ಪುಟ:ಪ್ರಬಂಧಮಂಜರಿ.djvu/೧೭೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೫೭ ಸ್ಥಿರಪ್ರಯತ್ನ, ವಿರುವುದಿಲ್ಲವಷ್ಟೆ. ಆದುದರಿಂದ ಒಂದು ಕೆಲಸವನ್ನು ನೆರವೇರಿಸಲು ಎಲ್ಲರಿಗೂ ಒಂದೇ ಸಮವಾದ ಕಾಲಪ್ರಮಾಣವು ಬೇಕಾಗುವುದೆಂದು ಹೇಳಲಾಗದು. ಇನ್ನು ಕೆಲವು ಕಡೆ ಸಾಮಾನ್ಯ ಶಕ್ತಿ ಏನೇನೂ ಕಾರ್ಯಕಾರಿಯಾಗದೆ ಅದ್ದು. ತಶಕ್ತಿಯೇ ಬೇಕಾಗಿರುವುದು. ಸಾಮಾನ್ಯನು ಎಷ್ಟೇ ಸ್ಥಿರವಾಗಿ ಬಹಳ ಕಾಲ ಪ್ರಯತ್ನಿ ಸಲಿ ಕಾಳಿದಾಸನಂತೆ ಗ್ರಂಥಗಳನ್ನು ಬರೆಯಲಾದೀತೆ? ಅಥವಾ ತ್ಯಾಗರಾಜನಷ್ಟು ದೊಡ್ಡ ಸಂಗೀತವಿದ್ವಾಂಸನಾಗಲಾದೀತೆ? ಇಂತಹ ಮಹಾತ್ಮರಅದ್ಭುತಶಕ್ತಿಯು ಸ್ವಭಾವಸಿದ್ಧವಾದುದು. ಎಲ್ಲರಿಗೂ, ಅದ್ಭುತಶಕ್ತಿಯಿರುವುದಿಲ್ಲ. ಆದುದರಿಂದ ಇಲ್ಲಿ ಸಾಮಾನ್ಯರನ್ನೂ ಕುರಿತು ಮಾತಾಡಬೇಕು, ಇವರು ಒಂದುದ್ದೇಶವನ್ನು ಗುರಿಯಿಟ್ಟು ಕೊಂಡು ಬಹಳ ಶ್ರದ್ದೆಯಿಂದ ಶ್ರಮಪಟ್ಟು ಕೆಲಸಮಾಡಿದರೆ ತಕ್ಕ ಫಲವಾಗುವುದು. - ಸ್ಥಿರಪ್ರಯತ್ನಕ್ಕೆ ತಕ್ಕ ಫಲವಾಗದೆ ಹೋಗದೆಂಬುದಕ್ಕೆ ಚರಿತ್ರೆಯಲ್ಲಿ ಅನೇಕ ದೃಷ್ಟಾಂತಗಳುಂಟು. ಗ್ರೀಸ್ ದೇಶದ ಚರಿತ್ರೆಯನ್ನು ಓದಿರುವವರೆಲ್ಲರೂ ಡಿಮಾಸ್ಥೆನೀಸ್ ” ಎಂಬುವನ ಹೆಸರನ್ನೆಂದಿಗೂ ಮರೆಯಲಾರರು. ಈತನಿಗೆ ತಾನು ದೊಡ್ಡ ವಾಗ್ನಿ ಯಾಗಬೇಕೆಂಬ ಉದ್ದೇಶವಿತ್ತು; ಆದರೆ ಈತ. ನಿಗೆ ಹುಟ್ಟಿದಂದಿನಿಂದ ನತ್ತು ಇತ್ತು. ಮಾತನಾಡುವಾಗಲೆಲ್ಲ ಬಾಯಲ್ಲಿ ಬೆಣಚುಕಲ್ಲನ್ನು ಹಾಕಿಕೊಂಡು ಆಡುವ ಅಭ್ಯಾಸವನ್ನು ಬಹುಕಾಲಮಾಡಿ ಕೊನೆಗೆ ನನ್ನು ಹೋಗಲಾಡಿಸಿಕೊಂಡನು. ಹೀಗೆಯೇ ಮತ್ತೊಂದು ಕೊರತೆ ಈತನಲ್ಲಿತ್ತು: ಈತನ ಧ್ವನಿ ಅತಿನಿರ್ಬಲವೂ ಕೀಚಲೂ ಆಗಿತ್ತು. ಅದಕ್ಕಾಗಿ ಸಮುದ್ರತೀರಕ್ಕೆ ಹೋಗಿ ಅಲೆಗಳು ಘೋಷಿಸುತ್ತಿರುವಾಗ ಗಟ್ಟಿಯಾಗಿ ಪ್ರಸಂಗ ಮಾಡುತ್ತ ತನ್ನ ಧ್ವನಿಯನ್ನು ತಿದ್ದಿಕೊಂಡನು, ಇಂತಹ ಪ್ರಯತ್ನ ಗಳಿಂದ ಗ್ರೀಸ್ ದೇಶದಲ್ಲೆಲ್ಲ ಅಗ್ರಗಣ್ಯನಾದ ವಾಗ್ನಿಯಾದನು. ಇಂಗ್ಲೆಂಡ್ ಚರಿತ್ರೆಯನ್ನೊದಿರುವವರಿಗೆರಾಬರ್ಟ್ಬ್ರಸೆಂಬಸ್ಕಾಟ್ಲಂಡ್ ದೇಶದ ದೊರೆಯ ಸಂಗತಿ ತಿಳಿಯದಿರಲಾರದು, ಈ ದೊರೆ ಇಂಗ್ಲಿಷ್ ಸೈನ್ಯದಿಂದ ಹಲವುಸಾರಿಪರಾಜಿತನಾಗಿ ಚಿಂತಸುತನಿದ್ರೆಯಿಲ್ಲದೆಮಲಗಿರಲು, ಒಂದು ಜಾಡರ ಹುಳವು ತನ್ನ ದಾರವನ್ನು ಸಿಕ್ಕಿಸಲು ಗೋಡೆಯ ಮೇಲೆ ನೆಗೆಯುತ್ತ, ಆರುಬಾರಿ ಪ್ರಯತ್ನಿಸಿ ಪ್ರತಿಸಲವೂ ಕೆಳಕ್ಕೆ ಬಿದ್ದು ಹೋಯಿತು. ಏಳನೆಯ ಬಾರಿ ಪ್ರಯತ್ನಿ ಸಿದಾಗ ಅದಕ್ಕೆ ಕೆಲಸಕೈಗೂಡಿತು. ಇದನ್ನು ಕಂಡು ಬೂಸನು ತಾನು ಮತ್ತೆ ಪ್ರಯತ್ನಿ ಸಲು ಆಗ ಅವನಿಗೆ ಜಯವುಂಟಾಯಿತು.