ಪುಟ:ಪ್ರಬಂಧಮಂಜರಿ.djvu/೧೬೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕ್ಷಾಮಗಳು, ୦୨୮ ವಿದ್ಯಾಭಿವೃದ್ಧಿ ಮಾಡಬಹುದು, ಹಣಗಾರರಿಗೆ ಹೊಟ್ಟೆ ಪಾಡಿನ ಯೋಚನೆಯೇ ಇಲ್ಲದಿರುವುದರಿಂದ ಬೇಕಾದಷ್ಟು ಕಾಲವು ಅವರ ಅಧೀನವಾಗಿರುವುದು. ಅವರು ಪುಸ್ತಕಗಳನ್ನೊದುವುದರಿಂದಲೂ ದೇಶಸಂಚಾರದಿಂದಲೂ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ಬಂಡವಾಳವಿಲ್ಲದವರಿಗೆ ಸಾಲವನ್ನು ಕೊಟ್ಟು ದೇಶದಲ್ಲಿ ವ್ಯಾಪಾರವನ್ನೂ 'ಕೈಗಾರಿಕೆಯನ್ನೂ ವ್ಯವಸಾಯವನ್ನೂ ಉನ್ನತ ಸ್ಥಿತಿಗೆ ತರಬಹುದು. ನಮ್ಮ ದೇಶದಲ್ಲಿ ಉದಾರರಾದ ದೊಡ್ಡ ಮನುಷ್ಯರನೇಕರು ಹಲವು ಬಗೆಗಳಲ್ಲಿ ಲೋಕೋಪಕಾರವಾಗುವಂತೆ ತಮ್ಮ ಹಣವನ್ನು ಸತ್ಕಾರಗಳಲ್ಲಿ ವೆಚ್ಚ ಮಾಡಿರುತ್ತಾರೆ. ಕೆಲವರು ವಾಸಕ್ಕೆ ಮನೆಗಳನ್ನು ಕಟ್ಟಿ ಸಿ ಬಡಬ್ರಾಹ್ಮಣರಿಗೆ ದಾನಮಾಡಿರುವರು; ಇನ್ನು ಕೆಲವರು ಸ್ಕೂಲುಗಳನ್ನೂ , ಕಾಲೇಜುಗಳನ್ನೂ, ಆಸ್ಪತ್ರೆಗಳನ್ನೂ ಕಟ್ಟಿಸಿ ತಮ್ಮ ಆಸ್ತಿಯನ್ನು ಸರ್ಕಾರದವರ ವಶಮಾಡಿ, ಆ ಆಸ್ತಿಯಿಂದ ಬಂದ ಆದಾಯದಿಂದ ಅವುಗಳನ್ನು ನಡೆಸಿಕೊಂಡು ಬರುವಂತೆ ಅವರನ್ನು ಪ್ರಾರ್ಥಿಸಿರುವರು; ಮತ್ತೆ ಕೆಲವರು ಚತ್ರ, ದೇವಾಲಯ, ದನಮುಂತಾದುವು ನೀರುಕುಡಿವಕಲ್ಲುತೊಟ್ಟಿ ಇವುಗಳನ್ನು ಕಟ್ಟಿಸಿರುತ್ತಾರೆ. ಹಿಂದೂದೇಶದಲ್ಲಿ ಇಂತಹ ಚಿತ್ರಗಳಿಲ್ಲದ ದೊಡ್ಡ ಪಟ್ಟಣಗಳೇ ಅತಿವಿರಳ. ಬೇರೆಕೆಲವರು ಲಕ್ಷಾಂತರ ರೂಪಾಯಿಗಳನ್ನು ಸರ್ಕಾರದಲ್ಲಿಟ್ಟು, ಅದರಿಂದ ಬಂದ ಬಡ್ಡಿಯಿಂದ ವಿದ್ಯಾರ್ಥಿಗಳಿಗೆ ವೇತನಗಳನ್ನು ಕೊಟ್ಟು ವಿದ್ಯೆಗೆ ಪ್ರೋತ್ಸಾಹಕೊಡಬೇಕೆಂದು ಸರ್ಕಾರದವರನ್ನು ಕೇಳಿಕೊಂಡಿದ್ದಾರೆ. ಇಂತಹ ಮಹೋಪಕಾರಿಗಳಲ್ಲಿ ಮೊದಲನೆಯವರಾಗಿಯೂ ಬೊಂಬಾಯಿಪಟ್ಟಣದ ಪಾರ್ಸಿ ಜನರಿಗೆ ತಿಲಕಪ್ರಾಯರಾಗಿಯೂ ಇದ್ದ ಮ. ರಾ. ತಾತಾ ಸಾಹೇಬರೆಂಬ ಕೋಟೀಶ್ವರರನ್ನು ಎಂದಿಗೂ ಮರೆಯಲಾಗುವುದಿಲ್ಲ 52. ಕ್ಲಾಮಗಳು. ಬಳೆಯು ಬಹಳ ಕಡಮೆಯಾಗಿ, ಜನರು ಮುಖ್ಯವಾಗಿ ಉಪಯೋಗಿಸುವ ಆಹಾರಪದಾರ್ಥಗಳು ದುರ್ಲಭವಾಗುವುದಕ್ಕೆ ಕ್ಷಾಮವೆಂದು ಹೆಸರು. ಕ್ಷಾಮಕ್ಕೆ ಅನೇಕ ಕಾರಣಗಳುಂಟು, ಅವುಗಳಲ್ಲಿ ಮೊದಲನೆಯದು ಅನಾವೃಷ್ಟಿ, ಎಂದರೆ ಮಳೆ ಸಕಾಲಕ್ಕೆ ಬಾರದಿರುವುದು, ಅತಿವೃಷ್ಟಿಯಿಂದಲೂ ಬೆಳೆ ಕೆಡುವುದುಂಟು. ಮಿಡಿತ, ಇಲಿ, ಪಕ್ಷಿ, ಇಂಥ ಪ್ರಾಣಿಗಳು ಆದ ಧಾನ್ಯದ