ಪುಟ:ಪ್ರಬಂಧಮಂಜರಿ.djvu/೧೭೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಆರೋಗ್ಯ, ೧೫೫ ಅದಕ್ಕೆ ಸ್ವತಂತ್ರವಾಗಿ ಆಲೋಚನೆಮಾಡುವ ಶಕ್ತಿ ಕುಂದುವುದು. ಇದರಿಂದ ಮನುಷ್ಯನಿಗೆ ಯುಕ್ತಾಯುಕ್ತ ವಿವೇಕವು ತಪ್ಪಿ, ಸುತ್ತಮುತ್ತಲಿರುವ ವಸ್ತು. ಗಳ ನಿಜಸ್ಥಿತಿಯನ್ನು ತಿಳಿಯಲರಿಯದೆ ಹೋಗುವನು; ಮತ್ತು ಮೋಹಪಾಶಕ್ಕೆ ಹೆಚ್ಚು ಒಳಗಾಗುವನು; ಅವನಿಗೆ ಅದನ್ನು ವಿರೋಧಿಸುವಷ್ಟು ಮನೋದಾರ್ಢವಿಲ್ಲದೆ ಹೋಗುವುದು. ಹಿಂದೆ ಗ್ರೀಕ್ ಜನರು ದೇಹದಲ್ಲಿ ನೈರ್ಬಲ್ಯವೂ ಅನಾರೋಗ್ಯವೂ ಇದ್ದರೆ ವಿದ್ಯಾಭ್ಯಾಸವಾದಂತೆ ಭಾವಿಸುತಿರಲಿಲ್ಲ. ಆರೋಗ್ಯದಿಂದಾಗುವ ಪ್ರಯೋಜನಗಳನ್ನು ಎಲ್ಲರೂ ಬಲ್ಲರು; ಆದರೂ ಅದನ್ನು ಸರಿಯಾಗಿಟ್ಟುಕೊಳ್ಳಲು ಸ್ವಲ್ಪವೂ ಮನಸ್ಸು ಮಾಡುವುದಿಲ್ಲ. ತಮ್ಮ ದೇಹಸಿ ತಯನು ಹಾಳುಮಾಡಿಕೊಂಡುಅಲಾಯುಸಿನಲ್ಲಿಯೇ ಕೊನೆಗಾಣುವರು; ಅಥವಾ ಮುಪ್ಪಿನವರೆಗೂ ಬದುಕಿದ್ದರೆ, ರೋಗಪೀಡಿತರಾಗಿ ಬಹು ದುಃಖಕ್ಕೆ ಗುರಿಯಾಗುವರು. ಕೆಲವರಿಗೆ ಹುಟ್ಟಿದಂದಿನಿಂದ ದೇಹಸ್ಥಿತಿಸ್ನಾಭಾವಿಕವಾಗಿ ಬಹಳ ಕೆಟ್ಟು ಹೋಗಿ, ಆರೋಗ್ಯ ಪಡೆಯಲಶಕ್ಯವಾಗಿರುವುದುಂಟು. ಆದರೆ ದೈವಾನುಗ್ರಹದಿಂದ ಲೋಕದಲ್ಲಿ ಇಂಥವರು ಕಡಮೆ. ಮುಕ್ಕಾಲೂ ಮೂರುವೀಸ ಪಾಲು ಜನರಿಗೆ ಮನಸ್ಸು ಬಂದರೆ ಚೆನ್ನಾಗಿರಬಹುದಾದ ಸ್ಥಿತಿಯಿರುತ್ತದೆ ಕಾಯಿಲೆಬೀಳುವುದು ಅವರ ಸ್ವಂತ ತಪ್ಪ, ನಾವುಮಾಡಬಾರದುದನ್ನು ಮಾಡುತ್ತೇವೆ; ಮಾಡಬೇಕಾದುದನ್ನು ಮಾಡುವುದಿಲ್ಲ. ಕೊನೆಗೆ ಇದರಿಂದ ಆರೋಗ್ಯ ತಪ್ಪುವುದರಲ್ಲಿ ಏನಾಶ್ಚರ್ಯ? ಅನಾರೋಗ್ಯವು ತಮ್ಮ ಕೈಯಾರ ತಾವು ತಂದುಕೊಂಡುದೆಂದು ತಿಳಿಯದೆ ಕೆಲವರು ಅದು ಗ್ರಹಚಾರದಿಂದಾಗುವುದೆಂದು ನಂಬಿ, ಆರೋಗ್ಯಕ್ಕೆ ಬೇಕಾದ ವಿಧಿ. ಗಳನ್ನು ಅನುಸರಿಸುವುದಿಲ್ಲ. ಇಂತಹ ಅಜ್ಞಾನದಿಂದ ಪ್ರಪಂಚದಲ್ಲಿ ಬಹಳ ದುಃಖವು ಪ್ರಾಪ್ತವಾಗಿದೆ. ಆರೋಗ್ಯ ವಿಷಯದಲ್ಲಿ ಎಚ್ಚರಿಕೆಯಿಂದಿದ್ದರೆ ಲೋಕೋಪಕಾರಿಗಳಾದ ಹಲವರುದೊಡ್ಡ ಮನುಷ್ಯರು ಅಲ್ಪಾಯುಸ್ಸಿನಲ್ಲಿ. ಯೇ ತೀರಿಹೋಗದೆಇನ್ನೂ ಎಷ್ಟೋ ಕಾಲಹೆಚ್ಚಾಗಿಬದುಕಬಹುದಾಗಿತ್ತು. ಶರೀರದಲ್ಲಿ ಮಿದುಳು, ಹೃದಯ, ಶ್ವಾಸಕೋಶ ಮೊದಲಾದ ಅವಯವಗಳು ಸೇರಿಕೊಂಡಿವೆ. ಇವುಗಳಲ್ಲಿ ಒಂದಕ್ಕಿಂತ ಒಂದು ಸೂಕ್ಷ್ಮ ವು. ಯಾವುದೊಂದಕ್ಕೆ ಸ್ವಲ್ಪ ತೊಂದರೆಯಾದರೂ ನಮ್ಮ ಆರೋಗ್ಯಕ್ಕೆ ಕುಂದು ಬರಬಹುದು, 4 ಅಷ್ಟು ಎಚ್ಚರಿಕೆಯಿಂದಿರುವುದು ನಮಗಸದಳವು ಎಂದು ಹೇಳ