ಪುಟ:ಪ್ರಬಂಧಮಂಜರಿ.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೪ ಪ್ರಬಂಧಮಂಜರಿ-ಎರಡನೆಯ ಭಾಗ ಸಾಮು ಎಲ್ಲಾ ಅಂಗಗಳಿಗೂ ಸಾಧನೆಯಾಗುವಂತೆ ಮಾಡುವುದು, ಇದರಲ್ಲಿ «ದಂಡೆ'ಯೆಂಬುದು ಬಲು ಪ್ರಸಿದ್ಧವಾದುದು. ದಂಡೆಯಲ್ಲಿ ಮೈಯ ಭಾರವನ್ನೆಲ್ಲ ಕೈಗಳ ಮೇಲೂ ಅಂಗುಷ್ಠಗಳ ಮೇಲೂ ಬಿಟ್ಟು ದೇಹವ. ನ್ನೆಲ್ಲಾ ಎಡಕ್ಕೂ ಬಲಕ್ಕೂ ಮೇಲಕ್ಕೂ ಕೆಳಕ್ಕೂ ತಿರುಗಿಸಬೇಕು. ಇದರಿಂದ ಅಂಗಗಳಿಗೂ ಮಾಂಸಖಂಡಗಳಿಗೂ ಒಳ್ಳೆಯ ಸಾಧನೆಯಾಗಿ ಬಲ ಬರು. ವುದು, ಎದೆ ಅಗಲವಾಗಿ ಗಟ್ಟಿಯಾಗುವುದು. ಅಂಗಸಾಧನೆಗಾಗಿ ನಮ್ಮ - ವರು ಪೂರ್ವದಿಂದಲೂ ಬಗೆಬಗೆಯ ಆಟಗಳನ್ನು ಏರ್ಪಡಿಸಿರುವರು. ಓಟ, ಚಂಡಾಟ, ಗುಡುಗು, ಚಿಣ್ಣೆಕೋಲು, ಲಗ್ಗೆ,ನಿಡುಗವಣೆ, ಕಣ್ಣು ಮುಚ್ಚಾಲೆ, ಕುಣಿಗಾಲು ಮುಂತಾದುವು ಬಾಲರಿಗುಚಿತವಾದುವು. ಮಲ್ಲ ಯುದ್ದ, ಕಟ್ಟಿಗೆ, ಪಟಾಕತ್ತಿ, ಗದ್ದೆ ಗಳ ವರಸೆ ಮೊದಲಾದುದು ಜಟ್ಟಿಗಳಿಗೆಯೋಗ. ಈಚೆಗೆ ಕ್ರಿಕೆಟ್, ಫುಟ್ ಬಾಲ್, ಹಾರಿಸಾಂಟಲ್ ಬಾರ್, ಪ್ಯಾರಲಲ್ ಬಾರ್, ಲಾನ್ ಟೆನಿಸ್ ಮೊದಲಾದ ಇಂಗ್ಲಿಷ್ ಆಟಗಳು ಸ್ಕೂಲುಗಳಲ್ಲಿ ಪ್ರಚಾರಕ್ಕೆ ಬಂದಿವೆ. ಇವುಗಳನ್ನೆಲ್ಲಆಡಬೇಕಾದರೆ, ಇತರರಜತೆಯಲ್ಲಿಯೇ ಆಡಬೇಕು. ಆದುದರಿಂದ ಇವು ಅಂಗಗಳಿಗೆ ಸಾಧನೆಯನ್ನು ಕೊಡುವುದುಲ್ಲದೆ ಮನಸ್ಸಿಗೆ ಆಹ್ಲಾದಕರಗಳಾಗಿರುವುವು. ಇದಲ್ಲದೆ ಗೆಲ್ಲುವ ಆಶೆ. ಯಿಂದ ಆಡುವವರಲ್ಲಿ ಹುರುಡು ಹುಟ್ಟಿ ಅವರಿಗೆ ಈ ಆಟಗಳಲ್ಲಿ ಉತ್ಸಾಹವೂ ಅಭಿರುಚಿಯೂ ಉಂಟಾಗುವುವು ಇಂತಹ ಆಟಗಳೇ ಉತ್ತಮವಾದುವು. ಅಂಗಸಾಧನೆಯಿಂದ ಶರೀರದ ಎಲ್ಲಾ ಅಂಗಗಳೂ ಮಾಡತಕ್ಕ ಕೆಲಸಗಳನ್ನು ಸುಲಭವಾಗಿಯೂ ಶೀಘ್ರವಾಗಿಯೂ ಚೆನ್ನಾಗಿಯೂ ಮಾಡು. ವವು.ರಕ ವ ಬೇಗಬೇಗ ಹರಿವುದು, ನಿರ್ಮಲವಾದ ವಾಯು ಶಾಸಕೋಶಗಳಿಗೆ ಹೆಚ್ಚು ಹೆಚ್ಚಾಗಿ ಹೋಗುತ್ತಿರುವುದು, ಶಾರೀರ ಕಲ್ಕ ಷ ಗಳು ಉಸಿರಲ್ಲೂ ಬೆವರಲ್ಲೂ ಹೆಚ್ಚಾಗಿ ಈಚೆಗೆ ಬರುವುವು. ಶರೀರದಲ್ಲಿ. ಶಾಖವು ಹೆಚ್ಚಿ ಮನಸ್ಸಿಗೆ ಹರ್ಷವೇರುವುದು. ಜೀರ್ಣ ಶಕ್ತಿ ಬಲವಾಗುವುದು. ಚಟವಟಿಕೆ, ಧೈರ್ಯ, ಸಾಮರ್ಥ್ಯ, ಉತ್ಸಾಹ, ಸಹನೆ ಮೊದಲಾದ ಗುಣಗಳು ವೃದ್ಧಿ ಹೊಂದುವುವು. ಬುದ್ದಿ ಯು ವಿಕಾಸವನ್ನು ಹೊಂದುವುದು, ಮೈಯ ಆದ್ಯಂತವಾಗಿ ತುಂಬಿಕೊಂಡು ಹೊಳೆವುದು. ನಮ್ಮ ದೇಹವು ನಾನಾ ವಿಧವಾದ ರೋಗಗಳಿಗೊಳಗಾಗಿ ನವೆಯದೆ ನಾವು ಬಹುಕಾಲ ಸುಖದಿಂದ ಬದುಕಬಹುದು.