ಪುಟ:ಪ್ರಬಂಧಮಂಜರಿ.djvu/೧೫೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಹಿಂದೂದೇಶದ ಅಂಗಡಿಬೀದಿ, ೧೪೧ ದಲ್ಲಿಯೂ ಬೇಸಿಗೆಯಲ್ಲಿಯೂ ನದಿಯ ನೀರು ತುಂಬಾ ಇಳಿದು ಸ್ವಚ್ಛವಾಗಿ ಹೊಳೆಯುತ್ತಲಿರುವುದು ಆಗ ಅದರ ಸೂಕ್ಷ್ಮವಾದ ಅಲೆಗಳೂ ಮೃದುವಾದ ಧ್ವನಿಯ ಆನಂದಗೊಳಿಸುವುವು, ದಡದ ಗಿಡಗಳು ಹೂತಿರುವುವ, ಬಿಸಿಲಿನ ತಾಪವನ್ನು ಸೈರಿಸಲಾರದೆ ನದಿಯಬಳಿಗೆ ಬಂದವರ ಮೇಲೆ ತಂಗಾಳಿ ಬೀಸಿ ಸುಖವನ್ನು ಕೊಡುವುದು.ಪ್ರಾತಸ್ವಾಯಂಕಾಲಗಳಲ್ಲಿ ಸಂಧ್ಯಾರಾಗ ವು ನೀರಿನಲ್ಲಿ ಪ್ರತಿಬಿಂಬಿಸಿರುವುದನ್ನೂ ,ಸುತ್ತಲೂ ನಿಶ್ಯಬ್ದ ವಾಗಿ, ನದಿಮಾತ್ರ ಮೆಲ್ಲಗೆ ಸದ್ದು ಮಾಡುತ್ತ ಹರಿವುದನ್ನೂ, ನದಿಯ ಸುತ್ತಮುತ್ತಲೂ ಇರುವ ಸನ್ನಿ ವೇಶವನ್ನೂ ಸಾವಧಾನವಾಗಿನೋಡಿದವರ ಮನಸ್ಸಿಗೆ ಹರ್ಷವಾಗುವು ದಲ್ಲದೆ ನದಿಯ ವಿಷಯದಲ್ಲಿ ಭಕ್ತಿಯುಂಟಾಗುವುದು. ಆದುದರಿಂದಲೇ ಹಿಂದೂದೇಶದಲ್ಲಿ ಗಂಗೆ ಕಾವೆರಿ ಮುಂತಾದ ಎಲ್ಲಾ ನದಿಗಳ ನೀರುಪರಮ ಪವಿತ್ರವಾದುದೆಂದೂ, ಅದರಲ್ಲಿ ಸ್ನಾನಮಾಡುವುದರಿಂದ ಸದ್ಧತಿಯಾಗುವು ದೆಂದೂ ನಂಬಿ, ಜನರು ಭಕ್ತಿಯಿಂದ ನಡೆವುದೇನೂ ಆಶ್ಚರ್ಯವಲ್ಲ.

  • 48, ಹಿಂದೂ ದೇಶದ ಅಂಗಡಿಬೀದಿ, ನಮ್ಮ ದೇಶದ ದೊಡ್ಡ ಪಟ್ಟಣಗಳಲ್ಲಿರುವ ಅಂಗಡಿಬೀದಿಗಳನ್ನು ಯಾವನಾ ದರೂ ಅನ್ಯದೇಶದವನುನೋಡಿದರೆ, ಮೊದಲುಒಂದೇ ವಿಧವಾದ ಅಂಗಡಿಗಳು ಒಟ್ಟಿಗೆ ಸೇರಿರುವುದರಮೇಲೆ ಅವನ ಕಣ್ಣುಗಳು ಬೀಳುತ್ತವೆ. ಒಂದು ಬೀದಿಯಲ್ಲಿ ಬಟ್ಟೆಗಳನ್ನು ಮಾತ್ರ ಮಾರುವ ಅಂಗಡಿಗಳೇ ಹೊರತು ಇನ್ಯಾವ ಅ೦ಗಡಿಗಳೂ ಇರುವುದಿಲ್ಲ. ಇನ್ನೊಂದು ಬೀದಿಯಲ್ಲಿ ಬರೀ ಪಾತ್ರೆಗಳ ಅಂಗಡಿಗಳೂ, ಮತ್ತೊಂದರಲ್ಲಿ ಕೇವಲ ಕಬ್ಬಿಣದ ಅಂಗಡಿಗಳೂ, ಒಂದುಕಡೆ ಒರೀ ಗಂದಿಗೆ ಅಂಗಡಿಗಳೂ, ಮತ್ತೊಂದೆಡೆ ಬರೀ ಅಕ್ಕಿಯ ಮಳಿಗೆಗಳೂ ಇರುತ್ತವೆ. ಆನುಕೂಲ್ಯದ ವಿಷಯದಲ್ಲಿ ಈ ಕ್ರಮವು ಯೂರೋಪಿನಲ್ಲಿರುವ ಅಂಗಡಿಗಳ ಕ್ರಮಕ್ಕಿಂತ ಕೀಳಾಗಿರುವಂತೆ ತೋರುವುದು. ಯೂರೋಪಿನಲ್ಲಿ ಪಟ್ಟಣಗಳನ್ನು ಕೆಲವು ಭಾಗಗಳಾಗಿ ವಿಂಗಡಿಸಿ, ಪ್ರತಿಭಾಗದಲ್ಲಿಯೂ ಎಲ್ಲಾ ತರದ ಕೆಲಸಗಾರರನ್ನೂ ಇರಿಸಿರುತ್ತಾರೆ. ಇದರಿಂದ ಜನರಿಗೆ ಆನುಕೂಲ್ಯವು ಹೆಚ್ಚುವುದಲ್ಲದೆ, ಬಹಳ ಹೊತ್ತು ಮಿಗು ವುದು. - ಹಿಂದೂದೇಶದಲ್ಲಿಯೂ ಇದಕ್ಕೆ ಹತ್ತಿರದ ದೇಶಗಳಲ್ಲಿಯೂ ಇರುವ ಅಂಗಡಿಗಳಲ್ಲಿ ಪದಾರ್ಥಗಳಿಗೆ ಬೆಲೆಯೇ ಗೊತ್ತಾಗಿರುವುದಿಲ್ಲ. ಇಂಗ್ಲೆಂಡಿನ