ಪುಟ:ಪ್ರಬಂಧಮಂಜರಿ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫) ಪ್ರಬಂಧಮಂಜರಿ-ಎರಡನೆಯ ಭಾಗ್ಯ ತೆನೆಗಳನ್ನು ಮೇದುಬಿಡುವುವು. ಯುದ್ದವೂ ಬರಕ್ಕೆ ಕಾರಣವ, ದೇಶದಲ್ಲಿ ಕಾಳಗ ನಡೆವಾಗ ರೈತರು ಆರಂಬ ಮಾಡಲಾಗುವುದಿಲ್ಲ. ಇದರಿಂದ ಬೆಳೆಗೆ ಕುಂದು ಬರುತ್ತದೆ. ಎಲ್ಲಕ್ಕಿಂತ ಮಳೆ ನಿಂತುಹೋಗುವುದರಿಂದ ಕ್ಷಾಮವು ಅಡಿಗಡಿಗೆ ಬರುವುದುಂಟು. ನದಿಗಳಿಂದ ನೀರಾವರಿಯಾದ ದೇಶಗಳಲ್ಲಿ ಮಳೆ ನಿಂತರೂ ಅಷ್ಟು ತೊಂದರೆಯಾಗುವುದಿಲ್ಲ. ಮಳೆಯನ್ನೇ ನಂಬಿಕೊಂಡಿರುವ ದೇಶಗಳಲ್ಲಿ ಒಂದು ವರ್ಷ ಮಳೆ ಬಾರದೆ ಹೋದರೂ ಕ್ಷಾಮವು ತಲೆದೋರುವುದು. ಮೊದಲು ಧಾನ್ಯಗಳ ಬೆಲೆ ತಲೆಯೆತ್ತಿ ಹೆಚ್ಚು ತಹೆಚ್ಚುತ, ಬಡವರು ಪ್ರತಿದಿನದ ಕಾಲಕ್ಷೇಪವನ್ನು ಮಾಡಲಾಗದಷ್ಟು ಏರುವುದು, ಮಳೆಯಿಲ್ಲದಿದ್ದರೆ, ರೈತರ ಆರಂಬಕ್ಕೆ ಅವಕಾಶವಿಲ್ಲ. ವ್ಯವಸಾಯವೊಂದೇ ಜೀವನೋಪಾಯವಾಗಿರುವ ರೈತರು ತಿಂಡಿಯಿಲ್ಲದೆ ಸಾಯಬೇಕಾಗುತ್ತದೆ. ಕ್ಯಾ ಮಕಾಲದಲ್ಲಿ ನೇಯಿಗೆ, ಮರಗೆಲಸ ಮುಂತಾದ ಕೈಗಾರಿಕೆಯವರನ್ನು ಕೇಳುವವರೇ ಇಲ್ಲದೆ, ಇವರು ಬೀದಿಬೀದಿಗಳಲ್ಲಿ ಅಲೆಯುತ ಹೊಟ್ಟೆಗಿಲ್ಲದೆ ಸಾಯಬೇಕಾfಬರುವುದು. ಕಾಮದ ಬಾಧೆ ಐಶ್ವರ್ಯವಂತರನ್ನೂ ಬಿಟ್ಟದ್ದಲ್ಲ. ಪದಾರ್ಥಗಳಿಗೆ ಎಷ್ಟು ಹೆಚ್ಚು ಬೆಲೆಯನ್ನಾದರೂ ಕೊಡಲುಳ್ಳವರಾದುದರಿ' ದ ಬಡವರಿಗಾದಷ್ಟು ತೊಂದರೆ ಇವರಿಗಾಗಲಾರದು. ಆದರೆ ಕ್ಲಾಮದ ಜತೆಯಲ್ಲಿ ತಲೆಹಾಕುವ ಸ೦ಕ್ರಾಮಿಕ ರೋಗಗಳಿಗೆ ಹಣಗಾರCಬಡವರಂತೆ ತುತ್ತಾಗಬೇಕಾಗುತ್ತದೆ. ರೋಗಗಳು ಬರುವುದೇ ತಡ; ಬಂದಮೇಲೆ ಅವುಗಳ ಹಾವಳಿಯನ್ನು ಅಪ್ಪಿ ಷ್ಟೆಂದು ಹೇಳಲಾಗದು. ದೊಡ್ಡವರು, ಚಿಕ್ಕವರು, ಹೆಂಗಸರು, ಮಕ್ಕಳು, ಒಡವರು, ಭಾಗ್ಯವಂತರು ಎಂದು ನೋಡದೆ ಎಲ್ಲರನ್ನೂ ಒಂದೇ ರೀತಿಯಾಗಿ ಹೊತ್ತುಕೊಂಡುಹೋಗುವುದು. ಕ್ಲಾ ಮತಗಲಿದ ಸದಸ್ಥಿತಿಯನ್ನು ವರ್ಣಿಸಲಳವಲ್ಲ. ಎಲ್ಲಿ ನೋಡಿದರೂ ಜನರು ಸಾಯುತ್ತಿರುತ್ತಾರೆ. ದೇಶದಮೇಲೆಲ್ಲ ಯಮನು ತನ್ನ ಪಾಶವನ್ನು ಬೀಸಿದಂತೆ ಕಾಣುತ್ತದೆ. ಸತ್ತವರ ಪಾಡು ಮೇಲು, ಬದುಕಿರುವವರ ಸ್ಥಿತಿ ಅತಿ ಶೋಚನೀಯವಾಗಿರುವುದು, ತಿಂಡಿ, ಯಿಲ್ಲದೆ ಕಡ್ಡಿಯಂತೆ ಸಣ್ಣಗಾಗಿ ಮೂಳೆಗಳು ಬಿಟ್ಟುಕೊಂಡು ಮರಗಳ ಕೆಳ ಗೂ ರಸ್ತೆಯ ಪಕ್ಕಗಳಲ್ಲಿಯೂ ಗುಂಪು ಗುಂಪಾಗಿ ಹಸಿವಿನಿಂದ ಪೀಡಿತರಾಗಿ ಬಿದ್ದು ನರಳುವ ಜನರನ್ನು ನೋಡುವುದು ಅತಿಘೋರವಾದುದಲ್ಲವೆ?