ಪುಟ:ಪ್ರಬಂಧಮಂಜರಿ.djvu/೧೭೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೬೦ ಪ್ರಬಂಧಮಂಜರಿ-ಎರಡನೆಯ ಭಾಗ್ಯ ಇನಿಸಂ ತಾಂ ತಿಳಿದಂದು ಗರ್ವಭರಮಂ ತಾಳಿಲ್ಲ ಮಂ ಬಲ್ಲೆನು | ದೆನುತು ಬಿನ ಬಿಗುತಿರ್ದ ನಕಜಾ ಮತಪಂಬೆಲ್ವಲಂ || ಜನಿಸಿ ಮೈಳೆ ಮೆಲ್ಲ ಮೆಲ್ಲನರಿವಾ ವಿದ್ವತ್ಸಹವಾಸದಿಂ | ಮನಕಂಟಿರ್ದ ಮಹಾವದ ಜ್ವರದವೋಲ್ಲೋಯಿಗಳೇನೆಂದXo || ಎಂಬ ನುಡಿ ದಿಟವ. ಹೀಗೆ ನಮ್ಮ ನಿಜವಾದ ಯೋಗ್ಯತೆಯನ್ನ ರಿಯಬೇಕಾದರೆ, ಬಹಳ ಕಾಲವೂ ಅನುಭವವೂ ಬೇಕು, ಈ ದುರ್ಗುಣವು ಕಿರಿಯವರಲ್ಲಿಯೂ ಮೂಡರಲ್ಲಿಯೂ ವಿಶೇಷವಾಗಿರುವುದೇ ಹೊರತು, ವೃದ್ದರಲ್ಲಿಯೂ ವಿವೇಕಿಗಳಲ್ಲಿ. ಯ ಪೂರ್ಣವಿದ್ವಾಂಸರಲ್ಲಿಯೂ ಕಂಡುಬರುವುದಿಲ್ಲ. ತುಂಬಿದ ಕೊಡ ತುಳುಕುವುಗಿಲ್ಲ. ” ಹುಡುಗರು ಓದುವಾಗ ದುರಹಂಕಾರಕ್ಕೆ ಗುರಿಯಾಗು ವರು ಈಗಿನ ಕಾಲದಲ್ಲಂತು ಪರೀಕ್ಷೆಗಳಲ್ಲಿ ತೇರ್ಗಡೆಯಾದರೆ, ಕೆಲವು ಹುಡುಗರಿಗೆ ತಲೆಯೇ ನೆಟ್ಟಗೆ ನಿಲ್ಲುವುದಿಲ್ಲ. ಇದು ಅವರ ಜ್ಞಾನಾಭಿವೃದ್ಧಿಗೆ ದೊಡ್ಡ ಕುಂದು, ವಿದ್ಯಾಭ್ಯಾಸ ಮಾಡುವುದು ಜ್ಞಾನಸಂಪಾದನೆಗೋಸ್ಕರವಲ್ಲದೆ ಅಹಂಕಾರದಿಂದ ಮೆರೆವುದಕ್ಕಲ್ಲ. ಜ್ಞಾನವನ್ನು ಪಡೆವುದೂ ಹೊರಗೆ ಎಲ್ಲರಿಗೂ ತೋರಿಸಿಕೊಳ್ಳಲಿಕ್ಕಲ್ಲ. ಹಾಗೆ ತೋರ್ಪಡಿಸಿಕೊಳ್ಳುವುದು ಅವರಲ್ಲಿ ಏನೇನೂ ಹುರುಳಿಲ್ಲ ಎಂಬುದನ್ನು ವ್ಯಕ್ತಪಡಿಸುವುದು, ಸ್ವಾಭಿಮಾನವುಳ್ಳವರಲ್ಲಿ ಇನ್ನೆರಡುದುರ್ಗುಣಗಳುಸೇರಿರುವುವು. ಇವರು ಹೇಗಾದರೂ ಮಾಡಿ ತಮ್ಮ ಹೆಸರನ್ನು ಮುಂದಕ್ಕೆ ತಂದುಕೊಳ್ಳುವುದರಲ್ಲಿ ನಿರತರಾಗಿರುತ್ತಾರೆ. ಆದುದರಿಂದ ಹೆರರ ಯೋಗ್ಯತೆಯ ವಿಷಯದಲ್ಲಿ ಯಾವಾಗಲೂ ಹೊಟ್ಟೆ ಕಿಚ್ಚು ಪಡುವರು; ಮತ್ತು ತಮಗಿಂತ ಜ್ಞಾನಿಗಳೂ ಗಟ್ಟಿಗರೂ ಆಗಿರುವವರಲ್ಲಿ ಹುಳುಕುಗಳನ್ನು ಕಂಡುಹಿಡಿಯುವುದರಲ್ಲಿಯೇ ನಿರತರಾಗಿರುವರು. ಇದರಿಂದ ಅಹಂಕಾರಿಗಳಿಗೆ ಹಲವರು ಶತ್ರುಗಳಾಗುವರು. _57, ಸುಗ್ಗಿಯ ಕಾಲ. ಬೆಳೆದ ದವಸಗಳನ್ನು ಮನೆಗೆ ತಂದುಹಾಕಿಕೊಳ್ಳುವ ಕಾಲಕ್ಕೆ ಸುಗ್ಗಿಯ ಕಾಲವೆನ್ನುವರು. ಇದರಷ್ಟು ಆನಂದಕರವಾದ ಕಾಲವು ವರ್ಷದಲ್ಲಿ ಇನ್ನಾ - ವುದೂ ಸಿಕ್ಕದು. ರೈತರಿಗೆ ಇದು ವಿಶೇಷವಾಗಿ ಸಂತೋಷಕರವು; ಏಕೆಂದರೆ, ರೈತರುಬೆಳೆಗಾಗಿ ಒಂದುವರ್ಷವೆಲ್ಲ ಎದೆಯೊಡೆದುಕೊಂಡು ದುಡಿದಿರುತ್ತಾರೆ. ಅವರ ಕಷ್ಟಕ್ಕೆ ತಕ್ಕ ಫಲಪ್ರಾಪ್ತಿಯಾದರೆ ಕೇಳಬೇಕೆ? ಅವರ ಸಂತೋಷಕ್ಕೆ