ಪುಟ:ಪ್ರಬಂಧಮಂಜರಿ.djvu/೧೮೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಂಗಸಾಧನೆ ೧Lq ಆಯಾ ಅಂಗಗಳಿಗೆ ಮಾಡಬೇಕಾದ ಕೆಲಸಗಳನ್ನು ಸರಿಯಾಗಿ ಮಾಡುವ ಶಕ್ತಿಯಿದ್ದರೆ, ನಮ್ಮ ದೇಹದಲ್ಲಿ ಆರೋಗ್ಯ ನೆಲೆಸಿರುವುದು ಅವರ ಯವಗಳಿಗೆ ಈ ಶಕ್ತಿ ಇರಬೇಕಾದರೆ ಅವುಗಳ ಕೈಲಿ ಚೆನ್ನಾಗಿ ಕೆಲಸಮಾಡಿಸಬೇಕು. ಕೆಲಸದಿಂದ ಅವುಗಳು ಗಟ್ಟಿಯಾಗುತ್ತವೆ. ಕೆಲವು ಕಾಡುಜನರಲ್ಲಿ ಒಂದು ಪಂಗಡದವರಿಗೂ ಮತ್ತೊಂದು ಪಂಗಡದವರಿಗೂ ಆಗಾಗ್ಗೆ ಯುದ್ಧ ವಾಗುತ್ತಲೇ ಇರುವುದು. ಇವರು ಯಾವಾಗಲೂ ಎಚ್ಚರಿಕೆಯಿ೦ದಲೇ ಇರಬೇಕು. ಮನುಷ್ಯನಾಗಲಿ ಮೃಗವಾಗಲಿ ಬರುತ್ತಿದ್ದರೆ, ಆ ಮನುಷ್ಯನಿಂಥವನೆಂದೂ, ಆ ಮೃಗವಿಂತಹುದೆಂದೂ ದೂರದಲ್ಲಿ ಬರುವಾಗಲೇ ಹೇಳಬಲ್ಲರು. ಒಂದು ವೇಳೆ ಕಣ್ಣಿಂದ ನೋಡದಿದ್ದರೂ ಬರುವಾಗ ಆಗುವ ಸಪ್ಪಳಿಂದಲೇ ಇಂಥಾದ್ದೆಂದು ಹೇಳುವರು. ಇವರಿಗೆ ಈ ಶಕ್ತಿಯಿರುವುದಕ್ಕೂ ನಮಗೆ ಇಲ್ಲದೆ ಹೋಗುವುದಕ್ಕೂ ಕಾರಣವೇನು? ಅವರು ತಮ್ಮ ಕಣ್ಣುಗಳನ್ನೂ ಕಿವಿಗಳನ್ನೂ ಅಡಿಗಡಿಗೆ ಉಪಯೋಗಿಸಲೇಬೇಕು. ನಮಗೆ ಆ ಆವಶ್ಯಕತೆಯಿಲ್ಲ. ಇಷ್ಟೇಕೆ? ಅಕ್ಕಸಾಲೆಗೂ ಕಮ್ಮಾರನಿಗೂ ಇರುವ ತೋಳನ್ನೂ ಒಬ್ಬ ಉಪಾಧ್ಯಾಯನ ತೋಳನ್ನೂ ನೋಡೋಣ, ಮೊದಲ ನೆಯ ಇಬ್ಬರ ತೋಳು ದೊಣ್ಣೆಯಂತೆ ಗಟ್ಟಿಯಾಗಿಯೂ ದಪ್ಪವಾಗಿಯೂ ಮಾಂಸಪುಷ್ಟಿಯುಳ್ಳುದಾಗಿಯೂ ಇರುತ್ತದೆ, ಉಪಾಧ್ಯಾಯನ ತೋಳು ಸಣ್ಣಗೆ ಪುಷ್ಟಿ ಯಿಲ್ಲದೆ ನಿರ್ಬಲವಾಗಿರುವುದು. ಇದಕ್ಕೆ ಅವರವರು ಮಾಡತಕ್ಕ ಕೆಲಸವೇ ಕಾರಣವು. ಹೀಗೆಯೇ ಇಂದ್ರಿಯಪಾಟವಕ್ಕೆ ಆಯಾ ಇಂದ್ರಿಯಗಳನ್ನು ಯಾವಯಾವ ಮಾರ್ಗದಲ್ಲಿ ಬಳಸುತ್ತಿರಬೇಕೋ ಹಾಗೆ ಮಾಡುತ್ತ ಬರಬೇಕು. ಚಾಕು ಕತ್ತರಿಗಳನ್ನು ಉಪಯೋಗಿಸದೆ ಪೆಟ್ಟಿಗೆಯಲ್ಲಿ ಮುಚ್ಚಿಟ್ಟರೆ ತುಕ್ಕು ಹಿಡಿದು ಕೆಲಸಕ್ಕೆ ಬಾರದೆ ಹೋಗುವುವು. ಹಾಗೆಯೇ ನಮ್ಮಂಗಗಳನ್ನು ತಕ್ಕ ರೀತಿಯಲ್ಲಿ ಉಪಯೋಗಿಸದೆ ಬಿಟ್ಟರೆ, ಅವುಗಳ ಶಕ್ತಿ ಕುಂದಿ ಅನಾರೋಗ್ಯವುಂಟಾಗುವುದು, ಆದುದರಿಂದಲೇ ಬಗೆಬಗೆಯ ಅಂಗಸಾಧನೆಗಳು ಏರ್ಪಟ್ಟಿರುವುವು. ಇವುಗಳಲ್ಲಿ ನಡೆವುದು ಅತಿ ಸುಲಭವಾದುದು. ಸಂಚಾರವನ್ನು ಸಾಧ್ಯವಾದರೆ ಯಾವುದಾದರೂ ಒಂದುದ್ದೇಶದೊಡನೆ ಮಿತ್ರರೊಡಗೂಡಿ ಬಲು ವೇಗವಾಗಿ ಮಾಡಬೇಕು; ಇಲ್ಲದಿದ್ದರೆ ಇದು ಅಷ್ಟು ಫಲಕಾರಿಯಾಗದು, ಕುದುರೆಸವಾರಿ, ಈಜುವುದು ಬಹಳ ಒಳ್ಳೆಯ ಸಾಧನೆಗಳು, ಗರಡಿಯ