ಪುಟ:ಪ್ರಬಂಧಮಂಜರಿ.djvu/೧೮೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೬೨ ಪ್ರಬಂಧಮಂಜರಿ-ಎರಡನೆಯ ಭಾಗ, ಜನರೂ, ಇವರ ಹತ್ತಿರ ಅಲ್ಲಲ್ಲಿ ಕೊಟ್ಟಿರುವಪೈರುಗುಡ್ಡೆಗಳೂ,ನಿರ್ಮಲವಾದ ಆಕಾಶವೂ, ಹಾರಾಡುತ್ತಿರುವ ಹಕ್ಕಿಗಳೂ, ಚಿನ್ನ ದಂತೆ ಹೊಳೆವ ಪೈರುಗಳೂ ಕಣ್ಣು ಮನಗಳನ್ನು ಸೆಳೆಯುವುವು. ಕೆಲವೆಡೆ ಕೊಯ್ದು ಮು. hದು ಪೈರನ್ನು ಹೊರೆಗಳಾಗಿ ಕಟ್ಟಿ ಮೆದೆಹಾಕುತಿರುವರು. ಇನ್ನು ಕೆಲ ವೆಡೆ ಕಣಗಳನ್ನು ಮಾಡುತಿರುವರು, ಅಥವಾ ಮಾಡಿದ ಕಣಗಳಲ್ಲಿಎತ್ತುಗಳಿಂದಲೂ ಕೋಣಗಳಿಂದಲೂ ಸೈರನ್ನು ತುಳಿಸುತಿರುವರು, ಇಲ್ಲವೇ ಜನರೇ ಕಡ್ಡಿಗಳಿಂದ ಬಡಿದು ಧಾನ್ಯವನ್ನು ಒಕ್ಕುತಿರುವರು. ಮತ್ತೆ ಕೆಲವೆಡೆ ಒಕ್ಕಿದ ದವಸವನ್ನು ರಾಶಿಹಾಕಿ ಅಳೆದು ಮನೆಗೆ ಸಾಗಿಸು ತಿರುವರು. ಆಗ ಭಿಕ್ಷಕ್ಯಾಗಿ ಬಂದ ಬಡಬಗ್ಗರಿಗೆ ತೋರಿದಷ್ಟು ಧಾನ್ಯವನ್ನು ಧರ್ಮಮಾಡುವರು. ಕೊಯ್ತಾಗದಿರುವ ಹೊಲಗದ್ದೆಗಳಲ್ಲಿ ತೆನೆಯ ಭಾರದಿಂದ ಪೈರುಗಳು ಗಾಳಿಗೆ ಬಳುಕುತ, ರೈತರು ಪಟ್ಟಿರುವ ಕಷ್ಟಕ್ಕೆ ಮೆಚ್ಚಿ ತಲೆದೂಗುವಂತೆ ಕಾಣುವುವು. ವಿಶಾಲವಾದ ಹೊಲಗದ್ದೆಗಳಲ್ಲಿ ಸೊಂಪಾಗಿ ಬೆಳೆದ ಪೈರುಗಳ ಗುಂಪು ಒಟ್ಟಿಗೆ ಗಾಳಿಯಿಂದ ಕೆಳಕ್ಕೂ ಮೇಲಕ್ಕೂ ತೂಗಾಡು ವುದು ಸಮುದ್ರದ ಅಲೆಗಳನ್ನು ಜ್ಞಾಪಿಸು ವುದು. ಸುಗ್ಗಿಯ ಕಾಲದಲ್ಲಿಯೇ ಸರ್ಕಾರದವರು ಕಂದಾಯದ ವಸೂಲಿ. ಯನ್ನು ಮಾಡುವರು. ಇದರಿಂದ ಅಡ್ಡಿಯಿಲ್ಲದೆ ಕಂದಾಯವು ಸಾಲವಕಾಶವುಂಟು. ಆಗ ಎಲ್ಲರಿಗೂ ಮನೆತುಂಬ ದವಸವು ಬಂದು ಬಿದ್ದಿರುತ್ತದೆ. ವರ್ಷದಕೊನೆವರೆಗೂ ಆಗುವಷ್ಟು ಧಾನ್ಯವನ್ನಿಟ್ಟುಕೊಂಡು ಉಳಿದುದನ್ನು ಮಾರಿ ಕಂದಾಯಕೊಡುತ್ತಾರೆ. ಆದುದರಿಂದ ಸುಗ್ಗಿಯ ಕಾಲದಲ್ಲಿ ಸಕಲ ಧಾನ್ಯಗಳೂ ಅಗ್ಗವಾಗಿ ಸಿಕ್ಕುವುವು. ಇದೇ ಸಮಯವೆಂದು ಅನೇಕರು ದವಸಗಳನ್ನು ಕೊಂಡು ಕೂಡಿಹಾಕುವರು. 58. ಅಂಗಸಾಧನೆ. ದೇವರು ನಮಗೆ ಕೊಟ್ಟಿರುವ ಭಾಗ್ಯಗಳಲ್ಲಿ ಆರೋಗ್ಯವೇ ಮುಖ್ಯವು, ಆರೋಗ್ಯವಂತನ ಬಾಳು ಸಂತೋಷಕರ, ಇದಿಲ್ಲದವನ ಬಾಳು ವ್ಯರ್ಥ. ಇದು ಹೊರತು ಮಿಕ್ಕ ಯಾವ ಸುಖಗಳಿದ್ದರೂ ಪ್ರಯೋಜನವಿಲ್ಲ. ಆರೋಗ್ಯವನ್ನು ಕಾಪಾಡಿಕೊಳ್ಳದಿದ್ದರೆ ಪಾಪ ಮಾಡಿದಂತಾಗುವುದು, ಶರೀರ ಮಾದ್ಯಂ ಖಲು ಧರ್ಮಸಾಧನಂ.