ಪುಟ:ಪ್ರಬಂಧಮಂಜರಿ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹವಾದಿಂದ ಮನುಷ್ಯರಿಗಾಗುವ ಬದಲಾವಣೆ, ೧೪೩ ಈಗಲೂ ಇರುವರಷ್ಟೆ, ವ್ಯಾಪಾರಗಾರರ ಚಾತಿ, ಅವರು ಅಂಗಡಿಗಳನ್ನು ಕಟ್ಟುವ ರೀತಿ, ಅವುಗಳಲ್ಲಿ ಸಾಮಾನುಗಳನ್ನಿಡುವ ಕ್ರಮ, ಮಾರುವಾಗ ಬಲು ಚೌಕಾಸಿಮಾಡುವುದು, ಇವೆಲ್ಲವೂ ನೂರಾರು ವರ್ಷಗಳ ಹಿಂದೆ ಇದ್ದಂತೆಯೇ ಈಗಲೂ ಇವೆ. ಹೀಗೆ ವ್ಯತ್ಯಾಸಗಳನ್ನು ಮಾಡಿಕೊಳ್ಳದಿ. ರುವುದು ಹಿಂದೂಗಳ ಸ್ವಭಾವವು. ವ್ಯಾಪಾರಮಾಡುವಾಗ ಸುಳ್ಳು ಹೇಳಿ ಮೋಸಮಾಡುವುದೂ ಅವರಲ್ಲಿ ಅನೇಕರಿಗೆ ಸಾಮಾನ್ಯವಾಗಿದೆ. ಹಳೆಯ ಸರಕನ್ನು ಹೊಸದೆಂದು ಹೇಳಿ ಕೊಡುವುದು, ಹೆಚ್ಚು ಕ್ರಯವುಳ್ಳದ್ದನ್ನು ಮೊದಲು ತೋರಿಸಿ ಕಡೆಗೆ ಕಡಿಮೆ ಬೆಲೆಯುಳ್ಳದ್ದನ್ನು ಕೊಡುವುದು, ಒಬ್ಬೊಬ್ಬರು ಬಂದರೆ ಒಂದೊಂದು ಬೆಲೆ ಹೇಳುವುದು ಇವು ಮೊದಲಾದ ಹಿಂದೂದೇಶದ ಅಂಗಡಿಯ ಲಕ್ಷಣಗಳು ಜಾಣರಿಗೆ ಥಟ್ಟನೆ ಗೊತ್ತು. ಹತ್ತುವುವು. ಇದರಿಂದ ಹಿಂದೂಗಳನ್ನು ಮೋಸಗಾರರೆಂತಲೂ ಸುಳ್ಳುಗಾರ ರೆಂತಲೂ ಅನ್ಯ ದೇಶದವರು ಭಾವಿಸಲು ಅವಕಾಶವಾಗಿದೆ, ಆದರೆ ಈಚೀಚೆಗೆ ಇ೦ಡಿಯಾದ ದೊಡ್ಡ ಪಟ್ಟಣಗಳಲ್ಲಿ ಕೆಲವು ವರ್ತಕರು ಅಲ್ಲಿ ಬಂದು ವ್ಯಾಪಾರಮಾಡುತ್ತಿರುವ ಇಂಗ್ಲಿಷರನ್ನ ನುಸರಿಸಿ, ತಮ್ಮ ನ್ನು ಸ್ವಲ್ಪ ಸ್ವಲ್ಪವಾಗಿ ತಿದ್ದಿಕೊಳ್ಳುತ್ತಾ ಬರುತ್ತಿದ್ದಾರೆ. ವ್ಯಾಪಾರಕ್ಕೆ ಪ್ರಾಮಾಣಿಕತೆ ಆವಶ್ಯಕವು. ಒಬ್ಬ ಅಂಗಡಿಯವನು ಪ್ರಾಮಾಣಿಕನೆಂದು ಜನರಿಗೆ ತಿಳಿದರೆ, ಅವರು ಬೇರೆ ಅಂಗಡಿಗಳನ್ನು ಬಿಟ್ಟು ಅವನಂಗಡಿಗೆ ನುಗ್ಗುವರು: ಇದರಿಂದ ಅವನಿಗೆ ವ್ಯಾಪಾರವು ಹೆಚ್ಚಿ, ಲಾಭವು ವಿಶೇಷವಾಗಿ ಬಂದು, ಅವನು ಹಣಗಾರನಾಗುವನು. ಇದು ಹಿಂದೂ ವರ್ತಕರೆಲ್ಲಾ ತಿಳಿದ , ವ್ಯಾಪಾರದಲ್ಲಿ ಪ್ರಾಮಾಣಿಕತೆಯನ್ನು ಬಿಡದೆ ಅವಲಂಬಿಸತ್ತಾ ಒ೦ದರೆ, ಹಿಂದೂದೇಶದಲ್ಲಿ ಐಶ್ವರ್ಯ ಹೆಚ್ಚಿ ಜನರು ಅತಿಶಯವಾದ ಏಳಿಗೆಗೆ ಒರುವರು. 49. ಹವಾದಿಂದ ಮನುಷ್ಯರಿಗಾಗುವ ಬದಲಾವಣೆ, ಒಂದು ಶದ ಹವಾ ಇನ್ನೊಂದರ ಹವಾದಹಾಗಿರುವುದಿಲ್ಲ. ಹಾಗೆಯೇ ಒಂದು ತರದ ಹವಾದಲ್ಲಿರುವ ಗುಣಗಳಿಗೂ ಮತ್ತೊಂದರಲ್ಲಿರುವಜನರಗುಣಗಳಿಗೂ ತಾರತಮ್ಯವುಂಟು, ಉಷ್ಣ ದೇಶದವರಿಗೆ ರಾಗದ್ವೇಷಾದಿಗಳನ್ನು ಬಲು ಸುಲಭವಾಗಿ ಉಂಟುಮಾಡಬಹುದು; ಹೋಗಲಾಡಿಸಲೂಬಹುದು. ಅವರು ಒಂದುಕ್ಷಣದಲ್ಲಿ ಅತಿಪ್ರೀತಿಯನ್ನು ತೋರಿಸುವರು; ಅಲ್ಪ ಕಾಲದಲ್ಲಿ