ಪುಟ:ಪ್ರಬಂಧಮಂಜರಿ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೦ ಪ್ರಬಂಧಮಂಜರಿ-ಎರಡನೆಯ ಭಾಗ ಶಿವನಸಮುದ್ರದಲ್ಲಿ ಕಾವೇರಿಯ ಮೂಲಕ ಮಾಡಿರುವ ಅದ್ಭುತವಾದ ಏರ್ಪಾಡೇ ಇದಕ್ಕು ದಾಹರಣೆ. ಮೊದಲು ವ್ಯವಸಾಯಕ್ಕೋಸ್ಕರವೂ, ಮನೆಗೆಲಸಕ್ಕಾಗಿಯೂ, ಜನರು ಮನೆಗಳನ್ನು ನದೀತೀರದಲ್ಲಿ ಕಟ್ಟಿಕೊಳ್ಳುತ್ತಾರೆ. ಹೀಗೆ ಅನೇಕರು ಮಾಡುವ ವುದರಿಂದ, ದಡಗಳಲ್ಲಿ ಹಲವು ದೊಡ್ಡ ಪಟ್ಟಣಗಳುಂಟಾಗುವುವು. ಹಡಗುಗಳನ್ನೂ ದೋಣಿಗಳನ್ನೂ ನಡೆಸುವಷ್ಟು ಆಳವಾಗಿಯೂ ಅಗಲವಾಗಿಯೂ ಇರುವ ದೊಡ್ಡ ನದಿಗಳಿಂದ ವ್ಯಾಪಾರಕ್ಕೆ ಬಲು ಸಹಾಯವುಂಟು. ಹೇಗೆದರೆ, ಪದಾರ್ಥಗಳನ್ನು ನದೀ ತೀರದಲ್ಲಿರುವ ಊರಿಂದೂರಿಗೆ ಸಾಗಿಸಲುಸೌಕರ್ಯವು ಹೆಚ್ಚುವುದು. ಸೌಲಭ್ಯವನ್ನೂ ವೆಚ್ಚವನ್ನೂ ನೋಡಿದರೆ, ಪದಾರ್ಥಗಳನ್ನು ಸಾಗಿಸುವ ವಿಷಯದಲ್ಲಿರಾಜಮಾರ್ಗಕ್ಕಿಂತನದಿಗಳೇ ಉತ್ತಮ. ಆದರೆ ರೈಲು ಬಂದಮೇಲೆ ನದಿಗಳನ್ನು ವ್ಯಾಪಾರಕೆ ಅಷ್ಟು ಉಪಯೋಗಿಸಿ ಕೊಳ್ಳುವುದಿಲ್ಲ. ಸರಕುಗಳನ್ನು ನೀರಿನ ಮೇಲೆ ಸಾಗಿಸಲು ಕೊಂಚ ವೆಚ್ಚ ಮಾಡಿದರೂ ಸಾಕಾಗಿರುವುದರಿಂದ, ದೊಡ್ಡ ನದಿಗಳಿಂದನಾಲೆಗಳನ್ನು ಕಟ್ಟಿ ಅವುಗಳ ಮೇಲೆ ಬೇಕಾದ ಸಾಮಾನನ್ನು ಸಾಗಿಸುವ ಪದ್ಧತಿ ಈಗಲೂ ಎಷ್ಟೋ ಕಡೆಗಳಲ್ಲಿವೆ ದೇಶವನ್ನು ಶತ್ರುಗಳ ವಶವಾಗದಂತೆ ಉಳಿಸುವಪ್ರಾಕೃತಿಕ ವಸ್ತುಗಳಲ್ಲಿ ನದಿಗಳು ಸಮುದ್ರಕ್ಕೆ ಎರಡನೆಯವು. ಸೇತುಗಳು ನದಿಗಳನ್ನು ಸುಲಭವಾಗಿ ದಾಟ :- ಅನುಕೂಲವಾದ ಸ್ಥಳಗಳು, ಇವುಗಳನ್ನು ಚೆನ್ನಾಗಿ ಕಾಪಾಡಿಕೊಂಡರೆ, ನದಿಗಳನ್ನು ಶತ್ರುಗಳು ದಾಟಿಬರುವದಸಾಧ್ಯ. ಈ ವಿಷಯದಲ್ಲಿ ಪರ್ವತಪಜಿಗಿಂತಲೂ ನದಿಯೇ ಒಳ್ಳೆಯದು. ನದಿಯನ್ನು ಕಾದಿರುವುದು, ಸುಲಭ;ಶತ್ರುಗಳು ಮೇಲೆ ಬೀಳದಂತೆ ನೋಡಿಕೊಳ್ಳಲು,ಸೈನ್ಯವನ್ನು ನದೀತೀರದಲ್ಲಿ ಸ್ಥಲದಿಂದ ಸ್ಥಳಕ್ಕೆ ಬಹಳ ತ್ವರೆಯಿಂದ ನಡೆಸಬಹುದು. ಪರ್ವತ ಶ್ರೇಣಿಯೂ ನದಿಯ ಸುತ್ತಿಕೊಂಡಿರುವ ದೇಶವನ್ನು ಕಾಪಾಡಿಕೊಳ್ಳುವ ವುದು ಅತಿಸುಲಭ, ಹೈದರ್ ಮತ್ತು ಟಿಪ್ಪು ಇವರ ಕಾಲದಲ್ಲಿ ಶ್ರೀರಂಗಪಟ್ಟಣವನ್ನು ಕಾಪಾಡುವುದರಲ್ಲಿ ಕಾವೇರೀ ನದಿಯೂ ಬಲವಾದ ಕೋಟೆಯಂತೆ ಎಷ್ಟು ಅನುಕೂಲವಾಗಿದ್ದಿತು ! ವ್ಯವಸಾಯ, ವ್ಯಾಪಾರ ಮುಂತಾದುವುಗಳಿಗೆ ಸಹಕಾರಿಯಲ್ಲದೆ, ನದಿ ನೋಡುವವರಿಗೆನೇತ್ರಾನಂದವನ್ನೂ ಉಂಟುಮಾಡುವುದು, ವಸಂತಕಾಲ