ಪುಟ:ಪ್ರಬಂಧಮಂಜರಿ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೮ ಪ್ರಬಂಧಮಂಜರಿ-ಎರಡನೆಯ ಭಾಗ ದಲ್ಲಿಯೂ ನಡೆವುದು, ನೋಡಿದುದನ್ನು ನೋಡಿದಂತೆಯೇ ವರ್ಣಿಸುವುದು, ಕೇಳಿದುದನ್ನು ಕೇಳಿದಂತೆಯೇ ಹೇಳುವುದು, ಮಾಡಿದುದನ್ನು ಮಾಡಿದಂತೆಯೇ ಸ್ವಲ್ಪವೂ ಹೆಚ್ಚು ಕಡಮೆಯಿಲ್ಲದೆ ನುಡಿವುದು ಇವು ಮೊದಲಾದುವು ಸತ್ಯದ ಬಗೆಬಗೆಯ ಸ್ವರೂಪಗಳು, ಬಹಳ ನಷ್ಟ ಪಟ್ಟಿರುವವನನ್ನು ಕಂಡು ಅಯ್ಯೋ ಪಾಪ ಎಂದು ಬಾಯಿಯಲ್ಲಿ ಅನುತಾಪಪಡುತ್ತಾ, ಮನಸ್ಸಿನಲ್ಲಿ ಹಾ. ಗೆಯೇ ಆಗಬೇಕು ಎಂದು ಯೋಚಿಸುವುದೂ, ಯಾವ ಸಹಾಯ ಬೇಕಾ. ದರೂ ಮಾಡುವುದಾಗಿ ವಾಗ್ದಾನಮಾಡಿ ಸಹಾಯವನ್ನು ಮಾಡಬೇಕಾಗಿ ಬಂದಾಗ ನೆವಗಳನ್ನು ಹೇಳಿ ತಪ್ಪಿಸಿಕೊಳ್ಳುವುದೂ, ಯೋಗ್ಯತೆಯಿಲ್ಲದಿದ್ದರೂ ಮಾತು ಉಡುಪು ಮುಂತಾದುವುಗಳಲ್ಲಿ ಆಡಂಬರ ಮಾಡಿಕೊಂಡು ಬಲುಗಟ್ಟಿಗನಂತೆ ನಟಿಸುವುದೂ ಸತ್ಯಕ್ಕೆ ವಿರುದ್ಧಗಳಾದ ಕಾರ್ಯಗಳು. ಇವುಗಳಿಗೆಲ್ಲ ಮೋಸವೆಂದು ಹೆಸರು. ಮರವಿನಿಂದಾಗಲಿ, ಅಜ್ಞಾನದಿಂದಾಗಲಿ, ಸುಳ್ಳುಹೇಳಿದರೆ ಅದನ್ನು ಕ್ಷಮಿಸಬಹುದು; ಮೋಸಮಾಡುವ ಉದ್ದೇಶದಿಂದ ಆಡಿದ ಸುಳ್ಳು ಪರಮನಿಂದ್ಯವಾದುದು. ಆದುದರಿಂದಲೇ ನ್ಯಾಯಸ್ಥಾನಗಳಲ್ಲಿ ಇಂತಹ ಸುಳ್ಳಿಗೆ ತಕ್ಕ ಶಿಕ್ಷೆಯನ್ನು ವಿಧಿಸುವರು. ಸತ್ಯಮೇವ ಜಯತೆ, ನಾನೃತಂ' ಎಂಬ ಉಪನಿಷದ್ವಾಕ್ಯದಂತೆ ಸತ್ಯಕ್ಕೆ ಯಾವಾಗಲೂ ಗೆಲವು ಉಂಟಾಗುವುದು; ಸುಳ್ಳಿಗೆ ಎಂದಿಗೂ ಜಯ. ವಾಗಲಾರದು. ಸುಳಾಡಿದುದರಿಂದ ಸ್ವಲ್ಪ ಕಾಲ ಇತರರನ್ನು ಮೋಸಮಾಡಿ ಸ್ವಪ್ರಯೋಜನವನ್ನು ಪಡೆಯಬಹುದು; ಆದರೆ ಕೊನೆಗೆ ಸುಳ್ಳು ಹೊರಪಟ್ಟು ಅದರಿಂದ ತಕ್ಕ ಅವಮಾನವು ಆಗಿಯೇ ಆಗುವುದು ಹೇಗೆಂದರೆ, ಹೊರು ಗಿನಆಡಂಬರದಿಂದ ಇಲ್ಲದಿರುವ ಯೋಗ್ಯತೆಯನ್ನು ತೋರಿಸಿಕೊಳ್ಳುವುದಕ್ಕೆ ಮೊದಲುಮಾಡಿದರೆ, ಎಷ್ಟು ದಿನದ ವರೆಗೆ ನಡೆದೀತು? ತಾಮ್ರಕ್ಕೆ ಬೆಳ್ಳಿಯ ಮುಲಾಮು ಮಾಡಿದರೆ, ಬೆಳ್ಳಿಯಂತೆ ಎಲ್ಲಿಯತನಕ ಕಂಡೀತು? ಅಂತಹ ತಾಮ್ರವನ್ನು ಬಳಸಿಕೊಳ್ಳುತ್ತಾ ಬಂದರೆ, ಅದರ ನಿಜವಾದ ಬಣ್ಣವು ಸ್ವಲ್ಪ. ದಲ್ಲಿಯೇ ಗೊತ್ತಾಗುವುದು, - ಸುಳ್ಳಾಡುವುದು ಬಹಳ ಕಷ್ಟ; ಇದ್ದುದನ್ನು ಇದ್ದ ಹಾಗೆ ಹೇಳುವುದು ಸುಲಭ, ಒಂದು ಸುಳ್ಳಾಡಿದರೆ, ಅದನ್ನು ಸಾಧಿಸಲು ಹಲವು ಸುಳ್ಳುಗಳನ್ನು ಆಡಬೇಕಾಗುವುದು ಸತ್ಯವಾದಮಾತು ಬಾಯಿಯಲ್ಲಿ ಧಾರಾಳವಾಗಿ ತಡೆ