ಪುಟ:ಪ್ರಬಂಧಮಂಜರಿ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪುಸ್ತಕಗಳು, ೧೩೫ ಯಾವಾಗಲೂ ಬೋಧಿಸಲು ಸಿದ್ದರಾಗಿರುವರು. ನಾವು ಅವರನ್ನು ಎಲ್ಲಿಗೆ ಕರೆದುಕೊಂಡು ಹೋದರೂ ಜತೆಯಲ್ಲಿಯೇ ಒಂದು ವಿದ್ಯೆಯನ್ನು ಹೇಳಿಕೊಡುವರು ಅವರು ಹೆಚ್ಚು ಸಂಬಳವನ್ನು ಕೇಳರು, ಕೊಪದಿಂದ ಕಠಿನೋಕ್ತಿಗಳನ್ನಾಡದೆಯೇ ವಿದ್ಯಾರ್ಥಿಗಳನ್ನು ದಾರಿಗೆ ತರುವರು. ಜಾಣೆಯಿಂದೆಷ್ಟು ಪ್ರಶ್ನೆಗಳನ್ನು ಹಾಕಿದರೂ ಮರೆಮಾಡದೆ ಪ್ರತಿಯೊಂದಕ್ಕೂ ಉತ್ತರವನ್ನು ಕೊಡುವರು. ಇವರಲ್ಲಿಗೆ ಬಂದವರು ಚಿಕ್ಕವರಾಗಲಿ ದೊಡ್ಡವರಾಗಲಿ, ಬಡವರಾಗಲಿ ಭಾಗ್ಯವಂತರಾಗಲಿ, ಎಂಥವರೇ ಆಗಿರಲಿ ಪಕ್ಷಪಾತವಿಲ್ಲದೆ ಪಾಠಹೇಳುವರು ಈ ಉಪಾಧ್ಯಾಯರಿಗೆ ತಿಳಿಯದಿರುವ ಶಾಸ್ತ್ರಗಳೇ ಇಲ್ಲ; ಇವರು ಎಲ್ಲಾ ಶಾಸ್ತ್ರಗಳಲ್ಲಿಯೂ ಪೂರ್ಣಪಾಂಡಿತ್ಯವುಳ್ಳವರಾಗಿ ಪ್ರತಿಯೊಂದನ್ನೂ ಚೆನ್ನಾಗಿ ಬೋಧಿಸುವರು. ಪುಸ್ತಕಗಳು ಜನರು ಹೊಂದಬಹುದಾದ ನಿಜವಾದ ಗೆಳೆಯರು, ಪುಸ್ತಕಗಳೆಂಬ ಮಿತ್ರರು ಎಲ್ಲಾ ಕಾಲಗಳಲ್ಲಿಯೂ, ಎಲ್ಲಾ ದೇಶಗಳಲ್ಲಿಯೂ ಇರುವ ಜನರ ನಡೆನುಡಿಗಳನ್ನೂ ಜ್ಞಾನವನ್ನೂ ಸಂಪಾದಿಸಿಕೊಂಡಿರುವರು ತಮ್ಮ ಅಪಾರವಾದ ಶಾಸ್ತ್ರ ಪರಿಚಯಕ್ಕೊಸ್ಕರ ಶ್ರೇಷ್ಟವಾದ ಮರಾದೆಯನ್ನು ಎಲ್ಲಾ ಸಭೆಗಳಲ್ಲಿಯೂ ಹೊಂದಿರುವರು, ಮತ್ತು ಸುಲಭರು. ಬೇಕಾದಾಗಲೆಲ್ಲ ಉಪಕಾರಮಾಡಲು ಸಿದ್ಧರಾಗಿರುವರು. ಮನಸ್ಸು ಬಂದಾಗ ಇವರನ್ನು ಜತೆಗೆ ಸೇರಿಸಿಕೊಳ್ಳಬಹುದು; ಬೇಡವಾದೊಡನೆಯೇ ಇವರ ಸಂಗವನ್ನು ಬಿಟ್ಟು ಬಿಡಬಹುದು. ಇದಕ್ಕಾಗಿ ಇವರು ಕೋಪಗೊಳದೆ ಯಾವಾಗಲೂ ಒಂದೇ ರೀತಿಯಾಗಿ ಬಲು ಅನುಕೂಲರಾಗಿರುವರು. ಇವರಲ್ಲಿ ಕೆಲವರು ಪೂರ್ವದಲ್ಲಿ ನಡೆದ ಸಂಗತಿಗಳನ್ನೆಲ್ಲಾ ಕಥೆಹೇಳುತ್ತಾರೆ; ಇನ್ನು ಕೆಲವರು ಪ್ರಪಂಚದಲ್ಲಿರುವ ವಸ್ತುಗಳ ಒಳಗುಟ್ಟುಗಳನ್ನೆಲ್ಲ ರಟ್ಟು ಮಾಡಿ ವಿಶದಪಡಿಸುತ್ತಾರೆ; ಇವುಗಳೆಲ್ಲ ನಮಗೆ ಬೇಡವಾದರೆ, ಮನಸ್ಸಿಗೆ ಸಂತೋಷವಾಗು. ವಂತೆ ಶಾ ಫ್ಯವಾದ ಕಾವ್ಯಗಳನ್ನೂ ಇನ್ನೂ ಇತರ ಗ್ರಂಥಗಳನ್ನೂ ಬೋಧಿಸುತ್ತಾರೆ. ಪ್ರಪಂಚದಲ್ಲಿ ಹೇಗೆ ಬದುಕಬೇಕೆಂಬುದನ್ನು ಇವರಿಂದ ಕಲಿಯಬಹುದು. ನಮ್ಮ ಮನಸ್ಸಿನಲ್ಲಿ ಚಿಂತೆಯ ವ್ಯಸನವೂ ಇದ್ದರೆ ಗಾಳಿಯು ಧೂಳನ್ನು ತೂರಿಬಿಡುವಂತೆ ಇವುಗಳನ್ನು ದೂರಕ್ಕೆ ತಳ್ಳಿ ಬಿಟ್ಟು ನಮ್ಮನ್ನು ಆನಂದಗೊಳಿಸುವರು. ನಾವು ಹೆದರಿರುವಾಗ ಧೈರ್ಯ ಹೇಳುವರು. ಅtಷಡ್ವರ್ಗಗಳನ್ನು ಜಯಿಸಿ ಇಂದ್ರಿಯನಿಗ್ರಹವನ್ನು ಸಾಧಿಸಬೇಕೆಂದುಪದೇಶಿ