ವಿಷಯಕ್ಕೆ ಹೋಗು

ಪುಟ:ಪ್ರಬಂಧಮಂಜರಿ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೬ ಪ್ರಬಂಧಮಂಜರಿ-ಎರಡನೆಯ ಭಾಗ, ಸುವರು. ಮುಖ್ಯವಾಗಿ ಪುಸ್ತಕಗಳೆಂಬ ಮಿತ್ರರು ಎಲ್ಲಾ ವಿದ್ಯೆಗಳಿಗೂ ದಾರಿಯನ್ನು ತೋರಿಸಿಕೊಡುವರು; ಇವರು ಹೇಳಿ ಕೊಟ್ಟುದನ್ನೆಲ್ಲ ಚೆನ್ನಾಗಿ ನಂಬಿ ಅಂಗೀಕರಿಸಬಹುದು. ಇಷ್ಟೆಲ್ಲ ಮಾಡುವುದಕ್ಕಾಗಿ ನಮ್ಮ ಪ್ರತ್ಯುಪಕಾರವೇನು? ನಾವಿರುವಮನೆಯ ಒಂದು ಮೂಲೆಯಲ್ಲಿ ಒಂದಿಷ್ಟು ಜಾಗ, ಇದನ್ನು ಕೊಟ್ಟರೆ ಸಾಕು. ಇಷ್ಟಕ್ಕೇ ಕೃತಜ್ಞರಾಗಿ ನಮ್ಮ ಜತೆ ಯಲ್ಲಿಯೇ ಯಾವಾಗಲೂ ಇದ್ದು ಬಿಡುವರು. ಪುಸ್ತಕಗಳನ್ನು ಸೇರಿಸಿ ಮನೆಯಲ್ಲಿಟ್ಟು ಕೊಳ್ಳುವುದು ಸಕಲ ವಿದ್ಯಾಪ್ರವೀಣರಾದ ವಿದ್ವಾಂಸರ ಸಭೆಯನ್ನು ನಮ್ಮಲ್ಲಿರಿಸಿಕೊಂಡಹಾಗೆ, ಪುಸ್ತಕಗಳಿಲ್ಲದ ಕೊಠಡಿಯು ಆತ್ಮ ನಿಲ್ಲದ ದೇಹದಹಾಗೆ; ಗಂಡನಿಲ್ಲದ ಹೆಂಗಸಿನ ಹಾಗೆ; ವಿದ್ಯೆಯಿಲ್ಲದ ಮನುಷ್ಯನಂತೆ, ಮಾತನಾಡಿಸಲು ಯಾರೂ ಇಲ್ಲದ ಕಡೆ ಇರಬೇಕಾಗಿ ಬರಬಹುದು, ಆಗಪುಸ್ತಕಗಳಿದ್ದರೆ ಇನ್ನು ಯಾರೂ ಬೇಕಾಗಿಲ್ಲ. ಅವುಗಳನ್ನೂ ದುತ್ತ ಸುಖವಾಗಿ ಕಾಲಕಳೆವುದಲ್ಲದೆ ಬಹಳ ಪ್ರಯೋಜನವನ್ನು ಹೊಂದಬಹುದು. ಹೇಗೆಂದರೆ, ಪುಸ್ತಕಗಳಲ್ಲಿ ಅತಿಸಮರ್ಥರಾದ ವಿದ್ವಾಂಸರಲೋಕೋತ್ತರವಾದ ಅಭಿಪ್ರಾಯಗಳು ಉತ್ತಮವಾದಭಾಷೆ - ಯಲ್ಲಿ ವಿವರಿಸಲ್ಪಟ್ಟಿರುತ್ತವೆ. ಪುಸ್ತಕಗಳು ಕೊಡುವಮನಸ್ಸಂತೋಷವನ್ನು ಇಷ್ಟೆಂದು ಹೇಳಲಾಗುವುದಿಲ್ಲ. ಕನ್ ಫೋಸಿಯಸ್ ಎಂಬದೊಡ್ಡ ತತ್ವಜ್ಞಾನಿ ಪುಸ್ತಕಗಳನ್ನೋದಿ ಜ್ಞಾನವನ್ನು ಸಂಪಾದಿಸುವ ಸುಖದಲ್ಲಿ ತನ್ನ ದುಃಖಗಳನ್ನೆಲ್ಲಾ ಮರೆತು, ತನಗೆ ಮುಪ್ಪು ಬಂಡುದನ್ನೂ ಅರಿಯಲಿಲ್ಲ ವಂತೆ. ಅಚ್ಚು ಹಾಕುವುದು ಬಂದಂದಿನಿಂದ ಪ್ರಕಟಿಸಿದ ಪುಸ್ತಕಗಳನ್ನೆಲ್ಲ ಎಣಿಸಲೂ ಆಗುವುದಿಲ್ಲ; ನಮ್ಮ ಜೀವನದಲ್ಲಿ ಓದಿಮುಗಿಸಲಾದೀತೆ? ಎಂದಿಗೂ ಇಲ್ಲ. ಎಲ್ಲವನ್ನೂ ಓದಬೇಕಾದುದೂ ಇಲ್ಲ, ಓದುವುದಕ್ಕೆ ಎಲ್ಲವೂ ಅರ್ಹಗಳೂ ಅಲ್ಲ. ಕೆಲವು ಪುಸ್ತಕಗಳನ್ನು ರುಚಿನೋಡಬೇಕು; ಮತ್ತೆ ಕೆಲವನ್ನು ಚೆನ್ನಾಗಿ ಅಗಿದು ನುಂಗಬೇಕು.ಎಂದು ಒಬ್ಬ ಘನಪಂಡಿತನು ಹೇಳಿರುವನು. ಅಂದರೆ, ಕೆಲವು ಪುಸ್ತಕಗಳನ್ನು ಆಮೂಲಾಗ್ರವಾಗಿ ಓದದೆ ಅಲ್ಲಲ್ಲಿ ಮುಖ್ಯ. ವಾದಭಾಗಗಳನ್ನೋದಿ ಮುಗಿಸಬೇಕು; ಮತ್ತೆ ಕೆಲವನ್ನು ಮೊದಲಿಂದ ಕೊನೆ. ವರೆಗೂ ಚೆನ್ನಾಗಿ ಓದಿ, ಓದಿದುದನ್ನು ಮನಸ್ಸಿನಲ್ಲಿ ಪದ್ಯಾಲೋಚಿಸಿ ಎಂ. ದಿಗೂ ಮರೆಯದಂತೆ ಗಟ್ಟಿ ಮಾಡಿಡಬೇಕು, ಪುಸ್ತಕಗಳಿಂದ ನಿಬಿಡವಾಗಿರುವ ಈ ಕಾಲದಲ್ಲಿ ನಮಗೆ ಬೇಕಾದ ಸರಿಯಾದ ಪುಸ್ತಕಗಳನ್ನು ಆರಿಸಿ