಿ ಜನರು ಮಳೆಗೆ ಹಂಬಲಿಸುವುದೇನೂ ಆಶ್ಚರ್ಯವಲ್ಲ. ಮುಂಗಾರುಮಳೆ ಬರುವುದು ಸ್ವಲ್ಪ ತಡವಾದರೆ, ಪ್ರಾಣಿಗಳೆಲ್ಲ ಬಿಸಿಲಿನ ಬೇಗೆಯನ್ನು ಸೈರಿಸಲಾರದೆ,ಸೊರ ಗಿಸೊಪ್ಪಾಗುತ್ತವೆ. ಪ್ರಾಣಿಗಳ ಕೆಲಸಮಾಡುವ ಶಕ್ತಿ ಕುಂದುವಷ್ಟು ಸೆಕೆ ಹೆಚ್ಚುವುದು ಸೆಕೆಯಿಂದಲೂ ಬಲಕ್ಕಾಮದಿಂದಲೂ, ಜ್ವರ ಮತ್ತು ವಾಂತಿ ಭೇದಿ ರೋಗಗಳು ತಲೆದೋರುವುವು. ಕೆರೆಗಳೂ, ಹೊಳೆಗಳೂಬಾವಿಗಳೂ ಬತ್ತಿ ಹೋಗುವುದರಿಂದ ದನಕರುಗಳು ಕುಡಿವ ನೀರಿಗೆ ಅಭಾವವಾಗುವುದು. ವ್ಯವಸಾಯವು ನಿಲ್ಲುವುದು, ಧಾನ್ಯಗಳ ಕ್ರಯವು ಬೇಗನೆ ಏರುವುದು. ಬರ ಗಾಲ ಬಂದಿತಲ್ಲಾ ಎಂದು ಪ್ರತಿಯೊಬ್ಬನೂ ಪೇಚಾಡಲಾರಂಭಿಸುವನು. ಹೀಗಿರುವಾಗ ಕೊನೆಗೆ ಮಳೆಬಿದ್ದರೆ, ಆಗ ಉಂಟಾಗುವ ವ್ಯತ್ಯಾಸಗಳನ್ನು ಹೇಳಬೇಕೆ? ವಾಂತಿಭೇದಿರೋಗದ ಪರಮಾಣುಗಳುಳ್ಳ ಕೊಳೆಯನ್ನು ಒಡ